Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಿಳಿ ಬಟ್ಟೆಯ ಮಾರ್ಷಲ್ ಗಳಿಗೆ ಈ ಬಾರಿ ನೆಲವೇ ಗತಿ..!



ಬೆಳಗಾವಿ :'' ಈ ಬಾರಿ ಏನು ವ್ಯವಸ್ಥೆ ಮಾಡಿಲ್ಲ, ಕಳೆದ ಸಲ ಮಂಚವಾದರೂ ಕೊಟ್ಟಿದ್ರು, ಈ ಸಲ ನೆಲ ಕೊಟ್ಟು ಮಲಗಿಸಿದ್ರು. ಬಟ್ಟೆ ಇಡಲು ಸಹಾ ಸ್ಥಳ ಇಲ್ಲ. ನಮ್ಮದೆಲ್ಲವೂ ಬಿಳಿ ಬಟ್ಟೆ. ಏನು ಮಾಡಲಿ ?''

ಇದು ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಬೆಳಗಾವಿಗೆ ಆಗಮಿಸಿರುವ ಮಾರ್ಷಲ್ ಗಳ ಕಥೆ-ವ್ಯಥೆ.

ಬೆಳಗಾವಿಯ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ವಸತಿ ವಸತಿ ನಿಲಯದಲ್ಲಿ ಈ ಬಾರಿ ಮಾರ್ಷಲ್ ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಇಷ್ಟು ವರ್ಷ ಕೆಎಲ್ ಇ ಸಂಸ್ಥೆಯ ಕಟ್ಟಡದಲ್ಲಿ ವ್ಯವಸ್ಥೆ ಮಾಡಿಕೊಡಲಾಗುತ್ತಿತ್ತು. ಆದರೆ, ಆಡಳಿತ ಈ ಬಾರಿ ಕೆಎಲ್ ಇ ಸಂಸ್ಥೆಯವರನ್ನು ಕೇಳಲೇ ಇಲ್ಲ. ಕೇಳಿದ್ರೆ ಅವರು ಖಂಡಿತವಾಗಿಯೂ ಕೊಡುತ್ತಿದ್ದರು. ಆಡಳಿತದ ನಿರ್ಲಕ್ಷ್ಯದಿಂದ ಮಾರ್ಶಲ್ ಗಳು ಈ ಬಾರಿ ಕೋವಿಡ್ ಕಾಲದಲ್ಲಿ ನೀಡಿದಂತಹ ಬೆಡ್ ಮೇಲೆ ಅಧಿವೇಶನವನ್ನು ಕಳೆಯುವಂತಾಗಿದೆ ಎಂದು ಮಾರ್ಷಲ್ ಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರಿಗೆ ಜರ್ಮನ್ ಟೆಂಟ್ :
ಅಧಿವೇಶನದ ಬಂದೋಬಸ್ತಿಗೆ ವಿವಿಧ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ. ಅವರಿಗೆ ಉಳಿದುಕೊಳ್ಳಲು ಜರ್ಮನ್ ಟೆಂಟ್ ಗಳಿಂದ ಟೌನ್ ಶಿಪ್ ನಿರ್ಮಿಸಲಾಗಿದೆ.
ವಿಧಾನ ಮಂಡಲದ ಅಧಿವೇಶನದ ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಚಳಿ ಇರುವುದರಿಂದ ಅವರು ಸಹಜವಾಗಿ ಚಳಿಯ ಸಮಸ್ಯೆಯಿಂದ ಬಳಲುವ ಆತಂಕವಿದೆ.

ಸುವರ್ಣ ವಿಧಾನಸೌಧದ ಬಳಿಯ ಅಲಾರವಾಡದ ಹೊರವಲಯದಲ್ಲಿ ಎರಡು ಕೋಟಿಗೂ ಅಧಿಕ ವೆಚ್ಚದಲ್ಲಿ ಟೌನ್‌ಶಿಪ್ ನಿರ್ಮಿಸಿದ್ದು ನಾಲ್ಕು ದೊಡ್ಡ ಜರ್ಮನ್ ಟೆಂಟ್ ಹಾಕಲಾಗಿದೆ. ಒಂದು ಸಣ್ಣ ಟೆಂಟ್ ನಿರ್ಮಿಸಲಾಗಿದೆ. ಅವರಿಗೆ ಕಾಟ್ , ತಲೆದಿಂಬು, ಬೆಡ್ ಶೀಟ್ ವ್ಯವಸ್ಥೆ ಮಾಡಲಾಗಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ