Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಡಾ.ಪ್ರಭಾಕರ ಕೋರೆಯವರಿಗೆ ಶ್ರೀ ಎಚ್. ಡಿ. ದೇವೇಗೌಡ ಪ್ರಶಸ್ತಿ

ಬೆಳಗಾವಿ : ಮಾಜಿ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ರಾಜಕೀಯ ಮುತ್ಸದ್ದಿ ಶ್ರೀ ಹೆಚ್.ಡಿ.ದೇವೇಗೌಡರು ತಮ್ಮ ಬದುಕಿನ ೯೩ ಸಾರ್ಥಕ ವರ್ಷಗಳನ್ನು ಪೂರೈಸಿ, ಅಭಿಮಾನಿಗಳಿಂದ "ಗಂಗ ಸಾಮ್ರಾಟ ಶ್ರೀಪುರುಷ" ಪ್ರಶಸ್ತಿಗೆ ಭಾಜನರಾದ ನಿಮಿತ್ತ ವಿವಿಧ ರಂಗಗಳಲ್ಲಿ ಸಾಧನೆಗೈದಿರುವ ೯೩ ಕೀರ್ತಿಸಂಪನ್ನರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಡಾ.ಬಾಬು ಜಗಜೀವನ್‌ರಾಮ್ ಭವನದಲ್ಲಿ ದಿನಾಂಕ ೨೨ ಜೂನ ೨೦೨೫ ರಂದು ಜರುಗಿತು. ಶ್ರೀ ಹೆಚ್.ಡಿ.ದೇವೇಗೌಡ ಅಭಿನಂದನಾ ಸಮಿತಿಯು ಡಾ.ಪ್ರಭಾಕರ ಕೋರೆಯವರಿಗೆ 'ಶ್ರೀ ಹೆಚ್.ಡಿ.ದೇವೇಗೌಡ ಪ್ರಶಸ್ತಿ'ಯನ್ನು ಪ್ರದಾನ ಮಾಡಿದೆ.

ಸನ್ಮಾನ್ಯ ಡಾ.ಪ್ರಭಾಕರ ಕೋರೆಯವರು ಶಿಕ್ಷಣ, ಕೃಷಿ, ಸಹಕಾರ, ರಾಜಕೀಯ, ಸಮುದಾಯದ ಕ್ಷೇಮಾಭಿವೃದ್ಧಿ ಕ್ಷೇತ್ರದಲ್ಲಿನ 'ನ ಭೂತೋ ನ ಭವಿಷ್ಯತಿ' ಎಂಬ ಮಟ್ಟದಲ್ಲಿ ಅಗಾಧವಾದ ಸೇವೆಯನ್ನು ಸಲ್ಲಿಸುತ್ತಾ, ಕರ್ನಾಟಕ ರಾಜ್ಯ ಬಹುದೊಡ್ಡ ಆಸ್ತಿಯಾಗಿ ದೇಶ ವಿದೇಶಗಳಲ್ಲೂ ಜನಮನ್ನಣೆ ಗಳಿಸಿರುವ ಡಾ.ಪ್ರಭಾಕರ ಕೋರೆಯವರು ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಹೆಸರನ್ನು ಇಡೀ ವಿಶ್ವದಲ್ಲಿ ಪ್ರಸಿದ್ಧಿ ಪಡಿಸಿರುವುದು ಹೆಮ್ಮೆಯ ಸಂಗತಿ. ಈ ನಾಡಿಗೆ ದೇಶಕ್ಕೆ ಅಪಾರ ಕೀರ್ತಿ ತಂದಿರುವ ಸಾಧನೆಯ ಶಿಖರ ಡಾ.ಕೋರೆಯವರಿಗೆ 'ಶ್ರೀ ಹೆಚ್.ಡಿ.ದೇವೇಗೌಡ ಪ್ರಶಸ್ತಿ'ಯನ್ನು ನೀಡಿ ಅಭಿನಂದಿಸಲಾಗಿದೆ. ಈ ಪ್ರಶಸ್ತಿಗೆ ಪುರಸ್ಕೃತರಾದ ಡಾ.ಪ್ರಭಾಕರ ಕೋರೆಯವರನ್ನು ಕೆಎಲ್‌ಇ ಆಡಳಿತ ಮಂಡಳಿ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಕಲಗಿ ಪಟ್ಟಣದಲ್ಲಿ ವಿಜಯ ದಶಮಿ ನಿಮಿತ್ತ ಶ್ರೀ ಮಹಾಲಕ್ಷ್ಮೀ ದೇವಿ ಅಗ್ನಿ ಹಾಯುವ ಕಾರ್ಯಕ್ರಮ.ಮಾರ್ಕಂಡೇಯ ನದಿಯಲ್ಲಿ  ಮರ್ಡರ್..?ಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerನೀಲಿ ಡ್ರಮ್ ಕೊಲೆ ಪ್ರಕರಣ : ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ ಶಿಕ್ಷೆRCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರು