Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶರಣರ ವಚನಗಳು ದಾರಿ ದೀಪ : ಸುನೀತಾ ನಂದೆಣ್ಣವರ

ಬೆಳಗಾವಿ : ವಚನ ಪಿತಾಮಹ ಡಾ ಫ ,ಗು, ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ, 5-1-2025 ರಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಶರಣೆ ಸುನೀತಾ ನಂದೆಣ್ಣವರ ಅವರು ಶರಣರ ವಚನಗಳು ಮತ್ತು ವಿವೇಕ ವಾಣಿ ಕುರಿತು ಉಪನ್ಯಾಸ ನೀಡಿದರು.

ವಿವೇಕಾನಂದರ ದೇಶಪ್ರೇಮ ಜಗತ್ತಿಗೆ ಮಾದರಿ. ಅಣು ಅಣುವಿನಲ್ಲಿ ಜೀವವಿದೆ ಜಗತ್ತಿಗೆ ಆಧ್ಯಾತ್ಮಿಕತೆಯನ್ನು ಎತ್ತಿ ತೋರಿಸುವುದರ ಜೊತೆಗೆ ಭಾರತದ ಕೀರ್ತಿಯನ್ನು ವಿಶ್ವಕ್ಕೆ ಹರಡಿದರು. ಭಾರತವನ್ನು ಮತ್ತು ಭಾರತದ ಎಲ್ಲರನ್ನು ಪ್ರೀತಿಸಿ, ಗೌರವಿಸಿ ಎಂದು ಹೇಳುತ್ತಿದ್ದರು. ನಮ್ಮ ನೆಲದ ಶ್ರೀಮಂತ ಸಂಸ್ಕೃತಿಯನ್ನು ನಾವು ಅಳವಡಿಸಿಕೂಳ್ಳಬೇಕು. ಇಂದು ಯುವ ಜನಾಂಗ ದಾರಿ ತಪ್ಪಿ ನಡೆಯುತ್ತಿದ್ದಾರೆ ಅವರನ್ನು ತಿದ್ದಿ ಸರಿ ದಾರಿಗೆ ತರಬೇಕಾಗಿದೆ ಅದು ನಮ್ಮೆಲ್ಲರ ಜವಾಬ್ದಾರಿಯು ಆಗಿದೆ. ಜೀವತ್ಮನಲ್ಲಿ ಪರಮಾತ್ಮನ ಅಂಶ ಇರುವುದರಿ ವಿಶ್ವದ ಜನರಲ್ಲೆ ಒಂದೇ ಎಂದು ವಿವೇಕಾನಂರು ಸಾರಿದರೆ ಬಸವಣ್ಣನವರು ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದನಿಸಯ್ಯಾ ಎಂದರು. ಜ್ಞಾನವು ನಮ್ಮೊಳಗೆ ಇದೆ ಏಳಿ ಎದ್ದೆಳೆ ಜಾಗ್ರತರಾಗಿರಿ ಸೋಮಾರಿಗಳಾಗದೆ ಕೆಲಸ ಮಾಡಿ ಸತ್ಯವನ್ನು ಎಂತಹ ಪರಿಸ್ಥಿತಿಯಲ್ಲಿಯೂ ಬಿಡಬೇಡಿ ಎಂದು ವಿವೇಕಾನಂದರು ಹೇಳಿದರೆ ಶರಣರು ಕಾಯಕ, ದಾಸೋಹ, ಅನುಭವ ಮಂಟಪದಲ್ಲಿ ತಮ್ಮ ಜ್ಞಾನದ ಅನುಭಾವವನ್ನು ಹಂಚಿಕೊಳ್ಳುತ್ತಿದ್ದರು. ಕೊರಲುಗನೆ ಗೈದು ಸಧ್ಭಕ್ತರಾದರು. ಮೂರ್ತಿ ಪೂಜೆಯನ್ನು ವಿವೇಕಾನಂದರು ವಿರೋದಿಸಿದರು ದೇಹವೇ ದೇವಾಲಯ ಎಂದು ಸುನೀತಾ ನಂದೆಣ್ಣವರ ಹೇಳಿದರು.

ವಿವೇಕಾನಂದರ ವಾಣಿಗಳು ಶರಣರ ವಚನಗಳು ತುಂಬಾ ನಿಕಟವಾಗಿವೆ. ಇವು ಬದುಕಿಗೆ ಸನ್ಮಾರ್ಗ ತೊರಿಸುವ ದಾರಿ ದೀಪಗಳಾಗಿವೆ ಎಂದು ಹೇಳಿದರು.

ಮಹಾದೇವಿ ಅರಳಿ ಅವರು ಪ್ರಾರ್ಥನೆ ನಡೆಸಿಕೊಟ್ಟರು,ಸುರೇಶ ನರಗುಂದ, ಆನಂದ ಕರ್ಕಿ ವಿ ಕೆ ಪಾಟೀಲ್ , ಜಯಶ್ರೀ ಚಾವಲಗಿ, ಸುವರ್ಣ ಗುಡಸ, ಶೋಭಾ ಮುನವಳಿ, ಬಸನಗೌಡ , ಬಸವರಾಜ ಬಿಜ್ಜರಗಿ, ಶರಣೆ ಶರಣರು ವಚನ ವಿಶ್ಲೇಷಣೆ ಮಾಡಿದರು.

ಅಧ್ಯಕ್ಷತೆಯನ್ನು ಈರಣ್ಣಾ ದೇಯನ್ನವರ, ಹಾಗೂ ನಿರೂಪಣೆ ಸಂಗಮೇಶ ಅರಳಿ ಅವರು ಮಾಡಿದರು ಸಚಿನ ಶಿವಣ್ಣವರ ಪ್ರಸಾದ ದಾಸೋಹ ಸೇವೆಗೈದರು.ಸಿದ್ದಪ್ಪ ಸಾರಾಪುರಿ,ಸೊಮಶೇಖರ ಕತ್ತಿ,ಬಸವರಾಜ ಮತ್ತಿಕಟ್ಟಿ, ಬಸವರಾಜ ಕರಡಿಮಠ,ಮಹದೇವ ಕೆ೦ಪಿಗೌಡರ,ವಿರುಪಾಕ್ಷ , ಎಸ್‌.ಎಸ್‌.ಪೊಜಾರ್, ಗುರಸಿದ್ದಪ್ಪಾ, ಅನೀಲ ರಘಶೆಟ್ಟಿ, ಸುಜಾತಾ ಮತ್ತಿಕಟ್ಟಿ, ಶ್ರೀದೇವಿ ನರಗುಂದ, ಶಾಂತಾ ಕ೦ಬಿ,ಮಹಾದೇವಿ ಘಾಟಿ,ನ೦ದಾ ಬಗಲಿ,ಮಹಾಂತೇಶ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಸದಾಶಿವ ದೇವರಮನಿ, ಶಾಂತಾ ತಿಗಡಿ, ಇತರರು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ