Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅಂಡಮಾನ್‌ನಲ್ಲಿ ಜನಗಣತಿ: ಸೆಂಟಿನಲೀಸ್‌ ಸಮುದಾಯದ ಗಣತಿಗೆ ಉಷ್ಣ ತಂತ್ರಜ್ಞಾನ ಬಳಕೆ

ಪೋರ್ಟ್‌ ಬ್ಲೇರ್: ನವಶಿಲಾಯುಗ ಪೂರ್ವದ ಕೊನೆಯ ಬುಡಕಟ್ಟು ಸಮುದಾಯವಾದ ಸೆಂಟಿನಲೀಸ್‌ ಜನರ ಗಣತಿಗೆ ಉಷ್ಣ ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಿರುವುದಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿರಾರು ವರ್ಷಗಳಿಂದ ನಾಗರಿಕ ಸಮಾಜದಿಂದ ದೂರವೇ ಇರುವ ಸೆಂಟಿನಲೀಸ್ ಜನರು ತಮ್ಮ ಪ್ರದೇಶದೊಳಗೆ ಹೊರಗಿನವರ ಪ್ರವೇಶವನ್ನು ಖಡಾಖಂಡಿತವಾಗಿ ಇಷ್ಟುಪಡುವುದಿಲ್ಲ. ಉತ್ತರ ಸೆಂಟಿನಲೀಸ್ ದ್ವೀಪದಲ್ಲಿರುವ ಈ ಬುಡಕಟ್ಟು ಸಮುದಾಯದವರ ಗಣತಿಯನು ನಡೆಸುವ ಉದ್ದೇಶ ಇದೆ.

ಮೊದಲ ಮಾನವ ಜನಾಂಗಕ್ಕೆ ಸೇರಿದ ಸೆಂಟಿನಲೀಸ್‌ ಆಫ್ರಿಕಾದಿಂದ ವಲಸೆ ಬಂದ ಜನಾಂಗ ಎಂದು ಭಾವಿಸಲಾಗಿದೆ. ಜತೆಗೆ ಕಳೆದ 55 ಸಾವಿರ ವರ್ಷಗಳಿಂದ ಅವರು ಈ ಉತ್ತರ ಸೆಂಟಿನಲೀಸ್‌ನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಸುಮಾರು 14,700 ಎಕರೆಯಲ್ಲಿರುವ ಇವರ ಪ್ರದೇಶಕ್ಕೆ ಹೊರಗಿನವರು ಪ್ರವೇಶಿಸಲು ಯತ್ನಿಸಿದರೆ, ಬಿಲ್ಲು ಮತ್ತು ಬಾಣ ಬಳಸಿ ದಾಳಿ ನಡೆಸಿ, ತಮ್ಮ ಜನಾಂಗವನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಾರೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

2018ರ ನವೆಂಬರ್‌ನಲ್ಲಿ ಅಮೆರಿಕದ ಪ್ರವಾಸಿಗ ಜಾನ್ ಅಲೆನ್ ಚಾವ್ ಎಂಬುವವರು ಧಾರ್ಮಿಕ ಪ್ರಚಾರಕ್ಕೆ ಇವರ ಬಳಿ ತೆರಳಲು ಯತ್ನಿಸಿದ್ದಾಗ ಈ ಸಮುದಾಯ ಅವರನ್ನು ಬಾಣಗಳಿಂದ ದಾಳಿ ನಡೆಸಿ ಕೊಂದಿತ್ತು.

ಮುಖ್ಯ ಕಾರ್ಯದರ್ಶಿ ಚಂದ್ರ ಭೂಷಣ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರಾಡಳಿತ ಪ್ರದೇಶ ಮಟ್ಟದ ಜನಗಣತಿ ಸಮನ್ವಯ ಸಮಿತಿಯ ಸಭೆಯು ಆ. 29ರಂದು ನಡೆದಿತ್ತು. ಜನಗಣತಿ ಕಾರ್ಯಾಚರಣೆಯ ನಿರ್ದೇಶಕಿ ಪೂರ್ವ ಗರ್ಗ್ ಅವರು ಕ್ಯಾಲೆಂಡ‌ರ್ ಆಧಾರಿತ ತಮ್ಮ ಯೋಜನೆಗಳ ವಿವರಗಳನ್ನು ಸಭೆಗೆ ನೀಡಿದ್ದರು. ಜತೆಗೆ ತಾವು ಈವರೆಗೂ ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನೂ ಹಂಚಿಕೊಂಡಿದ್ದರು.

2027ರ ಜನಗಣತಿಯು ಡಿಜಿಟಲ್ ರೂಪದಲ್ಲಿ ದಾಖಲಾಗಲಿದೆ. ಎರಡು ಹಂತಗಳಲ್ಲಿ ನಡೆಯಲಿರುವ ಗಣತಿಯಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿ ಹಾಗೂ ಜನಸಂಖ್ಯೆಯ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

2025ರ ಅಕ್ಟೋಬರ್-ನವೆಂಬರ್‌ನಲ್ಲಿ ವಾಸ್ತವ ಜನಗಣತಿಗೂ ಪೂರ್ವದಲ್ಲಿ ಪರೀಕ್ಷಾರ್ಥವಾಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಸಲು ಯೋಜನೆ ರೂಪಿಸಲಾಗಿದೆ. ಇದನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಮೂರು ಜಿಲ್ಲೆಗಳಲ್ಲಿ ನಡೆಸಲಾಗುವುದು ಎಂದಿದ್ದಾರೆ.

ಬುಡಕಟ್ಟು ಜನರಿರುವ ಪ್ರದೇಶದಲ್ಲಿ ವಾಸಿಸುವವ ಪ್ರತಿಯೊಬ್ಬರನ್ನೂ ಒಳಗೊಳ್ಳುವಂತೆ ನಿಖರ ಗಣತಿ ನಡೆಸಲು ವಿಶೇಷ ಗಮನ ಹರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ನಿರ್ದೇಶಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ