Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದ್ವಾರಕೆಯ ರಹಸ್ಯವಾದರೂ ಏನು ?

ಸಾಕ್ಷಾತ್ ಶ್ರೀ ಕೃಷ್ಣನ ಶರೀರ ಸಮುದ್ರದಲ್ಲಿ ಮುಳುಗಿದ ದ್ವಾರಕೆಯಲ್ಲಿ ಇದೆಯೇ ?ಸಂಶೋಧನೆ ಹೋದ ವಿಜ್ಞಾನಿಗಳಿಗೆ ಕಂಡಿದ್ದೇನು ?

ಧಾರ್ಮಿಕ : ಕೃಷ್ಣಾವತಾರದ ಕಥೆಗಳಲ್ಲಿ ದ್ವಾರಕ ನಗರದ ಬಗ್ಗೆ ಕೂಡ ವರ್ಣನೆ ಕಂಡುಬರುತ್ತದೆ. ಪುರಾಣಗಳ ಪ್ರಕಾರ, ಈ ನಗರವನ್ನು ಸಾಕ್ಷಾತ್ ಶ್ರೀ ಕೃಷ್ಣ ನಿರ್ಮಾಣ ಮಾಡಿದ್ದಾರೆ. ಮಹಾಭಾರತಕ್ಕೆ ಸಂಬಂಧಪಟ್ಟ ಈ ನಗರದ ಬಗ್ಗೆ ನಾವು ಬರೀ ಕಲ್ಪನೆ ಮಾಡಿಕೊಳ್ಳಬಹುದು ಅಷ್ಟೇ. ವಾತ್ಸವದಲ್ಲಿ ಇದು ಕಂಡುಬಂದರೆ ಬಹಳ ಥ್ರಿಲ್ಲಿಂಗ್ ಆಗಿ ಇರುತ್ತದೆ ಹಾಗೂ ಇದು ನಿಜ ಎಂದು ಸಾಬೀತು ಮಾಡಲು ಸಾಕ್ಷಿಯಾಗುತ್ತದೆ.

ಚರಿತ್ರೆಕಾರರ ಪ್ರಕಾರ, ದ್ವಾರಕಾ ನಗರವು ಸರಿಸುಮಾರು 9,000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಪುರಾಣದಲ್ಲಿ ತಿಳಿಸಿದ ಪ್ರಕಾರ ಮಹಾಭಾರತದ ಕುರುಕ್ಷೇತ್ರ ಯುದ್ದ ನಡೆದ ಬಳಿಕ ಮೂವತ್ತಾರು ವರ್ಷಗಳ ನಂತರ ಈ ನಗರ ಸಮುದ್ರದಲ್ಲಿ ಮುಳುಗಿ ಹೋಗಿದೆ ಎಂದು ಎಲ್ಲರಿಗೂ ಗೊತ್ತು. ಈ ರೀತಿ ಆಗಲು ಮುಖ್ಯ ಕಾರಣ ಗಾಂಧಾರಿ ಶ್ರೀ ಕೃಷ್ಣನಿಗೆ ಕೊಟ್ಟ ಶಾಪ. ಹಾಗೆಯೇ ಋಷಿಮುನಿ ಒಬ್ಬರು ಶ್ರೀಕೃಷ್ಣನ ಮಗನಾದ ಸಾಂಬಾನಿಗೆ ಕೊಟ್ಟ ಶಾಪ ಎಂದು ಪುರಾಣದಲ್ಲಿ ಹೇಳಲಾಗಿದೆ.

ಸುಮಾರು 5,000 ವರ್ಷಗಳ ಹಿಂದೆಯೇ ಈ ದ್ವಾರಕಾ ನಗರ ಮುಳುಗಡೆಯಾಗಿದೆ. ಈ ದ್ವಾರಕಾ ನಗರದ ಅವಶೇಷಗಳು ಈಗಲೂ ಇದೆ ಎಂದು ಹೇಳಲಾಗುತ್ತಿತ್ತು, ಆದರೆ ಪ್ರಧಾನಿ ಮೋದಿಯವರು ಇಲ್ಲಿಯ ದೇವಾಲಯದಲ್ಲಿ ಶ್ರೀ ಕೃಷ್ಣನ ದರ್ಶನ ಪಡೆಯುವ ಮೂಲಕ ಮತ್ತೆ ದ್ವಾರಕಾ ನಗರ ಟ್ರೆಂಡ್‌ನಲ್ಲಿದೆ.

ಕಥೆಗಳ ಆಧಾರದ ಮೇಲೆ ಚರಿತ್ರಕಾರರು, ಈ ನಗರವು ನೀರಿನಲ್ಲಿ ಮುಳುಗಿ ಹೋಗಿದೆ ಎನ್ನುವುದನ್ನು ನಂಬಿ ಅದನ್ನು ಕಂಡುಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಇದರ ಅವಶೇಷಗಳು ಗುಜರಾತಿನ ಸಮೀಪದ ಅರೇಬಿಯ ಸಮುದ್ರದಲ್ಲಿ ಸಿಕ್ಕಿವೆ. ದ್ವಾರಕ ನಗರದ ವಿಶೇಷತೆ ಏನೆಂದರೆ ಈ ನಗರಕ್ಕೆ ಅನೇಕ ದ್ವಾರಗಳು ಇವೆ. ಹಾಗು ಚರಿತ್ರೆಕಾರರ ಕೊಟ್ಟಿರುವ ರಿಪೋರ್ಟ್ ಪ್ರಕಾರ, ಆ ದ್ವಾರಗಳಿಗೆ ಸಂಬಂಧಪಟ್ಟ ಅವಶೇಷಗಳು ಇನ್ನು ಇದೆ ಎಂದು ಗೊತ್ತಾಗುತ್ತದೆ.

ಗುಜರಾತಿಗೆ ಪಶ್ಚಿಮ ಭಾಗದಲ್ಲಿ ಸಮುದ್ರದ ದಡದಲ್ಲಿ ಇಂದಿಗೂ ಧಾರ್ಮಿಕ ಕ್ಷೇತ್ರಗಳು ಬಹಳಷ್ಟಿವೆ. ದ್ವಾರಕ ಭಾರತ ದೇಶದಲ್ಲಿನ ನಾಲ್ಕು ಧಾಮಗಳಲ್ಲಿ ಒಂದು. ಭಾರತದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಇದು ಕೂಡ ಒಂದು ಎನ್ನುವ ಖ್ಯಾತಿಯನ್ನು ಪಡೆದಿದೆ. ಎರಡು ದ್ವಾರಕ ನಗರಗಳು ಇವೆ ಎಂದು ಹೇಳುತ್ತಾರೆ. ಅದರಲ್ಲಿ ಒಂದು ಗೋಮತಿ ನದಿಯ ತಟದ ಮೇಲೆ ಇದೇ, ಇದನ್ನು ಧಾಮ ಎಂದು ಕರೆಯಲಾಗುತ್ತದೆ. ಇನ್ನೊಂದು ಸಮುದ್ರದ ಗರ್ಭದಲ್ಲಿರುವುದೇ ದ್ವಾರಕಾಪುರಿ.

ಅಲ್ಲಿ ಶ್ರೀ ಕೃಷ್ಣನ ದೇಹವಿದೆ ಎನ್ನುವ ಪ್ರತೀತಿ ಈಗಲೂ ಇದೆ. ಇಲ್ಲಿಗೆ ಸೇರಬೇಕು ಎಂದರೆ ಸಮುದ್ರ ಮಾರ್ಗದಿಂದ ಮಾತ್ರ ಹೋಗಬೇಕಾಗುತ್ತದೆ. 2005ರಲ್ಲಿ ಭಾರತದ ಆರ್ಕಿಯಾಲಜಿಸ್ಟ್'ಗಳ ಮೂಲಕ ದ್ವಾರಕ ನಗರದ ಇರುವುದನ್ನು ಕಂಡು ಕೊಳ್ಳಲಾಗಿದೆ.

ಕಳೆದರಡು ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ದ್ವಾರಕಾದಲ್ಲಿ ಸಮುದ್ರದ ಆಳಕ್ಕೆ ತೆರಳಿ ಮುಳುಗಿರುವ ದ್ವಾರಕಾ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ಅನುಭವ ನನಗೆ ಭಾರತದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಬೇರುಗಳೊಂದಿಗೆ ಅಪರೂಪದ ಮತ್ತು ಆಳವಾದ ಸಂಪರ್ಕವನ್ನು ಒದಗಿಸಿದೆ ಎಂದು ಹೇಳಿದರು. ಶ್ರೀಕೃಷ್ಣನ ಕಾರ್ಯಕ್ಷೇತ್ರವಾದ ದ್ವಾರಕಾಧಾಮಕ್ಕೆ ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ