ಬೆಂಗಳೂರು: ನೂತನ ಸಿಎಂ ಪ್ರಮಾಣ ವಚನ ಯಾವಾಗ ಎಂದು ಶನಿವಾರದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗಲಿದೆ. ಬಹುತೇಕ ಭಾನುವಾರ ಅಥವಾ ಸೋಮವಾರ ಶಪಥ ಗ್ರಹಣ ನಡೆಯಬಹುದು ಎನ್ನಲಾಗುತ್ತಿದೆ. ಡಿಕೆಶಿ ಅವರ ಆಪ್ತ ಜ್ಯೋತಿಷಿ ದ್ವಾರಕನಾಥ್ ಪ್ರಮಾಣ ಸ್ವೀಕಾರಕ್ಕೆ ಮೇ 31, ಜೂ.5 ಮತ್ತು ಜೂ.6 ರ ದಿನಾಂಕ ನೀಡಿದ್ದಾರೆ. ಡಿಕೆಶಿ ಬಹುವಾಗಿ ನಂಬುವ ಗುರುಗಳಾದ ಅಜ್ಜಯ್ಯ ಅವರು ಜೂ.1, ಜೂ.3 ಮತ್ತು 5ರ ದಿನಾಂಕ ನೀಡಿದ್ದಾರೆ ಎನ್ನಲಾಗಿದೆ.
ಪ್ರಮಾಣ ವಚನಕ್ಕೆ ವಿಧಾನಸೌಧದ ಮೆಟ್ಟಿಲ ಮೇಲೆ ಭರದ ಸಿದ್ದತೆ!
ನೂತನ ಮುಖ್ಯ ಮಂತ್ರಿ
ಪದಗ್ರಹಣಕ್ಕೆ ವಿಧಾನಸೌಧದ ಆವರಣದಲ್ಲಿ ಭರದ ಸಿದ್ಧತೆ ಆರಂಭಗೊಂಡಿವೆ. ವಿಧಾನಸೌಧದ ಭವ್ಯ ಮೆಟ್ಟಿಲು ಗಳ ಮೇಲೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೆಟ್ಟಿಲುಗಳ ಮೇಲೆ ವೇದಿಕೆ ನಿರ್ಮಾಣ ಶುರುವಾಗಿದೆ.
