Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ : ಸಾಹಿತ್ಯ ಪ್ರತಿಷ್ಠಾನದ ವಿವಿಧ ಪ್ರಶಸ್ತಿ ಪ್ರಕಟ

 

ಬೆಳಗಾವಿ:
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು 2022 ನೇ ಸಾಲಿನ ಸಿರಿಗನ್ನಡ ಗೌರವ ಮತ್ತು 2021 ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ಪ್ರಕಟಿಸಿದೆ.
ಸಿರಿಗನ್ನಡ ಗೌರವ ಪ್ರಶಸ್ತಿಗೆ ಪ್ರೊ. ರಾಜಶೇಖರ ಎಂ. ಕರಡಿಗುದ್ದಿ ಮತ್ತು ಡಾ. ಮಾಧವ ದಿಕ್ಷಿತ ಭಾಜನರಾಗಿದ್ದಾರೆ. ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಈರಯ್ಯ ಕಿಲ್ಲೇದಾರ ಅವರ ವೈಚಾರಿಕ ಲೇಖನ ಸಂಗ್ರಹ ಉರಿಯ ಪೇಟೆಯಲ್ಲಿ ಕೃತಿ ಮತ್ತು ಚಂದ್ರಶೇಖರ ಪೂಜಾರ ಅವರ ಗಜಲ್ ಸಂಕಲನ “ಬೆಳಕ ನಿಚ್ಚಣಿಕೆ” ಕೃತಿ ಆಯ್ಕೆಯಾಗಿರುತ್ತದೆ.

ವಿವಿಧ ಜೀವನಮಾನ ಸಾಧನೆ ಪ್ರಶಸ್ತಿಗಳು:
ಪ್ರೊ. ಪ್ರಲ್ಹಾದಕುಮಾರ ಬಾಗೋಜಿ ದತ್ತಿ ಪ್ರಶಸ್ತಿ ಲೇಖಕರ ಜೀವಮಾನ ಸಾಧನೆಗಾಗಿ ಡಾ.ಸಿ.ಕೆ. ನಾವಲಗಿ, ಡಾ. ಲತಾ ಗುತ್ತಿ ದತ್ತಿ ನಿಧಿ ಪ್ರಶಸ್ತಿ ಲೇಖಕಿಯರ ಜೀವಮಾನ ಸಾಧನೆಗಾಗಿ ಶೀಲಾ ಅಂಕೋಲಾ, ದಿ. ಸುಮನ ಗುರುನಾಥ ಹುದಲಿ ದತ್ತಿ ನಿಧಿ ಪ್ರಶಸ್ತಿ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದ ಸಾಧನೆಗಾಗಿ ಶೈಲಜಾ ಬಿಂಗೆ, ದಿ.ವೆಂ.ಲ. ಜೋಶಿ ಸ್ಮಾರಕ ದತ್ತಿ ಪ್ರಶಸ್ತಿಗೆ ಬಾಳೇಶ ವೀರಪ್ಪ ಚಿನಗುಡಿ (ಮಾಧ್ಯಮಿಕ), ತಾರಾಮತಿ ಪರ್ವತರಾಜ ಪಾಟೀಲ ದತ್ತಿ ಪ್ರಶಸ್ತಿ ಜಿಲ್ಲೆಯ ಉತ್ತಮ ಪ್ರಕಾಶನ ಸಂಸ್ಥೆಗೆ ರಾಜಗುರು ಸಂಸ್ಥಾನಮಠ ಪ್ರಕಾಶನ, ಕಿತ್ತೂರು, ಸಂಗೀತ ಪ್ರತಿಷ್ಠಾನ ಬೆಳಗಾವಿಯ ದತ್ತಿ ನಿಧಿಯ “ವೇಣುಗಾನ ಸಂಗೀತ ಪ್ರಶಸ್ತಿ”ಗೆ ಮುಕುಂದ ಗೋರೆ ಇವರಿಗೆ ನೀಡಲಾಗಿದೆ.

ವಿವಿಧ ದತ್ತಿ ನಿಧಿ ಪುಸ್ತಕ ಪ್ರಶಸ್ತಿಗಳು:

ಕೆ ಚಂದ್ರಮೌಳಿ ದತ್ತಿನಿಧಿ ಪ್ರಶಸ್ತಿ – ಡಾ. ಬಸವರಾಜ ಜಗಜಂಪಿಯವರ ಪ್ರವಾಸ ಕಥನ “ಯೂರೋಪ ಸಾಂಸ್ಕೃತಿಕ ಸೌರಭ” ಕೃತಿಗೆ, ಪಿ. ವಿಜಯಕುಮಾರ ದತ್ತಿ ಪ್ರಶಸ್ತಿ - ಬಿ.ಎಸ್. ಜಗಾಪುರ ಅವರ ಮಕ್ಕಳ ಸಾಹಿತ್ಯ “ಜಾಣ ಬಾಲಕ” ಕೃತಿಗೆ, ದಿ.ಶ್ರೀದೇವಿ ದಾಸಪ್ಪ ಶಾನಬಾಗ ಸ್ಮಾರಕ ದತ್ತಿ ಪ್ರಶಸ್ತಿ ಶ್ರೀ ಡಾ. ಜೆ.ಪಿ. ದೊಡ್ಡಮನಿ ಅವರ ಅನುವಾದ ಸಾಹಿತ್ಯ “ಭಾರತ ದೇಶದ ಪ್ರಥಮ ಶಿಕ್ಷಕಿ-ಸಾವಿತ್ರಿಬಾಯಿ ಫುಲೆ” ಕೃತಿಗೆ, ಡಾ. ಹಣಮಂತರಾವ ಸವಣೂರ ಸ್ಮಾರಕ ದತ್ತಿ ಪ್ರಶಸ್ತಿಗೆ ಬಸವಣ್ಣೆಪ್ಪ ಕಂಬಾರ ಅವರ ಕಥಾ ಸಂಕಲನ “ಆರನೇ ಬೆರಳು” ಕೃತಿಗೆ, ಎಸ್.ಎಂ. ಕುಲಕರ್ಣಿ ಷಷ್ಠಬ್ಧಿ ಸಮಿತಿ ದತ್ತಿ ನಿಧಿ ಪ್ರಶಸ್ತಿ ಡಾ. ಬಸು ಬೇವಿನಗಿಡದ ಅವರ ವಿಮರ್ಶಾ “ಬೆಳಕ ತೋರಣ” ಕೃತಿಗೆ, ದಿ. ಚಂದ್ರವ್ವ ಧರ್ಮಾಜಿ ಅನಗೋಳ ಸ್ಮಾರಕ ದತ್ತಿ ಪ್ರಶಸ್ತಿ ಡಾ. ಶೋಭಾ ನಾಯಕ ಅವರ ಸಂಕಲನ “ಶಯ್ಯಾಗಾರದ ಸುದ್ದಿಗಳು ಕೃತಿಗೆ, ಡಾ.ಎಂ.ಎಲ್. ತುಕ್ಕಾರ ಅಭಿನಂದನ ಸಮಿತಿ ದತ್ತಿ ಪ್ರಶಸ್ತಿ ರಂಜನಾ ನಾಯಿಕ ಅವರ ನಾಟಕ ಸಂಕಲನ – “ಇಪ್ಪತ್ತೊಂದು ನೆರಳು ಬೆಳಕಿನಾಟ” ಕೃತಿಗೆ, ಶಿವಕವಿ ಉಳವೀಶ ಹುಲೇಪ್ಪನವರ ಸ್ಮಾರಕ ದತ್ತಿ ನಿಧಿ ಪ್ರಶಸ್ತಿ ಚುಟುಕು ಸಾಹಿತ್ಯ - ಅಶೋಕ ಮಳಗಲಿ ಅವರ “ನೂರೊಂದು ಚುಟುಕು ಚಟಾಕಿಗಳು” ಕೃತಿಗೆ, ಅಪ್ಪಾಸಾಹೇಬ ಸದರಜೋಶಿ ಕುಟುಂಬದ ದತ್ತಿ ಪ್ರಶಸ್ತಿ ವೈಚಾರಿಕ ಲೇಖನಗಳು ಡಾ. ಆರ್. ಬಿ. ಚಿಲಮಿ ಅವರ “ಬದುಕಿನ ಅನನ್ಯತೆಗೆ ದಾರಿದೀಪಗಳು” ಕೃತಿಗೆ ನೀಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ಗಣಾಚಾರಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ