Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಈ ಕಾರಿನದ್ದೇ ಜಾಸ್ತಿ ಮೈಲೇಜ್ ಎಂದ ಸಚಿನ್ ತೆಂಡೂಲ್ಕರ್

Advertisement

ಮುಂಬೈ : ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಕಾರಿನಲ್ಲಿ ಸಂಚರಿಸುವಾಗ, ಗ್ರಾಮೀಣ ಮಕ್ಕಳ ಆಟಿಕೆ ಕಾರಿಗೆ ಬೆರಗಾಗಿದ್ದಾರೆ.

ಗ್ರಾಮೀಣ ಭಾಗದ ಯುವಕರ ಪ್ರತಿಭೆಗೆ ಸಚಿನ್ ಅವರು ಮನಸೋತಿದ್ದಾರೆ. ಅವರ ಸೃಜನಶೀಲತೆ, ಬಂಡಿಯ ವಿನ್ಯಾಸ ಮತ್ತು ಕಲ್ಪನೆಯ ಕುರಿತು ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊವನ್ನು ಸಚಿನ್‌ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವಿಡಿಯೊದಲ್ಲಿ ಯುವಕರು, ಚಿಕ್ಕ ಚಿಕ್ಕ ಮರದ ತುಂಡುಗಳನ್ನು ಬಳಸಿಕೊಂಡು ಅದಕ್ಕೆ ಸೈಕಲ್‌ ಚಕ್ರಗಳನ್ನು ಅಳವಡಿಸಿ, ಬಂಡಿ ತಯಾರಿಸಿದ್ದಾರೆ. ನಂತರ ಅದರ ಮೇಲೆ ಓರ್ವ ಯುವ ಕುಳಿತುಕೊಂಡರೆ, ಮತ್ತೋರ್ವ ಯುವಕ ಆ ಬಂಡಿಯನ್ನು ಎಳೆದುಕೊಂಡು ಓಡುತ್ತಿರುವುದನ್ನು ಕಾಣಬಹುದು.

ವಿಡಿಯೊವನ್ನು ಹಂಚಿಕೊಂಡ ಸಚಿನ್ ಅವರು 'ಭಾರತದ ಹಳ್ಳಿಯಲ್ಲಿ ಸಂಚರಿಸುವಾಗ ವಿಭಿನ್ನವಾದ ಕಾರು ಒಂದನ್ನು ನೋಡಿದೆ. ಆ ಕಾರಿನ ಬಗ್ಗೆ ನನಗೆ ಕುತೂಹಲ ಮೂಡಿತು. ಅದು ಯಾವುದೇ ಶೋ ರೂಮ್‌ನಿಂದ ಬಂದದ್ದಲ್ಲ. ಬದಲಾಗಿ ಮಕ್ಕಳ ಕಲ್ಪನೆಯಲ್ಲಿ ಮೂಡಿದ್ದಾಗಿತ್ತು' ಎಂದು ಬರೆದುಕೊಂಡಿದ್ದಾರೆ.

'ಹಳ್ಳಿ ಮಕ್ಕಳ ಈ ಬಂಡಿಯು ನಿಜಕ್ಕೂ ಅದ್ಭುತವಾಗಿದೆ. ಇದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಅನ್ವೇಷಣೆಗಳಿಗೆ ಬೇಕಾಗಿರುವುದು ಅವಕಾಶ ಮಾತ್ರ' ಎಂದು ಸಚಿನ್‌ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಳಕೆದಾರರೊಬ್ಬರು 'ಈ ಮಕ್ಕಳು ಭವಿಷ್ಯದ ಇಂಜಿನಿಯರ್‌ಗಳು' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು 'ಎಲ್ಲಾ ಕಾರುಗಳಿಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ' ಎಂದು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಗಾರು ಕುಂಠಿತ ? ಭಾರತದ ಬಹುತೇಕ ಭಾಗಗಳಲ್ಲಿ ಮಳೆಮೋಡಗಳೇ ಕಾಣುತ್ತಿಲ್ಲ ; ಉಪಗ್ರಹ ಚಿತ್ರದಲ್ಲಿ ಆತಂಕಕಾರಿ ದೃಶ್ಯಊಟಕ್ಕೆ ಉಪ್ಪಿನಕಾಯಿಯಾಗಿರುವ‌ ಅತಿಥಿ ಉಪನ್ಯಾಸಕರು ಸಮೃದ್ಧ ಫೌಂಡೇಶನ್‌ನ ಅನಾಥಾಶ್ರಮಕ್ಕೆ ಪ್ರಯತ್ನ ಸಂಸ್ಥೆಯಿಂದ ನೆರವುಅಯೋಧ್ಯಾ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: 8 ಜನರ ಬಂಧನದ ಬೆನ್ನಲ್ಲೇ ಟ್ರಸ್ಟ್ ಮುಖ್ಯಸ್ಥ ಚಂಪತ ರಾಯ್ ರಾಜೀನಾಮೆಶಾಲೆಗಳಲ್ಲಿ ಶನಿವಾರದ ಶಾಲಾ ವೇಳಾಪಟ್ಟಿ ಬದಲಾಯಿಸಲು ಸರ್ಕಾರ ಸಮ್ಮತಿ ?ತೋತಾಪುರಿ ಮಾವು ಬೆಳೆಗಾರರಿಗೆ ಸಿಹಿ ಸುದ್ದಿ ; ಕರ್ನಾಟಕದ 1.3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌ಕೇಂದ್ರದಿಂದ ಗುಡ್‌ನ್ಯೂಸ್ ; ವಾಣಿಜ್ಯ ಬಳಕೆ ಎಲ್‌ಪಿಜಿ ಮೇಲಿನ ನಿರ್ಬಂಧ ತೆಗೆದುಹಾಕಿದ ಸರ್ಕಾರ ; ಪೂರೈಕೆ ಸಹಜ ಸ್ಥಿತಿಗೆಇಡಿ ದಾಳಿ ವೇಳೆ ಮಂಜುನಾಥ ಮತ್ತು ಆಪ್ತರ ಬಳಿ ಸಿಕ್ಕಿದ್ದೆಷ್ಟು ಗೊತ್ತೇ ?ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ; ಯಾರಿಗೆ ಯಾವ ಜಿಲ್ಲೆ ; ಇಲ್ಲಿದೆ ವಿವರಉದ್ಯಮಿ ರಾಜಾಭಾವು ಶಿರಗಾಂವಕರ ನಿಧನ