Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸತೀಶ ಜಾರಕಿಹೊಳಿ ಎಂಬ ನವ ಕರ್ನಾಟಕದ ಹರಿಕಾರ... ಬೆಳಗಾವಿ ಜಿಲ್ಲೆಯ ಹೆಮ್ಮೆಯ ಸುಪುತ್ರ ಸತೀಶ ಜಾರಕಿಹೊಳಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ

( ರಾಜ್ಯದ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮದ ದಿನ. ಇಡೀ ರಾಜ್ಯದಲ್ಲಿ ಹರಡಿರುವ ಅವರ ಅಭಿಮಾನಿಗಳು ಪಕ್ಷ ಬೇಧ ಇಲ್ಲದೆ ತಮ್ಮ ಅಚ್ಚುಮೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಎಲ್ಲೆಡೆ ಆಚರಿಸುತ್ತಿದ್ದಾರೆ. ಜೊತೆಗೆ ಈ ಹೆಮ್ಮೆಯ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳು ಮಹಾಪೂರವನ್ನೇ ಹರಿಸುತ್ತಿರುವುದು ವಿಶೇಷವಾಗಿದೆ)

 

ಕರ್ನಾಟಕದ ಅತಿ ಪ್ರಭಾವಿ ರಾಜಕಾರಣಿಯಾಗಿ ದಿನೇ ದಿನೇ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿರುವ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಇಂದು ಜನುಮದಿನದ ಸಂಭ್ರಮ. ತೆರೆಯ ಮರೆಯಲ್ಲಿ ಅಭಿವೃದ್ದಿ ಕೆಲಸ- ಕಾರ್ಯಗಳನ್ನು ಸದ್ದಿಲ್ಲದೆ ಮಾಡುವ ಮೂಲಕ ಜನಮಾನಸದಲ್ಲಿ ಅಚ್ಚೊತ್ತಿರುವ ಸತೀಶ ಜಾರಕಿಹೊಳಿ ಅವರು 2028 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಂದು ಅವಧಿಗೂ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಿ ಕರ್ನಾಟಕವನ್ನು ತಮ್ಮ ಸಾರಥ್ಯದಲ್ಲಿ ಮುನ್ನಡೆಸುವ ಕನಸು ಕಂಡಿದ್ದಾರೆ.

ಈ ನಿಟ್ಟಿನಲ್ಲಿ ಅವರು ತಮ್ಮ ಕನಸು ಸಾಕಾರಗೊಳಿಸುವತ್ತ ಮುನ್ನಡೆದಿದ್ದು ಸದ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

ವಿಧಾನಪರಿಷತ್ ಸದಸ್ಯರಾಗಿ ಆರಂಭದಲ್ಲಿ ರಾಜಕಾರಣ ಆರಂಭಿಸಿದ ಸತೀಶ ಜಾರಕಿಹೊಳಿ ಅವರು ನಂತರದ ದಿನಗಳಲ್ಲಿ ವಿಧಾನಸಭಾ ಸದಸ್ಯರಾಗಿ ಜನತೆಗೆ ಅತಿ ಹತ್ತಿರವಾಗಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಸಚಿವರಾಗಿರುವ ಅವರು ರಾಜ್ಯದ ಉದ್ದಗಲಕ್ಕೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು ಎಲ್ಲಾ ಜನಪ್ರತಿನಿಧಿಗಳ ಜೊತೆ ಸ್ನೇಹಪರ ನಂಟು ಹೊಂದಿದ್ದಾರೆ. ಪಕ್ಷಭೇದವಿಲ್ಲದೆ ಕೆಲಸ ಕಾರ್ಯಗಳನ್ನು ಮಾಡಿ ಕೊಡುವ ಮೂಲಕ ಅವರು ತಾವು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಪಕ್ಷವಲ್ಲದೆ ಬಿಜೆಪಿ, ಜೆಡಿಎಸ್, ಪಕ್ಷೇತರರ ಒಲವು ಗಳಿಸುವಲ್ಲಿ ಯಶಸ್ಸು ಸಾಧಿಸಿದ್ದಾರ.

ಅದರಲ್ಲೂ ಬೆಳಗಾವಿ ಜಿಲ್ಲೆಯ ಖಾನಾಪುರ ಬಿಜೆಪಿ ಶಾಸಕ ವಿಠಲ ಹಲಗೇಕರ ಅವರು ಸಾರ್ವಜನಿಕವಾಗಿ ಸತೀಶ ಜಾರಕಿಹೊಳಿ ಅವರನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ. ಅವರ ಕೆಲಸ ಕಾರ್ಯಗಳು ಪಕ್ಷಕ್ಕೆ ಸೀಮಿತವಾಗಿಲ್ಲ, ಕೇವಲ ಅಭಿವೃದ್ದಿ ದೃಷ್ಟಿಯಿಂದ ಸತೀಶ ಜಾರಕಿಹೊಳಿ ಅವರು ಕೆಲಸ ಮಾಡುವ ಜನನಾಯಕರು ಎಂದು ಹೊಗಳಿರುವುದು ಅವರ ಶ್ರೇಷ್ಠ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.

ಮೊದಲಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕರಲ್ಲಿ ಅತಿ ಬಲಿಷ್ಠ ನಾಯಕರಾಗಿ ಬೆಳೆದು ನಿಂತಿದ್ದಾರೆ. ಪಕ್ಷದ ಹೈಕಮಾಂಡ್ ಜೊತೆ ಅತ್ಯುತ್ತಮ ಒಡನಾಟ ಹೊಂದಿರುವ ಅವರು ಪ್ರತಿಯೊಬ್ಬ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಸುಮಧುರ ಬಾಂಧವ್ಯವನ್ನು ಹೊಂದಿದ್ದಾರೆ.

 
ಬೆಳಗಾವಿ ಜಿಲ್ಲೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ, ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ ಕ್ಷೀಣವಾಗತೊಡಗಿತು. ಅದನ್ನು ಗಮನಿಸಿದ ಅವರು ತಮ್ಮ ಮಾತೃ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗತವೈಭವ ತಂದು ಕೊಡುವ ನಿಟ್ಟಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ತಮ್ಮೆಲ್ಲ ಶಕ್ತಿಯನ್ನು ಕ್ರೋಢೀಕರಿಸಿ ಅತ್ಯಂತ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಾಸಕರನ್ನು ಗೆಲ್ಲಿಸಿ ಕೊಂಡು ಬರುವ ಮೂಲಕ ತಮ್ಮ ವರ್ಚಸ್ಸನ್ನು ಸಾಬೀತುಪಡಿಸಿದರು. ಬರುವ ದಿನಗಳಲ್ಲೂ ಈ ದಿಗ್ವಿಜಯ ಮುಂದುವರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬೆಳಗಾವಿ ಜಿಲ್ಲೆ ಮಾತ್ರವಲ್ಲ, ರಾಜ್ಯದ ಉದ್ದಗಲಕ್ಕೂ ಹಿಡಿತ ಸಾಧಿಸಿರುವ ಅವರು ಯಾವುದೇ ವಿವಾದಾಸ್ಪದ ಗೊಂದಲಗಳಿಗೆ ತುತ್ತಾಗುವವರಲ್ಲ.
ಅತ್ಯಂತ ತೂಕಬದ್ಧವಾಗಿ ಮಾತನಾಡುವ ಅವರ ಮಾತಿಗೆ ರಾಜ್ಯದ ಜನತೆ ಆಗಾಗ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಹಿಡಿದ ಕೆಲಸ ಮುಗಿಸದೆ ಬಿಡುವವರಲ್ಲ ಎಂಬ ಈ ಛಲದಂಕ ಮಲ್ಲ ಈಗಾಗಲೇ ಹೆಚ್ಚಿನ ಖಾತೆಗಳನ್ನು ನಿಭಾಯಿಸಿ ಉತ್ತಮ ಕೆಲಸಗಾರ ಎಂದು ಕರೆದುಕೊಂಡಿದ್ದಾರೆ. ಕೇಂದ್ರ ಸರಕಾರದ ಮಟ್ಟದಲ್ಲೂ ಕೆಲಸಗಳನ್ನು ಮಾಡಿಸಿಕೊಂಡು ಬರುವ ರಾಜ್ಯದ ಏಕೈಕ ಸಚಿವರೆಂದರೆ ಅದು ಸತೀಶ್ ಮಾತ್ರ. ಮಾಸ್ಟರ್ ಮೈಂಡ್ ಎಂದೇ ರಾಜ್ಯದ ರಾಜಕಾರಣದಲ್ಲಿ ಛಾಪು ಮೂಡಿಸಿರುವ ಸತೀಶ ಜಾರಕಿಹೊಳಿ ಅವರು ಪ್ರಚಾರದಿಂದ ಬಹುದೂರ. ಅವರು ಎಂದು ಸಾರ್ವಜನಿಕವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡವರಲ್ಲ. ಸಾರ್ವಜನಿಕವಾಗಿ ಹುಟ್ಟು ಹಬ್ಬ ಆಚರಿಸದಂತೆ ಅವರು ತಮ್ಮ ಅಪಾರ ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಸಹ ಅಭಿಮಾನಿಗಳ ಪ್ರೀತಿ ಮಾತ್ರ ತಮ್ಮ ಅಚ್ಚುಮೆಚ್ಚಿನ ನಾಯಕನ ಹರಿದು ಬರುತ್ತದೆ.

ಜೂನ್ 1 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬೆಳಗಾವಿ ಜಿಲ್ಲೆಯ ಈ ಹೆಮ್ಮೆಯ ನಾಯಕ ಭವಿಷ್ಯದ ಶ್ರೇಷ್ಠ ಜನನಾಯಕರಾಗಿ ಹೊರಹೊಮ್ಮಲಿ. ಬೆಳಗಾವಿ ಜಿಲ್ಲೆಯ ಚೊಚ್ಚಲ ಮುಖ್ಯಮಂತ್ರಿ ಹುದ್ದೆ ಸತೀಶ ಜಾರಕಿಹೊಳಿ ಅವರಿಗೆ ಒಲಿದು ಬರಲಿ ಎನ್ನುವುದು ಜಿಲ್ಲೆಯ ಸಮಸ್ತ ಜನತೆಯ ಅಭಿಲಾಷೆಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರ ಕನಸು ಈಡೇರುವ ಸುವರ್ಣ ಅಧ್ಯಾಯವಾಗಿದ್ದು ಅವರ ನವ ಕರ್ನಾಟಕ ಕಟ್ಟುವ ಕನಸು ಈಡೇರುವಂತಾಗಲಿ ಎನ್ನುವುದು ಎಲ್ಲರ ಬಯಕೆಯಾಗಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ