ಗ್ರಾಮದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿವೆ. ಆಶಾ ಕಾರ್ಯಕರ್ತೆಯರು, ಪುರುಷ ಆರೋಗ್ಯ ಕಾರ್ಯಕರ್ತರು ಸಭೆಗಳನ್ನು ಮಾಡಲು ಸ್ಥಳ ಇಲ್ಲದಾಗಿದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆರೋಗ್ಯ ತಪಾಸಣೆ ಮಾಡಿಸಲು ಬಹಳ ತೊಂದರೆ ಆಗುತ್ತಿದೆ. ಪೋಷಣ ಅಭಿಯಾನ ಕಾರ್ಯಕ್ರಮ ಮಾಡಲು ಆಗುತ್ತಿಲ್ಲ.

ಗರ್ಭಿಣಿಯರ ಹೆರಿಗೆಯನ್ನು ಈ ಕೇಂದ್ರದಲ್ಲಿಯೇ ಮಾಡುತ್ತಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಇಲ್ಲಿ ಹೆರಿಗೆಗಳು ಆಗುತ್ತಿಲ್ಲ. ಕಾರಣ ಆರೋಗ್ಯ ಕಾರ್ಯಕರ್ತೆಯರು ಹೆರಿಗೆ ಮಾಡಿಸಲು ವ್ಯವಸ್ಥೆ ಇರುವುದಿಲ್ಲ. ರಾತ್ರಿ ಸಮಯದಲ್ಲಿ ಆರೋಗ್ಯ ಕಾರ್ಯ ಕರ್ತೆಯು ಇಲ್ಲಿ ಇರುವುದಿಲ್ಲ. ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದು ಮತ್ತು ತಪಾಸಣೆ ಮಾಡಲು ಆಗುತ್ತಿಲ್ಲ. ಈ ಕಟ್ಟಡದ ಕೊರತೆಯಿಂದ ಜನರಿಗೆ ಆರೋಗ್ಯ ಸೇವೆಯು ಸರಿಯಾಗಿ ಸಿಗುತ್ತಿಲ್ಲ.

ಸಂತಿಬಸ್ತವಾಡ ಗ್ರಾಮ ದತ್ತು ಪಡೆದಂತಹ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದವರು ಈ ಕಟ್ಟಡ ರಿಪೇರಿ ಮಾಡಿಕೊಡುವುದಾಗಿ ಹೇಳಿದ್ದರು. ಅದರ ಎಸ್ಟಿಮೇಟನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಅವರು ಒಂದು ವರ್ಷ ಕಳೆದರೂ ಇದರ ರಿಪೇರಿ ಮಾಡಿಸಿರುವುದಿಲ್ಲ. ಈ ಕಡೆಗೆ ಮುಖವನ್ನು ತೋರಿಸಿರುವುದಿಲ್ಲ. ಈ ಭಾಗದ ಶಾಸಕರು ಮತ್ತು ಸಚಿವರು ಲಕ್ಷ್ಮೀ ಹೆಬ್ಹಾಳ್ಕರರವರಿಗೆ ಮತ್ತು ಸಂಬಂಧಪಟ್ಟ ಸರಕಾರದ ಇಲಾಖೆಗಳಿಗೆ, ಸಚಿವರುಗಳಿಗೆ, ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ಗ್ರಾಮ ಪಂಚಾಯತ ವತಿಯಿಂದ ಅರ್ಜಿಯ ಮೂಲಕ ವಿನಂತಿಸಿಕೊಂಡರು ಸಹಿತ ಇದುವರೆಗೆ ಈ ಕಟ್ಟಡವು ರಿಪೇರಿ ಆಗಿಲ್ಲ. ಹೊಸ ಕಟ್ಟಡದ ಮಂಜೂರು ಕೂಡ ಆಗಿಲ್ಲ.

ಮಹಿಳಾ ಮತ್ತು ಮಕ್ಕಳ ಸಚಿವರ ಕ್ಷೇತ್ರದಲ್ಲಿರುವ ಈ ಗ್ರಾಮದ ಮಹಿಳೆಯರು ಮತ್ತು ಮಕ್ಕಳ ಮರಣವು ಕೂಡ ಆಗಿರುತ್ತದೆ. ಗ್ರಾಮ ಪಂಚಾಯತ ವಾಟರ್ ಮ್ಯಾನ್ ನ ಪತ್ನಿ ಮತ್ತು ಮಗು ಇಬ್ಬರೂ ಹೆರಿಗೆ ಸಮಯದಲ್ಲಿ ಮರಣ ಹೊಂದಿದ್ದಾರೆ. ಈ ಕಟ್ಟಡ ಇದ್ದಿದ್ದರೆ ಈ ಎರಡು ಜೀವಗಳು ಉಳಿಯುತ್ತಿದ್ದವು. ಮಹಿಳಾ ಮತ್ತು ಮಕ್ಕಳ ಸಚಿವರು , ಲೋಕ ಸಭಾ ಸದಸ್ಯರು ಮತ್ತು ಸಂಬಂಧಪಟ್ಟ ಇಲಾಖೆಯವರು ಸಂತಿಬಸ್ತವಾಡ ಗ್ರಾಮದ ಆರೋಗ್ಯ ಕೇಂದ್ರದ ಹೊಸ ಕಟ್ಟಡ ಕಟ್ಟಿಸಿಕೊಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.