Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅನಗೋಳ ಹರಿಮಂದಿರದಲ್ಲಿ ಪ್ರವಚನ ನಿಮಿತ್ತ ಸಂಚಾರ ಮಾರ್ಗ ಬದಲಾವಣೆ

 

ಬೆಳಗಾವಿ :
ದಿನಾಂಕ : 17/01/2023 ರಿಂದ 23/01/2023 ರವರೆಗೆ ಬೆಳಗಾವಿ ನಗರದಲ್ಲಿ ಶ್ರೀ ಪರಮಪೂಜ್ಯ ಕಲಾವತಿ ದೇವಿ ಪುಣ್ಯತಿಥಿ ಉತ್ಸವ ಹಿನ್ನೆಲೆಯಲ್ಲಿ ಅನಗೋಳ ಮುಖ್ಯ ರಸ್ತೆಯಲ್ಲಿರುವ ಹರಿ ಮಂದಿರದಲ್ಲಿ ಪ್ರವಚನ ಕುರಿತು ನೆರೆಯ ಮಹಾರಾಷ್ಟ್ರ , ಗೋವಾ ರಾಜ್ಯಗಳಿಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿರುವುದರಿಂದ ಹೆಚ್ಚಿನ ಜನಸಂದಣಿಯಿಂದ ಕೂಡಿರುತ್ತದೆ.

ಈ ಕಾಲಕ್ಕೆ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಗೆ ಅನುಗುಣವಾಗಿ ದಿನಾಂಕ : 17/01/2023 ರಿಂದ 23/01/2023 ಪ್ರತಿದಿನವೂ ಮುಂಜಾನೆ 7.00 ಗಂಟೆಯಿಂದ 8.30 ಗಂಟೆಯವರೆಗೆ , 10.30 ಗಂಟೆಯಿಂದ ಮದ್ಯಾಹ್ನ 12.00 ಗಂಟೆಯವರೆಗೆ ಮತ್ತು ಸಾಯಂಕಾಲ 5.30 ಗಟೆಯಿಂದ 7.00 ಗಂಟೆಯವರೆಗೆ ಹಾಗೂ ರಾತ್ರಿ 9.00 ಗಂಟೆಯಿಂದ 10.30 ಗಂಟೆಯವರೆಗೆ ಈ ಕೆಳಗೆ ನಮೂದಿಸಿದ ಮಾರ್ಗಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವುದು.

1 ) ಡಿವಿಎಸ್ ಚೌಕ್ ಅನಗೋಳ ಕಡೆಯಿಂದ ಹರಿಮಂದಿರ ಮುಖಾಂತರ ಆರ್‌ಪಿಡಿ ಸರ್ಕಲ್ , ಖಾನಾಪುರ ಮುಖ್ಯ ರಸ್ತೆ ಸೇರುವ ಎಲ್ಲ ಮಾದರಿಯ ವಾಹನ ಚಾಲಕರು ಆಶೀರ್ವಾದ ಮಂಗಲ ಕಾರ್ಯಾಲಯ ( ಎಸ್‌ವಿ ಕಾಲೋನಿ ಕ್ರಾಸ್ ) ಹತ್ತಿರ ಎಡತಿರುವು ಪಡೆದುಕೊಂಡು ಮುಖ್ಯ ರಸ್ತೆಗೆ ಸಾಗುವುದು . 2 ) ಆರ್‌ಪಿಡಿ ಸರ್ಕಲ್ ಕಡೆಯಿಂದ ಡಿವಿಎಸ್ ಚೌಕ ಅನಗೋಳ ಮತ್ತು ಭಾಗ್ಯನಗರ ಸಾಗುವ ಎಲ್ಲ ಮಾದರಿಯ ವಾಹನಗಳು ಅನಗೋಳ ಮುಖ್ಯ ರಸ್ತೆಯ ಪುರೋಹಿತ ಸ್ವೀಟ್ ಮಾರ್ಟ್ ಹತ್ತಿರ ಎಡ ತಿರುವು ಪಡೆದುಕೊಂಡು ವಿದ್ಯಾನಗರ 1 ನೇ ಕ್ರಾಸ್ ಮುಖಾಂತರ ಯುನಿಯನ್ ಬ್ಯಾಂಕ್ ಎಟಿಎಂ ಹತ್ತಿರ ಮುಖ್ಯ ರಸ್ತೆ ಸೇರಿ ಮುಂದೆ ಸಾಗುವುದು.
ಕಾರಣ ಈ ಮೇಲ್ಕಂಡ ಸಂಚಾರ ಮಾರ್ಗ ಬದಲಾವಣೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ