Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪ್ರೇಕ್ಷಣೀಯ/ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ಹೋಗುವ ಪ್ರಯಾಣಿಕರಿಗೆ ವಿಶೇಷ ಪ್ರವಾಸ ಪ್ಯಾಕೇಜ್ ಸೌಲಭ್ಯ

 

ಬೆಳಗಾವಿ :
ಬೆಳಗಾವಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿವಿಧ ಐತಿಹಾಸಿಕ/ಧಾರ್ಮಿಕ ಪ್ರವಾಸಿ ತಾಣಗಳಿಗೆ ಮೊದಲ ಬಾರಿಗೆ ಏಕ ಕಾಲಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಏಕದಿನ ಪ್ರವಾಸ ಪ್ಯಾಕೇಜ್‌ಗಳನ್ನು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದಿಂದ ಪ್ರಾರಂಭಿಸಲಾಗಿದೆ.
ಈಗಾಗಲೇ ಚಾಲನೆಯಲ್ಲಿರುವ ಪ್ರವಾಸಿ ಪ್ಯಾಕೇಜ್ 1 & 2 ಗಳನ್ನು ಹೊರತುಪಡಿಸಿ ನೂತನವಾಗಿ ಏಳು (7) ಏಕದಿನ ಪ್ರವಾಸ ಪ್ಯಾಕೇಜ್‌ಗಳನ್ನು ಸೇರಿದಂತೆ ಪ್ರಾಯೋಗಿಕ ಪ್ರಾರಂಭಿಸಲಾಗಿದೆ. ಇದರಂತೆ ಒಟ್ಟು 9 ಪ್ಯಾಕೇಜ್‌ಗಳನ್ನು ಪ್ರತಿ 2 ಮತ್ತು 4 ನೇ ಶನಿವಾರ ಹಾಗೂ ಪ್ರತಿ ಭಾನುವಾರಗಳಂದು ಅಗಸ್ಟ್.12 ರಿಂದ ಜಾರಿಗೆ ಬರುವಂತೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ & ಬೈಲಹೊಂಗಲ ಬಸ್ ನಿಲ್ದಾಣಗಳಿಂದ ಕಾರ್ಯಾಚರಿಸಲಾಗುವುದು.

ಸದರಿ ಸಾರಿಗೆಗಳಿಗೆ ಇ-ಟಿಕೇಟನ್ನು ಆನ್‌ಲೈನ್ ಮೊಬೈಲ್ ಮುಖಾಂತರ ಕಾಯ್ದಿರಿಸಬಹುದಾಗಿದೆ. ಅಲ್ಲದೇ ಸಂಸ್ಥೆಯ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಮುಂಗಡ ಟಿಕೇಟ್ ಕೌಂಟರ್ ಹಾಗೂ ಸಂಸ್ಥೆಯಿಂದ ನಿಗದಿಪಡಿಸಿರುವ ಬೆಳಗಾವಿಯ ವಿವಿಧ ಸ್ಥಳದಲ್ಲಿರುವ ಸಂಸ್ಥೆಯ ಅವತಾರ ಬುಕ್ಕಿಂಗ್ ಏಜಂಟರಲ್ಲಿಯೂ ಸಹ ಮುಂಗಡ ಟಿಕೇಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ.

ವೀಕ್ಷಣಾ ಸ್ಥಳಗಳ ವಿವರ:
ಬೆಳಗಾವಿ-ಹಿಡಕಲ್ ಡ್ಯಾಂ-ಗೊಡಚಿನಮಲ್ಕಿ ಜಲಪಾತ-ಗೋಕಾಕ ಜಲಪಾತ, ಬೆಳಗಾವಿ-ನಾಗರತಾಸ ಜಲಪಾತ-ಅಂಬೋಲಿ ಜಲಪಾತ, ಬೆಳಗಾವಿ-ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕೊಲ್ಹಾಪುರ-ಶ್ರೀ ಕ್ಷೇತ್ರ ಕನ್ಹೇರಿ ಮಠ (ಮಹಾರಾಷ್ಟ್ರ), ಬೆಳಗಾವಿ-ಕಕ್ಕೇರಿ (ಬಿಷ್ಟಾದೇವಿ ದೇವಸ್ಥಾನ)-ದಾಂಡೇಲಿ ಮೊಸಳೆ ಪಾರ್ಕ-ಮೌಳಂಗಿ ಫಾಲ್ಸ್- ಕೂಳಗಿ ನೇಚರ್ ಪಾರ್ಕ್, ಬೆಳಗಾವಿ-ರಾಜಹಂಸಗಡ-ಮಿಲಿಟರಿ ಶ್ರೀ ಮಹಾದೇವ ದೇವಸ್ಥಾನ-ಕಿ.ರಾ.ಚ. ಮೃಗಾಲಯ-ಶ್ರೀ ರೇವಣ ಸಿದ್ದೇಶ್ವರ ಮಂದಿರ ಹುಂಚೆವಾರಿ ಮಠ, ಬೆಳಗಾವಿ-ಗಂಗಾಬಿಕಾ ಐಕ್ಯಸ್ಥಳ/ಶ್ರೀ ಅಶ್ವಥ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ (ಎಂ.ಕೆ ಹುಬ್ಬಳ್ಳಿ)- ಕಿತ್ತೂರು ಕೋಟೆ -ಶ್ರೀ ಸೋಮೇಶ್ವರ ದೇವಸ್ಥಾನ ಸೊಗಲ- ನವಿಲುತೀರ್ಥ ಡ್ಯಾಂ (ಮುನವಳ್ಳಿ), ಬೆಳಗಾವಿ- ರಾಜಹಂಸಗಡ- ಶ್ರೀ ಸಿದ್ಧೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ ಬೆಳಗುಂದಿ-ರಕ್ಕಸಕೊಪ್ಪ ಡ್ಯಾಮ್-ಧಾಮಣೆ ಫಾಲ್ಸ್/ನೇಚರ ಕ್ಯಾಂಪ್-ಶ್ರೀವೈಜನಾಥ ದೇವಸ್ಥಾನ ಮಹಿಪಾಲಗಡ, ಬೈಲಹೊಂಗಲ-ಶ್ರೀ ವೀರಭದ್ರೇಶ್ವರ ದೇವಸ್ಥಾನ ಗೊಡಚಿ-ಮೇಣ ಬಸದಿ ಬದಾಮಿ ಗುಹೆಗಳು-ಶ್ರೀ ಬನಶಂಕರಿ ದೇವಸ್ಥಾನ-ಶ್ರೀ ಶಿವಯೋಗಿ ಮಂದಿರ, ಬೆಳಗಾವಿ-ರಾಜಹಂಸಗಡ-ಅಸೋಗಾ ಹೊಳೆ ದಂಡೆ-ನಂದಗಡ ಸಂಗೊಳ್ಳಿ ರಾಯಣ್ಣ ಸಮಾಧಿ-ಹಲಸಿ ಶ್ರೀ ಕದಂಬೇಶ್ವರ ದೇವಸ್ಥಾನ-ಕಕ್ಕೇರಿ ಶ್ರೀ ಬಿಷ್ಠಾದೇವಿ ದೇವಸ್ಥಾನ.
ಹೆಚ್ಚಿನ ಮಾಹಿತಿಗಾಗಿ ನಿಲ್ದಾಣ ಮೇಲ್ವಿಚಾರಕರು ಕೇ.ಬ.ನಿ ಬೆಳಗಾವಿ ಮೋ.ಸಂ-೭೭೬೦೯೯೧೬೧೨, ೭೭೬೦೯೯೧೬೧೩ ಹಾಗೂ ಘಟಕ ವ್ಯವಸ್ಥಾಪಕರು ಬೆಳಗಾವಿ-೧ ಮೊ.ಸಂ-೭೭೬೦೯೯೧೬೨೫, ಘಟಕ ವ್ಯವಸ್ಥಾಪಕರು ಬೆಳಗಾವಿ-೨ ಮೊ.ಸಂ-೭೭೬೦೯೯೧೬೨೬, ಘಟಕ ವ್ಯವಸ್ಥಾಪಕರು ಬೆಳಗಾವಿ-೩ ಮೊ.ಸಂ-೭೭೬೦೯೯೧೬೨೭, ಘಟಕ ವ್ಯವಸ್ಥಾಪಕರು ಬೆಳಗಾವಿ-೪ ಮೊ.ಸಂ-೭೬೧೮೭೬೫೯೦೪, ಘಟಕ ವ್ಯವಸ್ಥಾಪಕರು ಬೈಲಹೊಂಗಲ ಘಟಕ ಮೊ.ಸಂ-೭೭೬೦೯೯೧೬೨೮ & ಘಟಕ ವ್ಯವಸ್ಥಾಪಕರು ಖಾನಾಪುರ ಮೊ.ಸಂ-೭೭೬೦೯೯೧೬೩೧ ಇವರನ್ನು ಸಂಪರ್ಕಿಸಬಹುದು ಎಂದು ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ