Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗಡಿ ಭಾಗದಲ್ಲಿ ಪ್ರಾ ಗವಿಮಠರ ಕನ್ನಡ ಕೈಂಕರ್ಯ ಶ್ಲಾಘನೀಯ: ಡಾ.ಸಿ ಸೋಮಶೇಖರ್-ಬಿಎಸ್ ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪ್ರಶಸ್ತಿ ವಿತರಣೆ

 

ಬೆಳಗಾವಿ: ಗಡಿಭಾಗದಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಪೋಷಿಸಿಕೊಂಡು ಹೋಗುವುದು ಅಗತ್ಯವಾಗಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಅನೇಕ ಕನ್ನಡಪರ ಸಂಘ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು. ಕನ್ನಡದ ಪ್ರೀತಿಯೇ ಇದಕ್ಕೆ ಕಾರಣ. ಸರ್ಕಾರ ಈ ಎಡೆಗೆ ಗಮನ ಹರಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸೋಮಶೇಖರ್ ಹೇಳಿದರು.
ಬೆಳಗಾವಿಯ ಕನ್ನಡ ಭವನದಲ್ಲಿ ಜರುಗಿದ ಬಿಎಸ್ ಗವಿಮಠ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
12ನೇ ಶತಮಾನ ಕಾಲಘಟ್ಟದಲ್ಲಿ ಶರಣರ ಕನ್ನಡವನ್ನು ಕಟ್ಟುವ ಬೆಳೆಸುವ ಮಹತ್ವದ ಕಾರ್ಯ ಮಾಡಿದರು. ಅವರ ಕೊಡುಗೆ ಅನನ್ಯ. ಆ ಪರಂಪರೆ ಎಂದಿಗೂ ಅನವರತವಾಗಿ ಮುಂದುವರಿದುಕೊಂಡು ಬಂದಿದೆ. ಬಿಎಸ್ ಗವಿಮಠರ ಅಭಿಮಾನಿಗಳು ಸಾಹಿತ್ಯ ಪ್ರತಿಷ್ಠಾನವನ್ನು ಹುಟ್ಟುಹಾಕುವ ಮೂಲಕ ಕನ್ನಡ ಸಾಹಿತ್ಯಕ ಸಾಂಸ್ಕೃತಿಕ ಸೇವೆ ಗೈದ ಸಾಧಕರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದನೀಯ. ಈ ಸಾಂಸ್ಕೃತಿಕ ಪ್ರತಿಷ್ಠಾನವು ರಚನಾತ್ಮಕ ಕೆಲಸ ಮಾಡುತ್ತ ಮತ್ತಷ್ಟು ವಿಸ್ತರಿಸಲಿ. ಗವಿಮಠರೂ ಎಸ್ ಡಿ ಇಂಚಲ ರಂತಹ ಮಹಾಕವಿಗಳನ್ನ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ. ಗಡಿಭಾಗದಲ್ಲಿರುವ ಕನ್ನಡ ಕೊಡುಗೆ ಅನನ್ಯ. ಇಂದು ಪ್ರತಿಷ್ಠಾನವು ನಿಜವಾದ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿಮಾನ ತಂದಿದೆ. ಈ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಹೇಳಿದರು.
ವೈದ್ಯ ಡಾ. ಎಚ್ ಬಿ ರಾಜಶೇಖರ್ ಉದ್ಘಾಟಿಸಿ ಮಾತನಾಡಿ, ಗವಿಮಠರ ಸಾಂಸ್ಕೃತಿಕ ಮನಸ್ಸು ಬಹುದೊಡ್ಡದು. ಕವಿ ಎಚ್ ಡಿ ಇಂಚಲ್ ಹಾಗೂ ರಂಗ ಕಲಾವಿದರಾಗಿದ್ದ ಏಣಗಿ ಬಾಳಪ್ಪ ರಂತಹ ಮಹನೀಯರನ್ನು ಜೀವಂತವಾಗಿ ಉಳಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಕೆಎಲ್ಇ ಸಂಸ್ಥೆಯ ಇತಿಹಾಸಕಾರರಾಗಿ ಅದರ ಸಾಂಸ್ಕೃತಿಕ ಕೊಡುಗೆ ದಾಖಲಿಸುವ ಮಹತ್ವದ ಕಾರ್ಯ ಮಾಡಿರುವ ಗವಿಮಠರ ಸೇವೆ ಶ್ಲಾಘನೀಯ. ಅವರ ಹೆಸರಿನ ಈ ಪ್ರತಿಷ್ಠಾನವು ಜನಪರವಾದಂತಹ ಕೆಲಸ ಕಾರ್ಯಗಳನ್ನು ನಿರಂತರವಾಗಿ ಗಡಿಭಾಗದಲ್ಲಿ ಮುಂದುವರಿಸಿಕೊಂಡು ಹೋಗಲಿ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕಾರಂಜಿ ಮಠದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು. ಡಾ. ವಿ ಎಸ್ ಮಾಳಿ ಅಭಿನಂದನಪರ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ ಎಲ್ ವಿ ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು.

ವೈದ್ಯ ಡಾ. ದಯಾನಂದ ನೂಲಿ ಅವರಿಗೆ ಶರಣ ಸಾಹಿತ್ಯಸಿರಿ ಪ್ರಶಸ್ತಿ, ಡಾ ಗುರುದೇವಿ ಹುಲೆಪ್ಪನವರಮಠ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ, ಜಾಕಿರ್ ನದಾಫ್ ಅವರಿಗೆ ರಂಗ ಚೇತನ ಪ್ರಶಸ್ತಿ , ಸಂತೋಷ ನಾಯಿಕ್ ಅವರಿಗೆ ಕಾವ್ಯ ಸಿರಿ ಪ್ರಶಸ್ತಿ ಗಳನ್ನು ಪ್ರತಿಷ್ಠಾನದಿಂದ ನೀಡಿ ಗೌರವಿಸಲಾಯಿತು.

ಡಾ ಅಶೋಕ ನರೋಡೆ ಅವರು ಸಂಪಾದಿಸಿದ ಡಾ.ಪ್ರಭಾಕರ ಕೋರೆಯವರ ಅಭಿನಂದನ ಗ್ರಂಥ ಸಮಾಜಭೂಷಣದ ದ್ವಿತೀಯ ಮುದ್ರಣವನ್ನು ಬಿಡುಗಡೆಗೊಳಿಸಲಾಯಿತು. ನಯನಾ ಗಿರಿಗೌಡರ್ ಪ್ರಾರ್ಥಿಸಿದರು. ಡಾ. ಪಿ.ಜಿ. ಕೆಂಪಣ್ಣವರ ಸ್ವಾಗತಿಸಿದರು. ಬಸವರಾಜ್ ಗಾರ್ಗಿ ನಿರೂಪಿಸಿದರು. ಅಕ್ಬರ್ ಸನದಿ ವಂದಿಸಿದರು.

ಬಿ ಎಸ್ ಗವಿಮಠ, ಡಾ. ಬಸವರಾಜ್ ಜಗಜಂಪಿ, ಎಂ ಎಸ್ ಇಂಚಲ ಡಾ ಅಶೋಕ್ ನರೋಡೆ, ಯ.ರು. ಪಾಟೀಲ್, ಏಣಗಿ ಸುಭಾಷ್, ಎಫ್ ವಿ ಮಾನ್ವಿ, ಡಾ ಎಂ ವಿ ಜಾಲಿ ಡಾ ಇಚ್ಚಂಗಿ, ಡಾ. ಸುಬ್ರಾವ ಎಂಟೆತ್ತಿನವರ ಬೆಂಗಳೂರಿನ ಕನ್ನಡ ಪರ ಹೋರಾಟಗಾರ ಪಾಲನೇತ್ರ , ಶಾಂತಾದೇವಿ ಹುಲೆಪ್ಪನವರಮಠ , ನೀಲಗಂಗಾ ಚರಂತಿಮಠ, ಡಿಎಸ್ ಚೌಗಲಾ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆ: ಪ್ರಧಾನಿ ಮೋದಿಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ? ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಿ ಎಲ್ ಒ ಗಳ ವಿರುದ್ಧ ಕ್ರಮಕ್ಕೆ ಅಗ್ರಹಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ?ದೇಶಾದ್ಯಂತ ಆವರಿಸಿದ ಮೋಡಗಳು ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ; ಮುಂಗಾರು ಬಲಗೊಳ್ಳುತ್ತಿದೆ ಎಂದ ಹವಾಮಾನ ಇಲಾಖೆನೀಟ್‌ ಹೋರಾಟ : ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಭರವಸೆ ನೀಡಿದ್ರೆ ಉಪವಾಸ ಅಂತ್ಯ ; ಕೇಂದ್ರಕ್ಕೆ ವಾಂಗ್ಚುಕ್ ಷರತ್ತುಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆ