Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಉಷಾತಾಯಿ ಗೊಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಗೌರವ 

ಬೆಳಗಾವಿ : ಬೆಳಗಾವಿ ಜ್ಯುಕೇಶನ್ ಸೊಸೈಟಿಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ 2025–26 ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 99% ಬಂದಿದೆ. 46 ವಿದ್ಯಾರ್ಥಿನಿಯರು ವಿಶೇಷ ಶ್ರೇಣಿಯಲ್ಲಿ , 77 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ , 21 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ಹಾಗೂ 11 ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಾವ ಉತ್ತೀರ್ಣರಾಗಿದ್ದಾರೆ. ಅನುಷಾ ಕನ್ನಾಳ ಅವರು 98.72% ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಪರೀಕ್ಷೆಯಲ್ಲಿ ವಿಶೇಷ ಪ್ರಾವೀಣ್ಯತೆಯೊಂದಿಗೆ ಉತ್ತೀರ್ಣರಾದ 46 ವಿದ್ಯಾರ್ಥಿನಿಯರು ಹಾಗೂ ಅವರ ಪಾಲಕರಿಗೆ ಸಂಸ್ಥೆಯ ವತಿಯಿಂದ ಗುಲಾಬಿ ಹೂವು ಮತ್ತು ಪೇಡೆ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಅವಿನಾಶ್ ಪೋತದಾರ ಮತ್ತು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಚಿಂತಾಮಣಿ ಗ್ರಾಮೋಪಾಧ್ಯೆ, ಶಾಲೆಯ ನಿವೃತ್ತ ಶಿಕ್ಷಕಿ ಸರಸ್ವತಿ ದೇಸಾಯಿ ಉಪಸ್ಥಿತರಿದ್ದರು. 

ಶಾಲೆಯ ಮುಖ್ಯೋಪಾಧ್ಯಾಯ ಎಂ.ಕೆ. ಮದಾರ ಸ್ವಾಗತಿಸಿದರು. ಅವಿನಾಶ್ ಪೋತದಾರ ಮತ್ತು ಚಿಂತಾಮಣಿ ಗ್ರಾಮೋಪಾಧ್ಯೆ ಅವರು ಯಶಸ್ವಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.

ಸರ್ಕಾರಿ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ನಂಬರ್ 5 ವಡಗಾವಿ ಈ ಶಾಲೆಯ ಮುಖ್ಯೋಪಾಧ್ಯಾಯ ನಂದೇಶ ಕಾಗತೀಕರ ಅವರು ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಅನುಷಾ ಕನ್ನಾಳ ಅವರಿಗೆ ₹5000 ಮತ್ತು ಮರಾಠಿ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಪೂಜಾ ಜಾಧವ ಅವರಿಗೆ ₹5000 ಬಹುಮಾನ ನೀಡಿದರು. ಅದೇ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಾದ ರಾಜೇಂದ್ರ ಭಂಡಾರಿ ಅವರು ಅನುಷಾ ಕನ್ನಾಳ ಅವರಿಗೆ ₹2500 ಬಹುಮಾನ ನೀಡಿದರು.

ಹತ್ತನೇ ತರಗತಿಯ ವರ್ಗ ಶಿಕ್ಷಕ ವೆಂಕಟೇಶ ಕುಲಕರ್ಣಿ ವಂದಿಸಿದರು. ಶ್ರೀದೇವಿ ಕುಲಕರ್ಣಿ ನಿರೂಪಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತಿಯ ಸಹೋದರಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ವಿಚ್ಛೇದನ ಪಡೆದ ಮಹಿಳೆ…!ಮಾಂಸಾಹಾರದ ಅಡುಗೆ ವಿಚಾರಕ್ಕೆ ಜಗಳ; ಪತಿಯನ್ನೇ ಕಡಿದು ಕೊಂದ ಪತ್ನಿ  ಉಷಾತಾಯಿ ಗೊಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಗೌರವ ಮೇ ಎರಡನೇ ಅಥವಾ ಮೂರನೇ ವಾರಕ್ಕೆ ಸಿಹಿಸುದ್ದಿ: ಅಶೋಕ ಪಟ್ಟಣಕುವೆಂಪು ವಿಶ್ವವಿದ್ಯಾನಿಲಯದಿಂದ ಐಜಿಪಿ ಹರ್ಷ ಪಿ.ಎಸ್ ಅವರಿಗೆ ಪಿಎಚ್‌ಡಿ ಪದವಿ ಘೋಷಣೆಬೆಳಗಾವಿಯ ಪ್ರಭಾವಿ ವಕೀಲೆ ಮನೆ ಮೇಲೆ ಗುಂಡಿನ ದಾಳಿಮತ್ತೊಂದು ಭವಿಷ್ಯ ನುಡಿದ ಶ್ರೀರಂಗಸೃಷ್ಟಿಯಿಂದ ಏ.28ರಂದು “ಸೆಕೆಂಡ್ ಹ್ಯಾಂಡ್ ಸದಾಶಿವ” ಹಾಸ್ಯ ನಾಟಕವಿಶ್ವದ ಸ್ಮಾರ್ಟ್ ನಗರಗಳನ್ನೂ ಮೀರಿಸುವ ತಂತ್ರಜ್ಞಾನ ಹೊಂದಿರುವ ಭಾರತದ ಗ್ರಾಮಗಳು…!ವಿಶ್ವದ ಸ್ಮಾರ್ಟ್ ನಗರಗಳನ್ನೂ ಮೀರಿಸುವ ತಂತ್ರಜ್ಞಾನ ಹೊಂದಿರುವ ಭಾರತದ ಗ್ರಾಮಗಳು…!