Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯ ಸ್ವಾಮೀಜಿಗೆ ಒಲಿದು ಬಂತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

 

ಬೆಳಗಾವಿ :
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರಿಗೆ ಸಮಾಜ ಸೇವ ಕ್ಷೇತ್ರ ಹಾಗೂ ಡಾ.ಎಸ್.ಬಾಳೇಶ ಭಜಂತ್ರಿ ಅವರಿಗೆ ಸಂಗೀತ-ನೃತ್ಯ ಕ್ಷೇತ್ರದಲ್ಲಿ ಈ ಸಲದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಘೋಷಣೆ ಮಾಡಿದರು.

ಬಳಿಕ ಮಾತನಾಡಿದ ಅವರು, 2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರತಿನಿತ್ಯ ನೀಡಲಾಗಿದೆ. ‘ಕರ್ನಾಟಕ ಸಂಭ್ರಮ-50’ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 100 ವರ್ಷ ವಯಸ್ಸು ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಪೈಕಿ ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು. 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಒಬ್ಬರು ಮಂಗಳ ಮುಖಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪ್ರಶಸ್ತಿ 5 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಮೆಡಲ್ ಒಳಗೊಂಡಿರಲಿದೆ.

ಈ ಬಾರಿ ಜಾನಪದ ಕ್ಷೇತ್ರದಲ್ಲಿ 9 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಜಾನಪದ ಕ್ಷೇತ್ರದಲ್ಲಿ ಹುಸೇನಾಬಿ ಬುಡೆನ್​ ಸಾಬ್​ ಸಿದ್ಧಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಚೌಡಮ್ಮ, ಹೆಚ್​.ಕೆ.ಕಾರಮಂಚಪ್ಪ, ವಿಭೂತಿ ಗುಂಡಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಸಮಾಜಸೇವೆ ಕ್ಷೇತ್ರದಲ್ಲಿ 5 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ಕೆ.ರೂಪಾ ನಾಯಕ್, ನಿಜಗುಣಾನಂದ ಸ್ವಾಮೀಜಿ, ಜಿ.ನಾಗರಾಜು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಡಳಿತ ಕ್ಷೇತ್ರದಲ್ಲಿ ಜಿ.ವಿ.ಬಲರಾಮ್​ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಜಿ.ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ ಅವರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸಿ. ನಾಗಣ್ಣ, ಹೆಚ್​.ಕೆ. ಸುಬ್ಬಯ್ಯ, ಸತೀಶ್ ಕುಲಕರ್ಣಿ, ಲಕ್ಷ್ಮೀಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ.ಷರೀಫಾಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

 

ಶಿಕ್ಷಣ ಕ್ಷೇತ್ರದಲ್ಲಿ ಮೂವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ರಾಮಪ್ಪ ಹವಳೆ, ಕೆ. ಚಂದ್ರಶೇಖರ್, ಕೆ.ಟಿ. ಚಂದ್ರು ಪ್ರಶಸ್ತಿ ವಿಜೇತರಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಟಿ.ಎಸ್​. ದಿವ್ಯಾ, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಕ್ಷೇತ್ರವಾರು ಪಟ್ಟಿಯನ್ನು ಇಲ್ಲಿ ನೀಡಲಾಗಿದೆ;

ಚಲನಚಿತ್ರ ಕ್ಷೇತ್ರ
ಡಿಂಗ್ರಿ ನಾಗರಾಜ್
ಬಿ. ಜನಾರ್ದನ (ಬ್ಯಾಂಕ್ ಜನಾರ್ದನ)

ರಂಗಭೂಮಿ ಕ್ಷೇತ್ರ
ಎ.ಜಿ. ಚಿದಂಬರ ರಾವ್ ಜಂಬೆ
ಪಿ. ಗಂಗಾಧರ ಸ್ವಾಮಿ
ಹೆಚ್.ಬಿ.ಸರೋಜಮ್ಮ
ತಯ್ಯಬಖಾನ್ ಎಂ.ಇನಾಮದಾರ
ಡಾ.ವಿಶ್ವನಾಥ್ ವಂಶಾಕೃತ ಮಠ
ಪಿ.ತಿಪ್ಪೇಸ್ವಾಮಿ

ಸಂಗೀತ ಕ್ಷೇತ್ರ
ಡಾ.ನಯನ ಎಸ್.ಮೋರೆ
ನೀಲಾ ಎಂ ಕೊಡ್ಲಿ
ಶಬ್ಬೀರ್ ಅಹಮದ್
ಡಾ.ಎಸ್ ಬಾಳೇಶ ಭಜಂತ್ರಿ

 

ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ
ಟಿ.ಶಿವಶಂಕರ್
ಕಾಳಪ್ಪ ವಿಶ್ವಕರ್ಮ
ಮಾರ್ಥಾ ಜಾಕಿಮೋವಿಚ್
ಪಿ.ಗೌರಯ್ಯ

ಯಕ್ಷಗಾನ & ಬಯಲಾಟ ಕ್ಷೇತ್ರ
ಆರ್ಗೋಡು ಮೋಹನದಾಸ ಶೆಣೈ
ಕೆ. ಲೀಲಾವತಿ ಬೈಪಾಡಿತ್ತಾಯ,
ಕೇಶಪ್ಪ ಶಿಳ್ಳಿಕ್ಯಾತರ
ದಳವಾಯಿ ಸಿದ್ದಪ್ಪ

ಜಾನಪದ ಕ್ಷೇತ್ರ
ಹುಸೇನಾಬಿ ಬುಡೆನ್ ಸಾಬ್ ಸಿದ್ದಿ
ಶಿವಂಗಿ ಶಣ್ಮರಿ
ಮಹದೇವು
ನರಸಪ್ಪಾ
ಶಕುಂತಲಾ ದೇವಲಾನಾಯಕ
ಎಚ್‌.ಕೆ ಕಾರಮಂಚಪ್ಪ
ಶಂಭು ಬಳಿಗಾರ
ವಿಭೂತಿ ಗುಂಡಪ್ಪ
ಚೌಡಮ್ಮ

ಸಮಾಜಸೇವೆ ಕ್ಷೇತ್ರ ರಾಜ್ಯೊತ್ಸವ ಪ್ರಶಸ್ತಿ
ಹುಚ್ಚಮ್ಮ ಬಸಪ್ಪ ಚೌದ್ರಿ
ಚಾರ್ಮಾಡಿ ಹಸನಬ್ಬ
ಕೆ.ರೂಪ್ಲಾ ನಾಯಕ್
ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ
ನಾಗರಾಜು.ಜಿ

ಆಡಳಿತ ಕ್ಷೇತ್ರ
ಬಲರಾಮ್, ತುಮಕೂರು
ವೈದ್ಯಕೀಯ ಕ್ಷೇತ್ರ
ಡಾ.ಸಿ. ರಾಮಚಂದ್ರ, ಬೆಂಗಳೂರು
ಡಾ.ಪ್ರಶಾಂತ್, ದ.ಕನ್ನಡ

ಸಾಹಿತ್ಯ ಕ್ಷೇತ್ರ
ಪ್ರೊ. ಸಿ.ನಾಗಣ್ಣ, ಚಾಮರಾಜನಗರ
ಸುಬ್ಬು ಹೊಲೆಯಾರ್, ಹಾಸನ
ಸತೀಶ್ ಕುಲಕರ್ಣಿ, ಹಾವೇರಿ
ಲಕ್ಷ್ಮೀಪತಿ ಕೋಲಾರ
ಪರಪ್ಪ ಗುರುಪಾದಪ್ಪ ಸಿದ್ದಾಪುರ
ಡಾ.ಕೆ.ಷರೀಫಾ

ಶಿಕ್ಷಣ ಕ್ಷೇತ್ರ
ರಾಮಪ್ಪ, ರಾಯಚೂರು
ಕೆ.ಚಂದ್ರಶೇಖರ್, ಕೋಲಾರ
ಕೆ.ಟಿ ಚಂದು, ಮಂಡ್ಯ

ಕ್ರೀಡಾ ಕ್ಷೇತ್ರ
ಟಿ.ಎಸ್​. ದಿವ್ಯಾ
ಅದಿತಿ ಅಶೋಕ
ಅಶೋಕ ಗದಿಗೆಪ್ಪ ಏಣಗಿ

ಪರಿಸರ ಕ್ಷೇತ್ರ
ಸೋಮನಾಥ ರೆಡ್ಡಿ ಪೂರ್ಮಾ
ದ್ಯಾವನಗೌಡ ಟಿ ಪಾಟೀಲ
ಶಿವರೆಡ್ಡಿ ಹನುಮರೆಡ್ಡಿ ವಾಸನ

ನ್ಯಾಯಾಂಗ ಕ್ಷೇತ್ರ
ಜ. ವಿ.ಗೋಪಾಲ ಗೌಡ

ಸಂಕೀರ್ಣ ಕ್ಷೇತ್ರ
ಎಂ.ಎಂ. ಮದರಿ
ಹಾಜಿ ಅಬ್ದುಲ್ಲಾ, ಪರ್ಕಳ
ಮಿಮಿಕ್ರಿ ದಯಾನಂದ್
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ

ಮಾಧ್ಯಮ ಕ್ಷೇತ್ರ
ದಿನೇಶ ಅಮೀನ್​​ಮಟ್ಟು
ಜವರಪ್ಪ
ಮಾಯಾ ಶರ್ಮ
ರಫೀ ಭಂಡಾರಿ
ವಿಜ್ಞಾನ ಮತ್ತು ತಂತ್ರಜ್ಞಾನ
ಎಸ್​​​. ಸೋಮನಾಥನ್​​​​ ಶ್ರೀಧರ್​​ ಪನಿಕರ್​​​
ಪ್ರೊ. ಗೋಪಾಲನ್ ಜಗದೀಶ್
ಹೊರನಾಡು ಮತ್ತು ಹೊರದೇಶ
ಸೀತಾರಾಮ ಅಯ್ಯಂಗಾರ್​​​​
ದೀಪಕ್​​​ ಶೆಟ್ಟಿ
ಶಶಿಕಿರಣ್​​​​ ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರ
ಪುಟ್ಟಸ್ವಾಮಿ ಗೌಡ
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ