Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶತಮಾನದ ಸಂತ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳಿಗೆ ನುಡಿ ನಮನ

 

ಬೆಳಗಾವಿ :
ಬೆಳಗಾವಿಯ ಶಿವ ಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ವತಿಯಿಂದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಭಾವಪೂರ್ಣ ಭಕ್ತಿ ಪೂರ್ವಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ನ್ಯಾಯವಾದಿ ಎಂ.ಬಿ. ಜಿರಲಿ ಅವರು ಗುರುದೇವ ರಾನಡೆ ಅವರ ಬಗ್ಗೆ ಸಿದ್ಧೇಶ್ವರ ಶ್ರೀಗಳು
ಅಪಾರ ಗೌರವ ಹೊಂದಿದ್ದರು. ಅವರ ಪುಸ್ತಕ ಪ್ರೀತಿ ಅದ್ಭುತ ವಾಗಿತ್ತು ಎಂದರು.

ಎಂ.ಆರ್.ಕರಡಿಗುದ್ದಿ ಅವರು ಸಿದ್ಧೇಶ್ವರ ಶ್ರೀಗಳು ಆಸೆಯನ್ನು ಗೆದ್ದ ಆಚರಣ ಶುದ್ಧ ಶಿವಯೋಗಿಗಳಾಗಿದ್ದರು ಎಂದರು. ಎಂ.ಜಯಶ್ರೀ ಅವರು  ಶ್ರೀ ಗಳನ್ನು ಕಳೆದುಕೊಂಡ ನಮಗೆ ನಮ್ಮ ಮನೆಯಲ್ಲಿಯ ಓರ್ವ ತಂದೆಯನ್ನು ಕಳೆದುಕೊಂಡ ಅನುಭವ ಆಗುತ್ತಿದೆ. ಅಂತಹ ಆಪ್ತ ಭಾವನೆಗೆ ಕಾರಣರಾದ ಪೂಜ್ಯರು ಸರಳ ಸಜ್ಜನಿಕೆಯ ಮಹಾತ್ಮರಾಗಿದ್ದರು ಎಂದರು.
ಪೂಜ್ಯ ರಾಚಯ್ಯ ಸ್ವಾಮಿಗಳು ಮಾತನಾಡಿ, ಶ್ರೀಗಳು ಜೀವನ್ಮುಕ್ತರು, ಅಭೇದಾತ್ಮರು ಮತ್ತು ಪ್ರೇಮ ಸ್ವರೂಪ ರು.ಎಲ್ಲರಲ್ಲಿಯೂ ಶಿವನನ್ನು ಕಂಡು ಕೈ ಮುಗಿದ ಮಹಾತ್ಮರಾಗಿದ್ದರು. ಅವರ ಜೀವನ ನಮಗೆ ದಾರಿದೀಪ ಎಂದರು.
ಆಶಾ ಯಮಕನಮರಡಿ, ಜಯಶ್ರೀ ನಿರಾಕಾರಿ, ವಿದ್ಯಾ ಹುಂಡೇಕಾರ ಶ್ರೀಗಳ ಕುರಿತು ಬರೆದ ಕವನಗಳು ಹಾಡಿದರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ,ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಅಧ್ಯಕ್ಷೆ ರತ್ನ ಪ್ರಭಾ ಬೆಲ್ಲದ , ಡಾ. ಎಫ್. ವಿ.ಮಾನ್ವಿ, ಡಾ. ರಾಜಶೇಖರ್, ರಮೇಶ್ ಕಳಸಣ್ಣವರ, ಜ್ಯೋತಿ ಭಾವಿಕಟ್ಟಿ, ವಿರೂಪಾಕ್ಷ ದೊಡಮನಿ,ಚಂದ್ರ ಶೇಖರ್ ಬೆಂಬಳಗಿ, ಡಾ. ರವಿ ಪಾಟೀಲ,ಭಾರತಿ ಸಂಕಣ್ಣವರ,ಮಹಾನಂದ ಕರಲಿಂಗನ್ನವರ, ಶೈಲಜಾ ಸಂಸುದ್ದಿ, ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ