Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅವ್ಯವಸ್ಥೆಯ ತಾಣವಾಯ್ತು ವಿಟಿಯು ಘಟಿಕೋತ್ಸವ..!

ಭಾರತದಲ್ಲೇ ಅತ್ಯಂತ ಶ್ರೇಷ್ಠ, ಪ್ರತಿಷ್ಠಿತ ವಿಶ್ವವಿದ್ಯಾಲಯ ಎಂದು ಹೇಳಿಕೊಳ್ಳುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಮಂಗಳವಾರ ನಡೆದ 23 ನೇ ಘಟಿಕೋತ್ಸವ ಅವ್ಯವಸ್ಥೆಯ ತಾಣವಾಯಿತು. ಗಣ್ಯ ಮಾನ್ಯರಿಗೆ ಊಟ-ಉಪಹಾರ ನೀಡುವಲ್ಲಿಯೇ ಎಂದಿನಂತೆ ಅತ್ಯಾಸಕ್ತಿ ವಹಿಸಿದ್ದ ವಿಟಿಯು ರಾಂಕ್ ಹಾಗೂ ಪದಕ ವಿಜೇತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಮರೆಯಿತು‌. ಅವರ ಭೋಜನ ವ್ಯವಸ್ಥೆ ಬಗ್ಗೆ ಗಮನಹರಿಸಲಿಲ್ಲ. ಭೋಜನ ವ್ಯವಸ್ಥೆಯಲ್ಲಿ ತೀರಾ ಅವ್ಯವಸ್ಥೆ ಕಂಡು ಬಂತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಇದ್ದು ಘಟಿಕೋತ್ಸವ ವೀಕ್ಷಿಸಿದ್ದ ಇವೆರೆಲ್ಲ ಚಡಪಡಿಸಿದರು.

ಜನ ಜೀವಾಳ  ಸರ್ಚ್ ಲೈಟ್ ಬೆಳಗಾವಿ : ಭಾರತದಲ್ಲೇ ಅತ್ಯಂತ ಪ್ರತಿಷ್ಠಿತ ಹಾಗೂ ಶ್ರೀಮಂತ ವಿಶ್ವವಿದ್ಯಾಲಯ ಎಂಬ ಖ್ಯಾತಿ ಗಳಿಸಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ 23ನೇ ಘಟಿಕೋತ್ಸವ ಮಂಗಳವಾರ ನಡೆದಿದೆ. ಆದರೆ, ಈ ವರ್ಷದ ಘಟಿಕೋತ್ಸವದ ವ್ಯವಸ್ಥೆ ತೀರಾ ಅವ್ಯವಸ್ಥೆಯಿಂದ ಕೂಡಿದೆ ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಕರ್ನಾಟಕದ ತಾಂತ್ರಿಕ ಕಾಲೇಜುಗಳ ಮಾತೃ ಸಂಸ್ಥೆ ಎಂದೇ ಗುರುತಿಸಲ್ಪಟ್ಟಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಘಟಿಕೋತ್ಸವಕ್ಕೆ ಇಡೀ ಕನ್ನಡ ನಾಡಿನ ಮೂಲೆ ಮೂಲೆಗಳಿಂದ ರಾಂಕ್, ಪದಕ ವಿಜೇತರು ಹಾಗೂ ಅವರ ಪೋಷಕರು ಆಗಮಿಸಿದ್ದರು. ಆದರೆ, ಈ ವರ್ಷ ನಡೆದ ಘಟಿಕೋತ್ಸವ ವಿದ್ಯಾರ್ಥಿಗಳು ಮತ್ತು ಪೋಷಕರ ಅಸಮಾಧಾನಕ್ಕೆ ಕಾರಣವಾಯಿತು. ಅದರಲ್ಲೂ ಊಟದ ವ್ಯವಸ್ಥೆ ತೀರಾ ಕಳಪೆಯಾಗಿತ್ತು. ಘಟಿಕೋತ್ಸವ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಶ್ರೇಷ್ಠ ಕ್ಷಣ. ಜೀವನದಲ್ಲಿ ಮರೆಯಲಾರದ ಅನುಭವ. ಅಂಥ ಶ್ರೇಷ್ಠ ಕ್ಷಣಕ್ಕೆ ಸಾಕ್ಷಿಯಾಗಲು ರಾತ್ರಿಯಿಡೀ ನಿದ್ದೆಗೆಟ್ಟು ಬೆಳಗಾವಿಗೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಪಾಲಿಗೆ ಈ ವರ್ಷದ ಘಟಿಕೋತ್ಸವ ಕೆಂಗಣ್ಣಿಗೆ ಗುರಿಯಾಯಿತು.

ಘಟಿಕೋತ್ಸವ ಮುಗಿಯುವಾಗ ಮಧ್ಯಾಹ್ನ 1:30 ಕಳೆದಿತ್ತು. ಆ ಹೊತ್ತಿಗೆ ಪೋಷಕರು ಹಸಿದು ದಣಿದಿದ್ದರು. ಊಟಕ್ಕೆ ಎಲ್ಲರೂ ಏಕಕಾಲಕ್ಕೆ ತೆರಳಿದ್ದರಿಂದ ಭಾರಿ ಜನಜಂಗುಳಿ ಸೃಷ್ಟಿಯಾಯಿತು.

ಬಹುತೇಕ ಎಲ್ಲಾ ಕೌಂಟರ್ ಗಳಲ್ಲಿ ರಶ್ ರಶ್..ಎನ್ನುವ ಸನ್ನಿವೇಶ ಎದ್ದು ಕಂಡಿತು. ಸುಮಾರು 2000 ಕ್ಕೂ ಅಧಿಕ ಪೋಷಕರು ಹಾಗೂ ವಿದ್ಯಾರ್ಥಿಗಳು ಮುಗಿ ಬಿದ್ದಿದ್ದರಿಂದ ಎಲ್ಲೆಡೆ ರಶ್ ಕಂಡು ಬಂತು. ಅರ್ಧ ಅರ್ಧ ಚಪಾತಿ ವಿತರಿಸಲಾಯಿತು. ಭೋಜನ ವ್ಯವಸ್ಥೆಗೆ ಸರದಿ ಸಾಲಿನ ವ್ಯವಸ್ಥೆ ಮಾಡಿದ್ದರೆ ಇಷ್ಟೊಂದು ಗೊಂದಲಮಯ ಏರ್ಪಡುತ್ತಿರಲಿಲ್ಲ. ಆದರೆ, ಇದುವರೆಗೆ 23 ಸಲ ವಾರ್ಷಿಕ ಘಟಿಕೋತ್ಸವ ನಡೆಸಿದ ಅಪಾರ ಅನುಭವ ಇದ್ದರೂ ಮಾತ್ರ ವಿಟಿಯು ಇದೇ ಮೊದಲ ಬಾರಿಗೆ ಘಟಿಕೋತ್ಸವ ಆಯೋಜನೆ ಮಾಡಿದಂತೆ ಕಂಡುಬಂತು. ವಿಶ್ವವಿದ್ಯಾಲಯದ ಕ್ಯಾಂಟೀನ್ ಮಂಗಳವಾರ ಬಂದ್ ಆಗಿತ್ತು. ಕ್ಯಾಂಟೀನ್ ಬಂದ್ ಆಗಿರದೆ ಇದ್ದರೆ ಹಣ ತೆತ್ತಾದರೂ ಹೋಗಿ ಊಟ-ಉಪಹಾರ ಮಾಡಬಹುದಾಗಿತ್ತು. ಅದನ್ನು ಸಹಾ ಬಂದ್ ಇಟ್ಟಿದ್ದರಿಂದ ಜನ ಇನ್ನಷ್ಟು ಪರದಾಡುವಂತಾಯಿತು.
ಕೊನೆಗೂ ಇವರೆಲ್ಲರೂ ಬೆಳಗಾವಿ ಮಹಾನಗರಕ್ಕೆ ಆಗಮಿಸಿ ಊಟ-ಉಪಹಾರ ಮಾಡಿ ಹಸಿವು ತಣಿಸಿಕೊಂಡರು.

ಸಾರಿಗೆ ಅವ್ಯವಸ್ಥೆ :
ವಿದ್ಯಾರ್ಥಿಗಳನ್ನು ಕರೆತರಲು ಬೆಳಗ್ಗೆ ವಿಶ್ವವಿದ್ಯಾಲಯದ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಘಟಿಕೋತ್ಸವ ಮುಗಿದ ನಂತರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಾಪಸ್ ಬೆಳಗಾವಿ ಮಹಾನಗರಕ್ಕೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡದೇ ಇದ್ದರಿಂದ ಎಲ್ಲರೂ ತೊಂದರೆ ಅನುಭವಿಸುವಂತಾಯಿತು. ಬಹುತೇಕರು ಮುಖ್ಯ ಹೆದ್ದಾರಿ ವರೆಗೂ ನಡೆದುಕೊಂಡು ಬಂದು ಬೆಳಗಾವಿಗೆ ಆಗಮಿಸಿದರು.

ಜೊತೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಈ ಬಾರಿ ಮಳೆಗಾಲದಲ್ಲಿ ಘಟಿಕೋತ್ಸವ ನಡೆಸಿದ್ದರಿಂದ ಜನ ತೀವ್ರ ತೊಂದರೆ ಅನುಭವಿಸಿದರು. ಊಟ ಸೇರಿದಂತೆ ಕೆಲ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟ ಅನುಭವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಘಟಿಕೋತ್ಸವ ಕಹಿ ಅನುಭವವನ್ನು ನೀಡಿತು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ