Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚಾಕು ನುಂಗಿದ ನಾಗರಹಾವು ; ಮುಂದೇನಾಯ್ತು ?

ಕುಮಟಾ: ನಾಗರಹಾವು ಇಲಿ, ಕೋಳಿ ಮೊಟ್ಟೆ, ಹಾಗೆಯೇ ಹಾವುಗಳನ್ನೇ ನುಂಗುವುದನ್ನು ಕೇಳಿದ್ದೇವೆ. ಆದರೆ ಚಾಕುವನ್ನೇ ತನ್ನ ಆಹಾರ ಎಂದು ಭ್ರಮಿಸಿ ನುಂಗಿದರೆ ಅದರ ಕತೆ ಏನಾಗಬಹುದು..? ಆದರೆ ಇಂಥದ್ದೇ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕ ಎಂಬವರ ಮನೆಯಲ್ಲಿ ನಡೆದಿರುವುದು ವರದಿಯಾಗಿದೆ.

ಚಾಕುವನ್ನು ನುಂಗಿದ ನಾಗರ ಹಾವು ಅದನ್ನು ಜೀರ್ಣಿಸಿಕೊಳ್ಳಲೂ ಆಗದೆ, ಹೊರಕ್ಕೂ ಹಾಕಲಾಗದೆ ವಿಲವಿಲ ಒದ್ದಾಡಿದೆ. ನಂತರ ಅದನ್ನು ಯಶಸ್ವಿಯಾಗಿ ಹೊರಗೆ ತೆಗೆಯಲಾಗಿದೆ.

ಮನೆಯೊಳಗೆ ಬಂದಿದ್ದ ನಾಗರಹಾವು ಗೋವಿಂದ ನಾಯ್ಕ ಅಡುಗೆ ಮನೆಯ ಗೋಡೆಯಲ್ಲಿ ನೇತು ಹಾಕಿದ್ದ ಚಾಕು ಹೇಗೋ ಮನೆಯ ಹೊರಗಡೆ ನೆಲಕ್ಕೆ ಬಿದ್ದಿತ್ತು. ಆದರೆ ನಾಗರಹಾವು ಅದೇ ಜಾಗದಲ್ಲಿ ಓಡಾಡುತ್ತಿದ್ದುದರಿಂದ ಚಾಕು ಬಿದ್ದ ಸ್ಥಳಕ್ಕೆ ಹೋಗಲು ಮನೆಯವರು ಹೆದರಿದ್ದರು. ಆದರೆ ಅಚ್ಚರಿ ಎಂಬಂತೆ ಕೆಲ ಹೊತ್ತಿನಲ್ಲೇ ಚಾಕು ಕಣ್ಮರೆಯಾಗಿತ್ತು. ಚಾಕು ಹೇಗೆ ಮಾಯವಾಯಿತು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಆದರೆ ಅಲ್ಲಿದ್ದ ಹಾವು ಓಡಾಡುತ್ತಿರಲಿಲ್ಲ. ಆದರೆ ಮನೆಯವರು ಅದು ಏನೋ ತಿಂದು ವಿಶ್ರಾಂತಿ ಮಾಡುತ್ತಿದೆ ಎಂದು ಭಾವಿಸಿದ್ದರು. ಹೀಗಾಗಿ ಹಾವು ತಾನಾಗಿಯೇ ಹೋಗಲಿ ಕೆಲಹೊತ್ತು ಕಾಯ್ದರು. ಆದರೆ ಎಷ್ಟು ಹೊತ್ತಾದರೂ ನಾಗರಹಾವು ಮಾತ್ರ ಅಲ್ಲಿಂದ ಮಿಸುಕಾಡಲಿಲ್ಲ. ಅದು ಸಹಜ ಸ್ಥಿತಿಯಲ್ಲಿ ಇದ್ದಂತೆ ಕಂಡುಬರಲಿಲ್ಲ. ಇದೇವೇಳೆ ಚಾಕುವೂ ಮಾಯವಾಗಿತ್ತು. ಹೀಗಾಗಿ ಮನೆಯವರಿಗೆ ಇದು ಚಾಕುವನ್ನು ನುಂಗಿರಬಹುದೇ ಎಂಬ ಬಗ್ಗೆ ಅನುಮಾನ ಬಂತು. ಮನೆಯವರು ತಕ್ಷಣ ಉರಗ ತಜ್ಞ ಪವನ ನಾಯ್ಕ ಅವರಿಗೆ ಮಾಹಿತಿ ನೀಡಿದರು.

 

ಪವನ್‌ ನಾಯ್ಕ ಅವರು ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲಿಸಿ ಅದು ಚಾಕು ನುಂಗಿರುವುದನ್ನು ಖಾತ್ರಿ ಪಡಿಸಿದರು. ಚಾಕುವಿನ ತುದಿ ಹಾವಿನ ಎದೆಯ ಗಂಟಲಿನ ಸಮೀಪದ ಎದೆಯ ಭಾಗಕ್ಕೆ ಸಿಲುಕಿತ್ತು. ಆದರೆ ಅದನ್ನು ಹೊರಹಾಕಲು ಅದು ಒದ್ದಾಡುತ್ತಿತ್ತು. ಚಾಕು ಹೊರ ತೆಗೆಯದಿದ್ದಾರೆ ಹಾವು ಸಾಯುತ್ತದೆ ಎಂದು ಅರಿತ ಪವನ್‌ ಅವರು ಹಾವನ್ನು ಹಿಡಿದುಕೊಂಡು ಪಶು ಆಸ್ಪತ್ರೆಯ ಸಹಾಯಕರಾದ ಅದ್ವೈತ ಭಟ್ ಅವರ ಮನೆಗೆ ಒಯ್ದರು. ಪಶು ವೈದ್ಯರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನ ನಡೆಸಿದ ನಂತರ ಚಾಕುವನ್ನು ನಾಗರಹಾವಿನ ಹೊಟ್ಟೆಯಿಂದ ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ಹಾವು ಪ್ರಾನಾಪಾಯದಿಂದ ಬಚಾವ್‌ ಆಗಿದೆ. ನಂತರ ಹಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬರಲಾಯಿತು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ