Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಯಕ್ಷಗಾನ ವಿಶಿಷ್ಟವಾದ ಕಲಾಮಾಧ್ಯಮ: ಡಾ. ಧರಣೀದೇವಿ ಮಾಲಗತ್ತಿ

 

ಬೆಂಗಳೂರು: 'ಯಕ್ಷಗಾನ ಎಂಬುದು ಕೇವಲ ಕಲೆಯಲ್ಲ, ಅದೊಂದು ವಿಸ್ಮಯದ ಜಗತ್ತು. ಅಲ್ಲಿ ಎಲ್ಲವೂ ಇದೆ. ಗಾಯನ, ನೃತ್ಯ, ಕಥನ, ಜೀವನ ಎಲ್ಲವೂ ಒಳಗೊಂಡ ವಿಶಿಷ್ಟವಾದ ಮಾಧ್ಯಮವದು. ಯಕ್ಷಗಾನವೇ ಉಸಿರಾಗಿರುವ ಕರಾವಳಿಯ ನೆಲದ ಸಂಸ್ಕೃತಿಯ ಹುಟ್ಟಿ ಬೆಳೆದಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ತುಂಬ ಅಭಿಮಾನವೆನಿಸುತ್ತದೆ' ಎಂದು ಕನ್ನಡ-ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಹೇಳಿದರು.

ಹವ್ಯಾಸಿ ಯಕ್ಷಬಳಗ, ಪುತ್ತೂರು ಸಂಸ್ಥೆಯು ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸಹಯೋಗ ಮತ್ತು ಥಿಯೇಟರ್ ಯಕ್ಷ [ರಿ.] ಉಡುಪಿ ಇದರ ಸಹಕಾರದೊಂದಿಗೆ ಇತ್ತೀಚೆಗೆ [ಫೆಬ್ರವರಿ 13, 2024) ರಂದು ಬೆಂಗಳೂರಿನ ಕನ್ನಡಭವನದಲ್ಲಿ ಆಯೋಜಿಸಲಾದ ವಚನಗಳ ಯಕ್ಷಗಾಯನ ಮತ್ತು ಪ್ರಯೋಗಾತ್ಮಕ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಾಲ್ಯದಲ್ಲಿ ಯಕ್ಷಗಾನ ಬಯಲಾಟಗಳನ್ನು ವೀಕ್ಷಿಸುತ್ತ ಬೆಳೆದ ದಿನಗಳನ್ನು ನೆನಪಿಸಿಕೊಂಡ ಡಾ. ಧರಣೀದೇವಿ, 'ಯಕ್ಷಗಾನ ಎಲ್ಲವನ್ನೂ ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಳ್ಳುತ್ತ ಸಮಾಜಮುಖಿ ಕಲೆಯಾಗಿ ಬೆಳೆದುಬಂದಿದೆ. ಯಕ್ಷಗಾನವನ್ನು ಜನರ ಕಲೆಯಾಗಿ ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ' ಎಂದರು.

ಆರಂಭದಲ್ಲಿ ಥಿಯೇಟರ್ ಯಕ್ಷ [ರಿ.] ಸಂಸ್ಥೆಯ ಸಂಚಾಲಕ ಸುನಿಲ್ ಪಲ್ಲಮಜಲು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗವತ ವಿಶ್ವಾಸ್‌ ಕರ್ಬೆಟ್ಟು ಅವರು ಬಸವಣ್ಣ ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ಯಕ್ಷಗಾನ ಶೈಲಿಗೆ ಸಂಯೋಜಿಸಿ ಪ್ರಸ್ತುತಪಡಿಸಿದರು. ಮದ್ದೆಗಾರ ಸ್ಕಂದ ಕೊನ್ನಾರ್, ಸಮರ್ಥ ಉಡುಪ ಕತ್ತಲ್‌ಸಾ‌ರ್ ಮತ್ತು ಪಿಟೀಲು ವಿದ್ವಾನ್ ಪ್ರಣೀತ್ ಬಳ್ಳಕ್ಕರಾಯ ಹಿಮ್ಮೇಳದಲ್ಲಿ ಸಹಕರಿಸಿದರು. ಸಂಯೋಜಕ. ಹಿರಿಯ ವೇಷಧಾರಿ ಶಶಿಕಿರಣ್ ಕಾವು ಅವರು ಮುಖ್ಯ ಅತಿಥಿಗಳನ್ನು ಗೌರವಿಸಿದರು. ನಾಗೇಶ್ ಬೈಲೂರು ಧನ್ಯವಾದ ಸಮರ್ಪಿಸಿದರು. ಬಳಿಕ, ಪೃಥ್ವಿರಾಜ ಕವತ್ತಾರು ಅವರ ನಿರ್ದೇಶನದಲ್ಲಿ ಥಿಯೇಟರ್ ಯಕ್ಷ [ರಿ.] ತಂಡದವರು 'ಶ್ರೀಮನೋಹರ ಸ್ವಾಮಿ ಪರಾಕು' ಯಕ್ಷಗಾನವನ್ನು ಪ್ರಸ್ತುತಪಡಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ