Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪಶ್ಚಿಮ ಬಂಗಾಳ ಚುನಾವಣೆ : ಈ ಬಾರಿ ಗೆಲುವು ಯಾರಿಗೆ ?

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಮತಗಟ್ಟೆ ಸಮೀಕ್ಷೆಗಳು (Exit Polls) ಹೊರಬಂದಿದ್ದು ನಾಲ್ಕು ಪ್ರಮುಖ ಸಮೀಕ್ಷೆಗಳು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಬಿಜೆಪಿ ಭೇದಿಸಲಿದೆ ಎಂದು ಭವಿಷ್ಯ ನುಡಿದಿದ್ದರೆ, ಎರಡು ಸಮೀಕ್ಷೆಗಳು ತೃಣಮೂಲ ಕಾಂಗ್ರೆಸ್ (TMC) ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ. ಒಟ್ಟಾರೆಯಾಗಿ, ಬಂಗಾಳದಲ್ಲಿ ಈ ಬಾರಿ ‘ಫೋಟೋ ಫಿನಿಶ್’ ಹೋರಾಟ ಕಂಡುಬರುತ್ತಿದೆ ಎಂದು ನಿರೀಕ್ಷಿಸಲಾಗಿದೆ.

ಸಮೀಕ್ಷೆಗಳ ಅಂಕಿ-ಅಂಶಗಳು ಏನು ಹೇಳುತ್ತವೆ?
ಬಂಗಾಳದಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷಕ್ಕೆ 148 ಸ್ಥಾನಗಳ ಅಗತ್ಯವಿದೆ. ನಾಲ್ಕು ಸಮೀಕ್ಷೆಗಳು ಬಿಜೆಪಿಗೆ 146 ರಿಂದ 175 ಸ್ಥಾನಗಳನ್ನು ನೀಡಿವೆ. ಎರಡು ಸಮೀಕ್ಷೆಗಳು ಮಮತಾ ಬ್ಯಾನರ್ಜಿ ಅವರ ಪುನರಾಗಮನವನ್ನು ಅಂದಾಜಿಸಿದ್ದು, ಟಿಎಂಸಿಗೆ 177 ರಿಂದ 205 ಸ್ಥಾನಗಳನ್ನು ನೀಡಿವೆ.

ಯಾವ ಸಮೀಕ್ಷೆ ಯಾರಿಗೆ ಎಷ್ಟು?:
ಮ್ಯಾಟ್ರಿಜ್ (Matrize) ಮತಗಟ್ಟೆ ಸಮೀಕ್ಷೆಯು ಬಿಜೆಪಿಗೆ 146-161 ಸ್ಥಾನಗಳು ಬರಲದೆ ಎಂದು ಭವಿಷ್ಯ ನುಡಿದರೆ ಟಿಎಂಸಿ 125-140 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ.
ಪಿ-ಮಾರ್ಕ್ (PMarq) ಮತಗಟ್ಟೆ ಸಮೀಕ್ಷೆಯು ಬಿಜೆಪಿಗೆ  150-175 ಸ್ಥಾನಗಳು ಬರಬಹುದು ಎಂದು ಹೇಳಿದರೆ ಟಿಎಂಸಿಗೆ 118-138 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಕಂಡುಬಂದಿದೆ ಎಂದು ಹೇಳಿದೆ.

ಚಾಣಕ್ಯ ಸ್ಟ್ರಾಟಜೀಸ್ ಮತಗಟ್ಟೆ ಸಮೀಕ್ಷೆಯು ಬಿಜೆಪಿಗೆ 150-160 ಸ್ಥಾನಗಳನ್ನು ಪಡೆಯಬಹುದು ಎಂದು ಭವಿಷ್ಯ ನುಡಿದರೆ ಟಿಎಂಸಿಯು 130-140 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಿದೆ.
ಜೆವಿಸಿ (JVC ಮತಗಟ್ಟೆ ಸಮೀಕ್ಷೆಯು ಬಿಜೆಪಿ (138-159 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದರೆ ಟಿಎಂಸಿ 131-152 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ.
ಪೋಲ್ ಡೈರಿ ಮತಗಟ್ಟೆ ಸಮೀಕ್ಷೆಯು ಬಿಜೆಪಿಗೆ 142-171ರ ವರೆಗೆ ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಸಿದ್ದು,  ಹಾಗೂ ಟಿಎಂಸಿಗೆ 99-127 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ.
ಪೀಪಲ್ಸ್ ಪಲ್ಸ್ ಮತ್ತು ಜನ್ಮತ್ ಪೋಲ್ಸ್ ಮತಗಟ್ಟೆ ಸಮೀಕ್ಷೆಗಳು  ಟಿಎಂಸಿ ಭರ್ಜರಿ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.  ಪೀಪಲ್ಸ್ ಪಲ್ಸ್ ಟಿಎಂಸಿ 177-187  ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದರೆ ಬಿಜೆಪಿ 95-110 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಜನ್ಮತ್ ಪೋಲ್ಸ್ ಮತಗಟ್ಟೆ ಸಮೀಕ್ಷೆ 195-205 ಸ್ಥಾನಗಳಲ್ಲಿ ಗೆಲ್ಲಬಹುದು ಹಾಗೂ ಬಿಜೆಪಿ 80-90 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.

ಮತದಾರರ ಪಟ್ಟಿ ಪರಿಷ್ಕರಣೆ: ನಿರ್ಣಾಯಕ ಅಂಶ?
ಬಿಜೆಪಿ ನಾಯಕರು ಈ ಬಾರಿ ವಿಶೇಷ ತೀವ್ರ ಪರಿಷ್ಕರಣೆ (SIR) ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸುಮಾರು 91 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ (ಶೇ. 12ರಷ್ಟು ಇಳಿಕೆ). ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿನ ಹೆಸರುಗಳ ಇಳಿಕೆ ಟಿಎಂಸಿಗೆ ತಲೆನೋವಾಗಿದೆ. 2021ರ ಚುನಾವಣೆಯಲ್ಲಿ 57 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 8,000ಕ್ಕಿಂತ ಕಡಿಮೆ ಇತ್ತು, ಹೀಗಾಗಿ ಈ ಮತದಾರರ ಪಟ್ಟಿ ಬದಲಾವಣೆ ಫಲಿತಾಂಶವನ್ನು ಬುಡಮೇಲು ಮಾಡಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಆದರೆ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದೆ. ಮೇ 4ರ ಫಲಿತಾಂಶದವರೆಗೂ ಏನನ್ನೂ ಖಚಿತವಾಗಿ ಹೇಳಲಾಗದು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವಂತವಾಗಿ ಮಣ್ಣಿನಡಿ ಹೂತುಹಾಕಿದ್ದ ನವಜಾತ ಶಿಶುವನ್ನು ದೇವದೂತರಂತೆ ಬಂದು ಕಾಪಾಡಿದ ಮಕ್ಕಳು…!ಡಿಜೆ ಸೌಂಡ್ ಅಬ್ಬರಕ್ಕೆ ಹಾರ್ಟ್ ಅಟ್ಯಾಕ್ ಆಗಿ 140 ಕೋಳಿಗಳು ಸಾವು ; ದೂರು ದಾಖಲಿಸಿದ ಮಾಲೀಕ…!ಆಲಿಕಲ್ಲು ಮಳೆಯ ಅಬ್ಬರ; ಹಿಮದ ನಗರಿಯಂತಾದ ಸಿಲಿಕಾನ್ ಸಿಟಿಯ ಕೆಲ ಪ್ರದೇಶ…!ಪಶ್ಚಿಮ ಬಂಗಾಳ ಚುನಾವಣೆ : ಈ ಬಾರಿ ಗೆಲುವು ಯಾರಿಗೆ ?ಚುನಾವಣೆ : ತಮಿಳುನಾಡು, ಕೇರಳ, ಅಸ್ಸಾಂನಲ್ಲಿ ಗೆಲ್ಲುವುದು ಯಾರು..? ಎಕ್ಸಿಟ್‌ ಪೋಲ್‌ ಹೇಳುವುದೇನು..?ಬ್ಯಾಂಕಿನಲ್ಲಿದ್ದ ಹಣ ಪಡೆಯಲು ಮೃತ ಅಕ್ಕನ ಅಸ್ಥಿಪಂಜರವನ್ನೇ ಹೊತ್ತು 3 ಕಿಮೀ ನಡೆದು ಬ್ಯಾಂಕಿಗೆ ಬಂದ ಅಸಹಾಯಕ ತಮ್ಮ…!ಬ್ಯಾಂಕಿನಲ್ಲಿದ್ದ ಹಣ ಪಡೆಯಲು ಅಸ್ಥಿ ಪಂಜರ ತಂದಮಂಗ ಹಿಡಿದುಕೊಟ್ಟರೆ ಟ ಮಹಾ ಸರ್ಕಾರದಿಂದ 600 ರು. ಬಹುಮಾನ!ಯುವ ದಂಪತಿಗೆ ಶುಭ ಹಾರೈಸಿ ಪತ್ರ ಬರೆದ ಮೋದಿಮಾಜಿ ಪ್ರಧಾನಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ವ್ಯಕ್ತಿ ಈಗ ವಕೀಲ