Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದೂದಸಾಗರ ನೋಡಲು ತೆರಳಿದವರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ !

[video width="368" height="656" mp4="https://janajeevala.com/wp-content/uploads/2023/07/video_20230716_183339_edit.mp4"][/video]

[video width="368" height="656" mp4="https://janajeevala.com/wp-content/uploads/2023/07/video_20230716_184345_edit.mp4"][/video]

ಬೆಳಗಾವಿ :ಕರ್ನಾಟಕ ಮತ್ತು ಗೋವಾ ನಡುವಿನ ಮನಮೋಹಕ ದೂದ್ ಸಾಗರ ಜಲಪಾತ ನೋಡಲು ರವಿವಾರ ತೆರಳಿದ ಪ್ರವಾಸಿಗರಿಗೆ ಗೋವಾ ಪೊಲೀಸರು ಬಸ್ಕಿ ಶಿಕ್ಷೆ ಹೊಡೆಸಿ ಕಳಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗಿದೆ.

ಜಲಪಾತ ಪಶ್ಚಿಮ ಘಟ್ಟದ ಭಗವಾನ್ ಮಹಾವೀರ ಉದ್ಯಾನ ಮೊಲ್ಲೆಂ ರಾಷ್ಟ್ರೀಯ ಉದ್ಯಾನದ ಬಳಿ ಇದೆ. ದಟ್ಟ ಕಾಡಿನಿಂದ ಸುತ್ತುವರಿದಿದೆ. ಟ್ರಕಿಂಗ್ ಹೋಗುವವರಿಗೆ ಇದು ಅತ್ಯಂತ ಪ್ರಶಸ್ತ ಜಾಗ. ಹೀಗಾಗಿ ಅನೇಕರು ರೈಲ್ವೆ ಟ್ರ್ಯಾಕ್ ನಲ್ಲಿ ಬರುತ್ತಾರೆ. ಇಲ್ಲಿ ಪ್ರವೇಶ ನಿಷೇಧ ಇದ್ದರು ಯುವಕರು ದೂದಸಾಗರ ನೋಡಲು ತೆರಳಿದ್ದಾರೆ. ವಾರಾಂತ್ಯದ ರಜೆಗೆ ಬೆಳಗಾವಿ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಿಂದ ತೆರಳಿದ್ದ ಯುವಕರಿಗೆ ಗೋವಾ ಪೊಲೀಸರು ಬಸ್ಕಿ ಹೊಡೆಸುವ ಶಿಕ್ಷೆ ನೀಡಿದ್ದಾರೆ.

ಜಲಪಾತ ವೀಕ್ಷಣೆಗೆ ಗೋವಾ ನಿರ್ಬಂಧ ವಿಧಿಸಿದೆ. ಕರ್ನಾಟಕ ಭಾಗದಿಂದ ಜೋಯಿಡಾ ತಾಲೂಕಿನ ಕ್ಯಾನ್ಸಲ್ ರಾಕ್ ನಿಂದ ರೈಲ್ವೆ ಮಾರ್ಗ ಅಥವಾ ರೈಲು ಹಳಿ ಬಳಿ ಟ್ರಕ್ಕಿಂಗ್ ಮೂಲಕ ತೆರಳಬೇಕು. ರೈಲ್ವೆ ಇಲಾಖೆ ಇಲ್ಲಿ ರೈಲ್ವೆ ಹಳಿ ಪಕ್ಕದಲ್ಲಿ ನಡೆದ ಸಾಗಲು ನಿರ್ಬಂಧ ಹೇರಿದೆ. ನಿರ್ಬಂಧ ವಿಧಿಸಿದ್ದರೂ ಪ್ರವಾಸಿಗರು ಜಲಪಾತ ವೀಕ್ಷಣೆಗೆ ತೆರಳುತ್ತಾರೆ. ಕೆಲವರು ದೂದಸಾಗರ ಮಾರ್ಗವಾಗಿ ರೈಲ್ವೆಯಲ್ಲಿ ಸಾಗಿ ದೂದಸಾಗರ ಬಳಿ ರೈಲಿನ ವೇಗ ಕಡಿಮೆಯಾಗುತ್ತಿದ್ದಂತೆ ಇಳಿಯುತ್ತಾರೆ. ವಾರಾಂತ್ಯ ರವಿವಾರ ಆಗಿದ್ದರಿಂದ ಜನದಟ್ಟಣೆ ಉಂಟಾಗಿದೆ.
ಹೀಗಾಗಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರನ್ನು ತಡೆದು ಬಸ್ಕಿ ಶಿಕ್ಷೆ ನೀಡಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ