Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗಣೇಶ ಹಬ್ಬಕ್ಕೆ ₹5000 ದೇಣಿಗೆ ಘೋಷಿಸಿದ ಯತ್ನಾಳ್

 

 

ವಿಜಯಪುರ :
ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದ್ದು, ಇನ್ನೇನು ಮುಂದಿನ ಸೋಮವಾರ ಹಬ್ಬ ಜೋರಾಗಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನೂ ಭಕ್ತರು ಮಾಡಿಕೊಳ್ಳುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಗಣೇಶ ಚತುರ್ಥಿ ಅತ್ಯಂತ ಸಡಗರದಿಂದ ನಡೆಯಲಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಸಂಘಟನೆ ಮೂಲಕ ಹಬ್ಬ ಆಚರಿಸುತ್ತಾರೆ. ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಂಪರ್ ಆಫರ್ ಘೋಷಿಸಿದ್ದಾರೆ.

ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಗಣೇಶ ಚತುರ್ಥಿ ಆಚರಿಸುವ ಭಕ್ತ ಮಂಡಳಿಗಳಿಗೆ ಭರವಸೆ ಒಂದನ್ನು ನೀಡಿದ್ದಾರೆ. ಇನ್ನು ಈ ಕುರಿತು ಟ್ವೀಟ್ ಮಾಡಿರುವ ಅವರು, ಸಂಪೂರ್ಣ ಮಾಹಿತಿ ನೀಡಿದ್ದಾರೆ. ಪದೇ ಪದೆ ತಮ್ಮ ಭಾಷಣದ ಮೂಲಕ ಸುದ್ದಿಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ತಮ್ಮ ಘೋಷಣೆ ಮೂಲಕ ಸದ್ದು ಮಾಡುತ್ತಿದ್ದಾರೆ. ಹಾಗಾದರೆ ಬಸನಗೌಡ ಪಾಟೀಲ್ ಯತ್ನಾಳ್ ಕೊಟ್ಟಿರುವ ಮಾತು ಏನು? ಬಸನಗೌಡ ಯತ್ನಾಳ್ ಮಾಡಿರುವ ಟ್ವೀಟ್‌ನ ಪೂರ್ಣ ವಿವರ ಇಲ್ಲಿದೆ.

ಶಾಸಕ ಯತ್ನಾಳ್ ಟ್ವೀಟ್ ಇಲ್ಲಿದೆ!
1. ವಿಜಯಪುರದ ಪ್ರತಿ #ಗಜಾನನ_ಮಂಡಳಿಗಳಿಗೆ ಸ್ವಾತಂತ್ರ #ವೀರ_ಸಾವರ್ಕರ್ ರವರ ಭಾವಚಿತ್ರ ಹಾಗೂ ತಲಾ ₹ 5,000 ದೇಣಿಗೆ ನಮ್ಮ ವತಿಯಿಂದ ನೀಡಲಾಗುವುದು .

 

2. ಗಜಾನನ ಮಂಡಳಿಗಳ ಪದಾಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಣೇಶನ ದೇಣಿಗೆಗಾಗಿ ಶಾಸಕರ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ, ನಿಮ್ಮ ನಿಮ್ಮ ಪೆಂಡಾಲ್ ಗಳಲ್ಲಿಯೇ ಬಂದು ನಮ್ಮ
#ಸ್ವಾಮಿ_ವಿವೇಕಾನಂದ_ಸೇನೆಯ ಪದಾಧಿಕಾರಿಗಳು ಪ್ರತಿ ಗಣೇಶ ಮಂಡಳಿಗೆ ತಲಾ ₹5,000 ದೇಣಿಗೆ ನೀಡಲಿದ್ದಾರೆ.

3. ಯಾವ ಅನುಮತಿಗಳಿಗೂ ಕಚೇರಿಯಿಂದ, ಕಚೇರಿಗೆ ಅಲೆದಾಡುವ ಅವಶ್ಯಕತೆಯಿಲ್ಲ, ಅಧಿಕಾರಿಗಳೇ ನಿಮ್ಮ ಬಳಿ ಬಂದು ಅನುಮತಿ ನೀಡುತ್ತಾರೆ. ಯಾವುದೇ ಅಧಿಕಾರಿ ಅನುಮತಿಗೆ ಕಿರುಕುಳ ನೀಡಿದರೆ ನನ್ನ ಕಚೇರಿಯ ಗಮನಕ್ಕೆ ತರಬೇಕು.

4. ಈ ಬಾರಿ ಸ್ವಾಮಿ ವಿವೇಕಾನಂದ ಸೇನೆಯಿಂದ ಆಚರಿಸಲ್ಪಡುವ ಗಜಾನನ ಮಹಾಮಂಡಳದ ವೇದಿಕೆಗೆ "ಸನಾತನ ಹಿಂದೂ ವೇದಿಕೆ" ಎಂದು ನಾಮಕರಣ ಮಾಡಲಾಗುವುದು.

5. ವಿಜಯಪುರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲಿದೆ, ಯಾವ ನಿರ್ಬಂಧಗಳೂ ಇರುವುದಿಲ್ಲ.

ಹೀಗೆ ಟ್ವೀಟ್ ಮಾಡಿದ್ದಾರೆ ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೇಳಿಕೆ ಹಾಗೂ ಟ್ವೀಟ್ ಮೂಲಕವೇ ಸದಾ ಸದ್ದು ಮಾಡುವ, ಜೊತೆಗೆ ವಿವಾದದಕ್ಕೆ ಗುರಿಯಾಗುವ ಯತ್ನಾಳ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಯತ್ನಾಳ್ ಟ್ವೀಟ್ ಬಗ್ಗೆ ಈಗ ಪರ-ವಿರೋಧದ ಚರ್ಚೆ ಶುರುವಾಗಿದೆ. ಮತ್ತೊಂದು ಕಡೆ ಹಬ್ಬದ ಸಿದ್ಧತೆಯಲ್ಲಿರುವ ವಿಜಯಪುರ ವಿಧಾನಸಭಾ ಕ್ಷೇತ್ರದ ಗಜಾನನ ಭಕ್ತ ಮಂಡಳಿಗೆ ಶಾಸಕರಿಂದ ಭರವಸೆ ಸಿಕ್ಕಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ