Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣ ವಚನ

Advertisement

ಚೆನ್ನೈ: ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಚಂದ್ರಶೇಖರ ಜೋಸೆಫ್ ವಿಜಯ ಅವರು ಭಾನುವಾರ (ಮೇ 10) ತಮಿಳುನಾಡಿನ ಒಂಬತ್ತನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅವರು ವಿಜಯ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು
ದೇವರ ಹೆಸರಿನಲ್ಲಿ ಪ್ರಮಾಣ ವಚನ
ಟಿವಿಕೆ ಕಾರ್ಯಕರ್ತರ ಹರ್ಷೋದ್ಗಾರ ಮತ್ತು ಸೀಟಿಗಳ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ವಿಜಯ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಿರ್ಗಮಿತ ಡಿಎಂಕೆ ಸರ್ಕಾರದ ಬಹುತೇಕ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರಲಿಲ್ಲ, ಆದರೆ ವಿಜಯ ಮತ್ತು ಅವರ ಸಂಪುಟದ ಸಚಿವರು ದೇವರ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
 ವಿಜಯ ಅವರ ಜೊತೆಗೆ ಇತರ ಒಂಬತ್ತು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದವ್ ಅರ್ಜುನ, ಕೆ.ಜಿ. ಅರುಣರಾಜ, ಕೆ.ಎ. ಸೆಂಗೋಟ್ಟಯನ್, ಪಿ. ವೆಂಕಟರಮಣನ್, ಆರ್. ನಿರ್ಮಲಕುಮಾರ, ರಾಜಮೋಹನ, ಟಿ.ಕೆ. ಪ್ರಭು ಹಾಗೂ ಎಸ್. ಕೀರ್ತನಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
51 ವರ್ಷದ ವಿಜಯ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ  ತಂದೆ ಎಸ್‌.ಎ. ಚಂದ್ರಶೇಖರ ಮತ್ತು ತಾಯಿ  ಶೋಭಾ, ಖ್ಯಾತ ನಟಿ ತ್ರಿಷಾ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೊದಲಾದವರು ಉಪಸ್ಥಿತರಿದ್ದರು.
ಎರಡು ವರ್ಷಗಳ ಹಿಂದೆಯಷ್ಟೇ ರೂಪುಗೊಂಡ ಟಿವಿಕೆ ಪಕ್ಷವು ಕಳೆದ ತಿಂಗಳು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದಾಗ್ಯೂ, ಪಕ್ಷವು ಬಹುಮತದ 118 ಅಂಕಗಳನ್ನು ಪಡೆಯಲು ವಿಫಲವಾಯಿತು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಡಿ ದಾಳಿ ವೇಳೆ ಮಂಜುನಾಥ ಮತ್ತು ಆಪ್ತರ ಬಳಿ ಸಿಕ್ಕಿದ್ದೆಷ್ಟು ಗೊತ್ತೇ ?ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ; ಯಾರಿಗೆ ಯಾವ ಜಿಲ್ಲೆ ; ಇಲ್ಲಿದೆ ವಿವರಉದ್ಯಮಿ ರಾಜಾಭಾವು ಶಿರಗಾಂವಕರ ನಿಧನಪಾಸ್‌ಪೋರ್ಟ್‌ ಪೌರತ್ವದ ದಾಖಲೆಯಲ್ಲ : ವಿದೇಶಾಂಗ ಸಚಿವಾಲಯ ಸ್ಪಷ್ಟನೆಬೆಳಗಾವಿಯಲ್ಲಿ ‘ಖೇಲೋ ಇಂಡಿಯಾ’ ಯೋಜನೆಯಡಿ ಭವ್ಯ ಹಾಕಿ ಮೈದಾನ ನಿರ್ಮಾಣಕ್ಕೆ ವೇಗ: ಸಂಸದ ಜಗದೀಶ್ ಶೆಟ್ಟರ್ ಭರವಸೆ; ಕ್ಯಾಂಟೋನ್ಮೆಂಟ್ ಮಂಡಳಿಯಿಂದ ಸಕಾರಾತ್ಮಕ ಸ್ಪಂದನೆಎನ್‌ಸಿಇಆರ್‌ಟಿ ಮಹತ್ವದ ನಿರ್ಧಾರ; 9ನೇ ತರಗತಿ ಪಠ್ಯಪುಸ್ತಕದಲ್ಲಿ ‘ತುರ್ತು ಪರಿಸ್ಥಿತಿ’ ವಿಷಯ ಸೇರ್ಪಡೆಬೆಳಗಾವಿಯಲ್ಲಿ ‘ಜಿನ ದೀವಿಗೆ’ ಮತ್ತು ‘ಮರಾಠಿಯೊಳಗೊಂದು ಕನ್ನಡ ಗತವೈಭವ’ ಕೃತಿಗಳ ಲೋಕಾರ್ಪಣೆ ಸಮಾರಂಭವೆನೆಜುಲಾದಲ್ಲಿ ಭೀಕರ ಅವಳಿ ಭೂಕಂಪ : 32 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯಮೋದಿ ಪ್ರಧಾನಿಯಾಗಿ 12 ವರ್ಷದ ಸಾಧನೆ : ಬೆಳಗಾವಿಯ ಸಾಹಿತಿಗಳಿಗೆ ಪುಸ್ತಕ ವಿತರಿಸಿದ ಮಾಜಿ ಸಿಎಂ ಹಿಂಡಾಲ್ಕೋ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ..!