Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಮದುರ್ಗ: ಐತಿಹಾಸಿಕ ವೆಂಕಟೇಶ್ವರ ಜಾತ್ರೆ

ರಾಮದುರ್ಗ: ಭಾಷಾ ಸಾಮರಸ್ಯವನ್ನು ಸಾರುವ ಪುಣೆಯ ಪೇಳ್ವೆಗಳ (ಮರಾಠಿಗರ) ಆಡಳಿತದಲ್ಲಿ ಸ್ಥಾಪಿತ ವೆಂಕಟೇಶ್ವರ ಜಾತ್ರೆಯನ್ನು ಮರಾಠಿ-ಕನ್ನಡಿಗರು ಸೇರಿ ಸಹೋದರತ್ವದಿಂದ ಆಚರಿಸುತ್ತಿದ್ದಾರೆ.

ಐತಿಹಾಸಿಕ ಹಿನ್ನೆಲೆಯ ರಾಮದುರ್ಗದ ವೆಂಕಟೇಶ್ವರ ದೇವರ ಜಾತ್ರಾ ಮಹೋತ್ಸವ ಮಾರ್ಚ್ 30 ರಿಂದ ಆರಂಭಗೊಂಡು ವಾಹನೋತ್ಸವ ಪ್ರತಿದಿನ ರಾತ್ರಿಯಿಂದ ಜರುಗಲಿದೆ. ವೆಂಕಟೇಶ್ವರ ದೇವರ ಮಹಾರಥೋತ್ಸವವು ಏ. 7ರಂದು ಬೆಳಿಗ್ಗೆ 9.30ಕ್ಕೆ ಜರುಗಲಿದೆ.

ರಾಮದುರ್ಗದ ಸಂಸ್ಥಾನದ ಆಡಳಿತವು ಪುಣೆಯ ಪೇಳ್ವೆಗಳ (ಮರಾಠಿ) ಆಡಳಿತಕ್ಕೆ ಒಳಪಟ್ಟಿತ್ತು. ನರಗುಂದ ಮತ್ತು ರಾಮದುರ್ಗದ ಸಂಸ್ಥಾನಗಳ ಉಭಯ ಸಹೋದರರ ಆಡಳಿತ ವಿಭಜನೆಯಾದ ನಂತರ ರಾಮದುರ್ಗದ ಕೊನೆಯ ಅರಸು ರಾಮ್‌ರಾವ್‌ಭಾವೆ ಇಲ್ಲಿಯ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಿ ಜಾತ್ರೆ ನಡೆಸಿಕೊಂಡು ಬಂದಿದ್ದರು. ಈಗಲೂ ಪ್ರತಿ ವರ್ಷದ ರಾಮನವಮಿ ಮರುದಿನ ಸಾವಿರಾರು ಜನರು ಶ್ರದ್ಧಾ ಭಕ್ತಿಯಿಂದ ವೆಂಕಟೇಶ್ವರ ಜಾತ್ರೆಯನ್ನು ವೈಭವದಿಂದ ನಡೆಸಿಕೊಂಡು ಬರುತ್ತಾರೆ. ಈ ಜಾತ್ರೆಯು ಈ ಭಾಗದಲ್ಲಿಯೇ ಪ್ರಖ್ಯಾತಿ ಹೊಂದಿದೆ.

ಮಲಪ್ರಭಾ ನದಿಯ ತಟದಲ್ಲಿಯ ಭವ್ಯ ವೆಂಕಟೇಶ್ವರ ದೇವಸ್ಥಾನದಿಂದ ಎಡಕ್ಕೆ ಏರುಮುಖವಾಗಿ ತೇರು ಬಜಾರಿನಲ್ಲಿ ಏ. 7ರಂದು ಬೆಳಿಗ್ಗೆ ಕಲ್ಲಿನ ತೇರನ್ನು ಭಕ್ತರು ಎಳೆದು ತರುತ್ತಾರೆ. ವೆಂಕಟೇಶ್ವರ ದೇವಸ್ಥಾನದಿಂದ ಹನುಮಂತ ದೇವರ ಗುಡಿಯ ತನಕ ತಂದು ನಿಲ್ಲಿಸಿದ ನಂತರ ಸುಮಾರು 30 ಡಿಗ್ರಿಯಷ್ಟು ವಾಲಿರುವ ರಥವನ್ನು ಇಳಿಜಾರಿನಲ್ಲಿಯೇ ಒಂದೂವರೆ ಗಂಟೆಗಳ ಕಾಲ ಸನ್ನೆಗೋಲುಗಳ ಮೂಲಕ ಪೂರ್ಣ ಪ್ರಮಾಣದಲ್ಲಿ ತಿರುಗಿಸಿ ನಿಲ್ಲಿಸುತ್ತಾರೆ. ಇದೊಂದು ವಿಶೇಷ ಜಾತ್ರೆ
ಎಂದು ಹೇಳಬಹುದು. ಈ ಪ್ರಯತ್ನದಲ್ಲಿ ಪಟ್ಟಣದ ಭೋವಿ ಜನಾಂಗದ ಜನರ ಬಹುದಿನಗಳ ಸೇವೆ ಜನ ಮೆಚ್ಚುವಂತದ್ದು. ಈ ರೀತಿ ರಥ ತಿರುಗಿಸುವ ಕಾರ್ಯ ರಾಮದುರ್ಗದಲ್ಲಿ ಮಾತ್ರ ಜರುಗುತ್ತದೆ. ಇದೊಂದು ರೋಮಾಂಚಕಾರಿ ಪ್ರಯತ್ನವೂ ಹೌದು.

ಜಾತ್ರೆಯ ಸಿದ್ಧತೆ ಭರದಿಂದ ನಡೆದಿದೆ. ಮನೆಗಳನ್ನು ಸಿಂಗರಿಸಿರುವ ರಾಮದುರ್ಗದ ಜನತೆ ಹಬ್ಬದ ವಾತಾವರಣದಲ್ಲಿ ಮಿಂದು ಹೋಗಿದ್ದಾರೆ.

ಜಾತ್ರೆ ಅಂಗವಾಗಿ ಪ್ರತಿ ರಾತ್ರಿ ವೆಂಕಟೇಶ್ವರ ದೇವರ ವಾಹನೋತ್ಸವ ಜರುಗಲಿದೆ. ಇದು ಸಹ ಜಾತ್ರೆಗೆ ಯಾವುದರಲ್ಲಿಯೂ ಕಡಿಮೆ ಎನಿಸುವುದಿಲ್ಲ. ವಾಹನೋತ್ಸವ ನಡೆಯುವ ದಿನ ಮತ್ತು ವಾಹನದ ಹೆಸರು ಇಂತಿದೆ. ಮಾರ್ಚ್ 30ರಂದು ಭಾನುವಾರ ಪುಷ್ಪವಾಹನ, ಸೋಮವಾರ ಗಜವಾಹನ, ಮಂಗಳವಾರ ಅಶ್ವವಾಹನ, ಬುಧವಾರ ಶೇಷವಾಹನ, ಗುರುವಾರ ಸಿಂಹ ವಾಹನ, ಶುಕ್ರವಾರ ಚಂದ್ರ ವಾಹನ, ಶನಿವಾರ ಹನುಮಂತ ವಾಹನ, ಭಾನುವಾರ ಮಧ್ಯಾಹ್ನ ಸೂರ್ಯ ವಾಹನ, ರಾತ್ರಿ ಗರುಡ ವಾಹನದ ವಾಹನೋತ್ಸವ ಪ್ರತಿ ರಾತ್ರಿ 9ಕ್ಕೆ ಜರುಗುವುದು. ಸೋಮವಾರ ಬೆಳಿಗ್ಗೆ 9.30ಕ್ಕೆ ಮಹಾರಥೋತ್ಸವ ಜರುಗಲಿದೆ.

 


ಭ್ರಾತೃತ್ವದ ಸಂಕೇತವಾಗಿರುವ ರಾಮದುರ್ಗದ ವೆಂಕಟೇಶ್ವರ ಜಾತ್ರೆಯಲ್ಲಿ ಎಲ್ಲ ಜಾತಿಯ ಜನ ಸಾಮರಸ್ಯದಿಂದ ಪಾಲ್ಗೊಳ್ಳುವುದು ವಿಶೇಷ-ಗಂಗಾಧರ ಭೋಸಲೆ ಕಾರ್ಯದರ್ಶಿ ಜಾತ್ರಾ ಕಮಿಟಿ

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ