Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸೌಮ್ಯ ಸ್ವಭಾವದ ಸುಧೀರ ಗಡ್ಡೆಗೆ ಇಂದು 43ನೇ ಜನ್ಮದಿನ

 

ಕಾಂಗ್ರೆಸ್ ನ ನಿಷ್ಠಾವಂತ ಚಾಣಕ್ಯನಿಗೆ ಶುಭಾಶಯಗಳ ಮಹಾಪುರ

ಬೆಳಗಾವಿ :
ಸಮಚಿತ್ತ ಭಾವ, ಶಾಂತ-ಸೌಮ್ಯ ಸ್ವಭಾವ, ಸರಳತೆ, ತಾಳ್ಮೆ, ಮಾನವೀಯ ಗುಣವುಳ್ಳ ಮತ್ತು ಸಹನಶೀಲ ವ್ಯಕ್ತಿತ್ವವುಳ್ಳ ಸುಧೀರ ಗಡ್ಡೆ ಅವರಿಗೆ ಇಂದು ಸೋಮವಾರ 43ನೇ ಜನ್ಮದಿನದ ಸುಸಂದರ್ಭ.

ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಪ್ರಾಮಾಣಿಕ‌ ಸೇವೆ ಸಲ್ಲಿಸುತ್ತಿರುವ ಸುಧೀರ ಗಡ್ಡೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರಾಗಿ ಹಾಗೂ ಪಕ್ಷದ ಚತುರ ಚಾಣಕ್ಯನಾಗಿ ಹೊರ ಹೊಮ್ಮಿದ್ದಾರೆ.‌ ಅನೇಕ‌ ಸಾಮಾಜಿಕ ಕಾರ್ಯಗಳ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಮೂಲತಃ‌ ಕಣಬರ್ಗಿಯಲ್ಲಿ ಜನಿಸಿರುವ ಸುಧೀರ ಗಡ್ಡೆ ತಮ್ಮ‌ಕಾರ್ಯ ವ್ಯಾಪ್ತಿಯನ್ನು ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆವರೆಗೆ ವ್ಯಾಪಿಸಿಕೊಂಡಿದ್ದಾರೆ.

ಗಡ್ಡೆ ಡೆವೆಲಪರ್ಸ್ ಎಂಬ ಸಂಸ್ಥೆ ಮೂಲಕ ಅನೇಕರಿಗೆ ಸೂರು ಒದಗಿಸುವ ಕಾರ್ಯ ಮಾಡುತ್ತಿರುವ ಸುಧೀರ ಗಡ್ಡೆ ಖ್ಯಾತ ಉದ್ದಿಮೆಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.‌

ಕಾಂಗ್ರೆಸ್ ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವ ನಿಷ್ಠಾವಂತ ಹಾಗೂ ಪಕ್ಷ ನಿಷ್ಠೆಗೆ ಬದ್ಧತೆಯ ಅಚ್ಚೊತ್ತಿದವರು ಸುಧೀರ ಗಡ್ಡೆ.

ತಂದೆ ನಾಗೇಶ ಗಡ್ಡೆ ಅವರ ಮಾರ್ಗದರ್ಶನದಲ್ಲಿ ಸಾಗಿ ಬಂದಿರುವ ಸುಧೀರ ಅವರು ಅಧಿಕಾರ ಇರಲಿ, ಇಲ್ಲದಿರಲಿ ಜನಪರ ಧ್ವನಿ ಕ್ಷೀಣಿಸಬಾರದು ಎಂಬ ಉದ್ದೇಶದಿಂದ ಇಂದಿಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ಹಲವಾರು ವರ್ಷಗಳಿಂದ ಪಕ್ಷಕ್ಕೆ ಬದ್ಧರಾಗಿ ತಮ್ಮದೇ ಛಾಪು ಮೂಡಿಸಿರುವ ಯುವ ನಾಯಕ, ಜನಸೇವಕ ಸುಧೀರ ಗಡ್ಡೆ ಸಮಾಜದ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ