Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಹಾರಾಜ ಟ್ರೋಫಿ ಫೈನಲ್: ಈ ಸಲ ಮಂಗಳೂರು ಡ್ರಾಗನ್ಸ್‌ ಚಾಂಪಿಯನ್

Advertisement
ಮೈಸೂರು: ಮಂಗಳೂರು ಕ್ರಿಕೆಟ್ ತಂಡ ಈ ಬಾರಿ ಇತಿಹಾಸ ಸೃಷ್ಟಿ ಮಾಡಿದೆ. ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ ಪಡೆಯನ್ನು 154 ರನ್‌ಗಳಿಗೆ ಕಟ್ಟಿಹಾಕಿದ ಮಂಗಳೂರು ಡ್ರಾಗನ್ಸ್ 'ಮಹಾರಾಜ ಟ್ರೋಫಿ' ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿತು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಗುರಿ ಬೆನ್ನತ್ತಿದ ಮಂಗಳೂರು 10.4 ಓವರ್‌ಗಳಲ್ಲಿ 2 ವಿಕೆಟ್‌ಗೆ 85 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಒಂದು ಗಂಟೆ ನಂತರವೂ ಮಳೆ ಮುಂದುವರಿದಾಗ ಅಂಪೈರ್‌ಗಳು ಪಂದ್ಯ ಮುಗಿಸುವ ನಿರ್ಣಯ ಕೈಗೊಂಡರು. ವಿಜೆಡಿ ನಿಯಮದಂತೆ ಮಂಗಳೂರು 15 ರನ್ ಅಂತರದಿಂದ ಗೆಲುವು ಸಾಧಿಸಿತು. ಮೈದಾನದಲ್ಲಿನ ಮಳೆ ನೀರಿನಲ್ಲೇ ಆಟಗಾರರು ಕುಣಿದು ಕುಪ್ಪಳಿಸಿದರು.

ಮಂಗಳೂರು ತಂಡದ ಆರಂಭಿಕರಾದ ಲೋಚನ್ ಗೌಡ (18) ಹಾಗೂ ಬಿ.ಆರ್. ಶರತ್ (49 ರನ್, 35 ಎ, 4x4, 6X3) ಉತ್ತಮ ಆರಂಭ ಒದಗಿಸಿದರು. ಶರತ್ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ರಿತೇಶ್ ಭಟ್ಕಳ್ 14ಕ್ಕೆ 2 ವಿಕೆಟ್ ಪಡೆದರು.

ನಾಯಕ ದೇವದತ್ತ ಪಡಿಕಲ್ ಹಾಗೂ ಮೊಹಮ್ಮದ್ ತಾಹಾ ಜೋಡಿಯು ಹುಬ್ಬಳ್ಳಿಗೆ ಕೇವಲ 2.3 ಓವರ್‌ಗಳಲ್ಲಿ 38 ರನ್‌ಗಳ ಅಬ್ಬರದ ಆರಂಭ ಒದಗಿಸಿತು. ಆದರೆ ಪಡಿಕ್ಕಲ್, ಸಂತೋಕ್ ಸಿಂಗ್ ಎಸೆತದಲ್ಲಿ ಮೇಕ್ನಿಲ್ ನೊರೊನಾಗೆ ಮಿಡ್ ವಿಕೆಟ್‌ನಲ್ಲಿ ಕ್ಯಾಚಿತ್ತು ನಿರಾಸೆ ಮೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ತಾಹಾ ಆರನೇ ಓವರ್‌ನಲ್ಲಿ ಮೇಕ್ಷಿಲ್ ನೊರಾನಗೆ ವಿಕೆಟ್ ಒಪ್ಪಿಸುತ್ತಲೇ ಹುಬ್ಬಳ್ಳಿ ಬಳಗದಲ್ಲಿ ಆತಂಕದ ಮೋಡ ಕವಿಯಿತು. ಡ್ರಾಗನ್ಸ್‌ನ ಬೌಲರ್‌ಗಳ ಕರಾರುವಕ್ ಎಸೆತಗಳ ಎದುರು ಹುಬ್ಬಳ್ಳಿ ಬ್ಯಾಟರ್‌ಗಳು ತಿಣುಕಾಡಿದರು.

ಮತ್ತೊಂದೆಡೆ ಭದ್ರವಾಗಿ ನಿಂತ ಕೆ.ಎಲ್. ಶ್ರೀಜಿತ್ ( 52 ರನ್, 45 ಎಸೆತ, 4x4, 6x1) ತಂಡಕ್ಕೆ ಆಸರೆ ಆದರು. ತಾಳ್ಮೆಯ ಇನಿಂಗ್ಸ್ ಕಟ್ಟಿದ ಅವರು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಜೊತೆ ಉತ್ತಮ ಜೊತೆಯಾಟದ ಪ್ರಯತ್ನ ನಡೆಸಿದರು. ಕಡೆಯಲ್ಲಿ ಎಲ್. ಮನ್ವಂತ್‌ಕುಮಾರ್ 15 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.

ಡ್ರಾಗನ್ಸ್ ಪರ ಸ್ಪಿನ್ ಚಾದು ತೋರಿದ ಸಚಿನ್‌ ಶಿಂಧೆ 28ಕ್ಕೆ 3 ವಿಕೆಟ್ ಪಡೆದರೆ, ಆಫ್‌ಸ್ಪಿನ್ನರ್ ನೊರೊನಾ ಹಾಗೂ ವೇಗಿ ಶ್ರೀವತ್ಸ ಆಚಾರ್ಯ ತಲಾ 2 ವಿಕೆಟ್ ಪಡೆದರು. ಮಹಾರಾಜ ಟ್ರೋಫಿಯ ನಾಲ್ಕನೇ ಆವೃತ್ತಿ ಇದಾಗಿದ್ದು, ಹುಬ್ಬಳ್ಳಿ ಟೈಗರ್ಸ್ ಪಾಲಿಗೆ ಎರಡನೇ ಬಾರಿಗೆ ಫೈನಲ್.

ಮಹಾರಾಜ ಟ್ರೋಫಿಯ ನಾಲ್ಕನೇ ಆವೃತ್ತಿ ಇದಾಗಿದ್ದು, ಹುಬ್ಬಳ್ಳಿ ಟೈಗರ್ಸ್ ಎರಡನೇ ಬಾರಿಗೆ ಫೈನಲ್ ತಲುಪಿತ್ತು. 2023ರಲ್ಲಿ ತಂಡವು ಕಪ್ ಎತ್ತಿ ಹಿಡಿದಿತ್ತು. ಮಂಗಳೂರು ಡ್ರಾಗನ್ಸ್ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಬಿ.ಆರ್. ಶರತ್ ಪಂದ್ಯದ ಆಟಗಾರ ಹಾಗೂ ದೇವದತ್ತ ಪಡಿಕ್ಕಲ್ ಸರಣಿ ಆಟಗಾರ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 8 ವಿಕೆಟ್ ಗೆ 154

( ಕೆ.ಎಲ್. ಶ್ರೀಜಿತ್ 52, ಮೊಹಮ್ಮದ್ ತಾಹಾ 27, ಸಚಿನ್ ಶಿಂಧೆ 28ಕ್ಕೆ 3, ಮೇಕ್ಷಿಲ್ ನೊರೊನಾ 25ಕ್ಕೆ 2, ಶ್ರೀಶ ಆಚಾರ್ಯ 30ಕ್ಕೆ 2)

ಮಂಗಳೂರು ಡ್ರಾಗನ್ಸ್: 10.4 ಓವರ್‌ಗಳಲ್ಲಿ 2 ವಿಕೆಟ್‌ಗೆ 85

( ಬಿ.ಆರ್. ಶರತ್ 49, ಲೋಚನ್ ಗೌಡ 18, ರಿತೇಶ್ ಭಟ್ಕಳ್ 14ಕ್ಕೆ 2)

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ