ಜನಜೀವಾಳ ಜಾಲ: ಬೆಳಗಾವಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೆಎಲ್ಇ ಸಂಸ್ಥೆಯ ಜಿಎ ಪ್ರೌಢಶಾಲೆ ಈ ಸಲ ಅದ್ವಿತೀಯ ಸಾಧನೆ ಮಾಡಿದೆ.
ಒಟ್ಟು 214 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 212 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಸೋಫಿಯಾನ್ ದೇಗಿನಹಾಳ 596, ನಿಧಿ ವಿರುಪಾಕ್ಷಿ 573, ರಾಜೇಶ್ವರಿ ಪಡಗಿ 569, ಮಾನಸಾ ಪಾಟೀಲ 566, ಸುಚಿತ ಹಲವಾಯಿ 564 ಅಂಕ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕೆಎಲ್ ಇ ಸಂಸ್ಥೆಯ ಗೌರವಾನ್ವಿತ ಕಾರ್ಯಾಧ್ಯಕ್ಷರಾದ ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರಾದ ಅಮಿತ್ ಕೋರೆ, ಆಡಳಿತ ಮಂಡಳಿ, ಆಜೀವ ಸದಸ್ಯರು, ಉಪ ಪ್ರಾಚಾರ್ಯರು, ಶಿಕ್ಷಕರು, ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.