Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದಕ್ಷಿಣವೂ ಬೇಕು..! ಉತ್ತರವೂ ಬೇಕು...!ಎಂದು ಪಟ್ಟು ಹಿಡಿದ ಲಿಂಗವಂತರು

ಜನ ಜೀವಾಳ ಜಾಲ ಬೆಳಗಾವಿ :ಬೆಳಗಾವಿ‌ ನಗರದ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತರಿಗೇ ಬಿಜೆಪಿ ಟಿಕೇಟ್ ನೀಡಬೇಕು ಎಂದು ಲಿಂಗಾಯತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಇಂದು ನಗರದ ನಾಗನೂರು ಮಠದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಲಿಂಗಾಯತ ಸಮಾಜದ ಬಹುಪಾಲು ಸಮುದಾಯಗಳು ಭಾಗವಹಿಸಿದ್ದವು.

ಕಳೆದ ಒಂದು ದಶಕದಿಂದಲೂ ಲಿಂಗಾಯತರಿಗೆ ಟಿಕೇಟ್ ನೀಡುವ ಆಸೆ ಹುಟ್ಟಿಸಿ ಬಿಜೆಪಿ ಪಕ್ಷ ಕಾಲ‌ ಕಳೆದಿದೆ. ಸದ್ಯ ಕಾಲ‌ ಸರಿ ಕೂಡಿ ಬಂದಿದ್ದು ಬೆಳಗಾವಿಯ ಉತ್ತರ- ದಕ್ಷಿಣ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತರಿಗೇ ವಿಧಾನಸಭೆ ಟಿಕೇಟ್ ಕೊಡುವಂತೆ ಆಗ್ರಹಿಸಲಾಗಿದೆ.
ಸಮಾಜ ಸೇವಕರು, ನಗರದ ಹಿರಿಯ ವೈದ್ಯರಾದ ಬಿಜೆಪಿಯ ಹಿರಿಯ ಸದಸ್ಯ ಡಾ. ರವಿ ಪಾಟೀಲ ಅಥವಾ ಮಾಜಿ ಬುಡಾ ಅಧ್ಯಕ್ಷ ಘೂಳಪ್ಪಾ ಹೊಸಮನಿ ಹಾಗೂ ದಕ್ಷಿಣಕ್ಕೆ ಅಡ್ವೋಕೇಟ್ ಮುರುಘೇಂದ್ರ ಪಾಟೀಲ ಅವರಿಗೆ ಟಿಕೇಟ್ ನೀಡಲೆಬೇಕು, ಇಲ್ಲದಿದ್ದರೆ ಲಿಂಗಾಯತರು ಪರ್ಯಾಯ ಮಾರ್ಗ ತುಳಿಯಬೇಕಾಗುತ್ತದೆ ಎಂದು ಲಿಂಗಾಯತ ನಾಯಕರು ಇಂದಿನ ಸಭೆಯಲ್ಲಿ ಎಚ್ಚರಿಸಿದ್ದಾರೆ.

ಬಿಜೆಪಿ ಪಕ್ಷದ ಟಿಕೇಟ್ ಪಡೆದು ಅಧಿಕಾರ ಅನುಭವಿಸಿರುವ ನಗರದ ಶಾಸಕರು ಹೊಸ ಮುಖಗಳಿಗೆ ಸ್ಥಾನ ಬಿಟ್ಟುಕೊಡಬೇಕು ಎಂದು ಆಗ್ರಹಿಸಲಾಗಿದೆ. ಬಿಜೆಪಿ ಕೇಅಮದ್ರ ಸಮಿತಿ ಟಿಕೇಟ್ ಘೋಷಿಸುವ ಮುನ್ನ ಲಿಂಗಾಯತರ ಈ ನಿರ್ಧಾರ ಗಮನಕ್ಕೆ ತೆಗೆದುಕೊಳ್ಳದಿದ್ದರೆ ಪರ್ಯಾಯ ಹೆಜ್ಜೆ ಇಡುವುದಾಗಿ ಎಚ್ಚರಿಸಿದೆ.
ಅಡ್ವೋಕೇಟ್ ಹಾಗೂ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಸುಜೀತ್ ಮುಳಗುಂದ , ವೀರಶೈವ ಮಹಾಸಭಾದ, ರತ್ನಪ್ರಭಾ ಬೆಲ್ಲದ, ಅಶೋಕ ಮಳಗಲಿ, ಶಂಕರ ಗುಡಸ, ಎ. ವೈ. ಬೆಂಡಿಗೇರಿ, ಅಶೋಕ ಬೆಂಡಿಗೇರಿ, ಮಹಾಂತೇಷ ಗುಡಸ, ಶಶಿ ಪಾಟೀಲ, ಈರಣ್ಣ ದೇಯನ್ನವರ ಇತರರು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ