Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗಿಡ ನೆಡುವುದರ ಜೊತೆಗೆ ರಕ್ಷಿಸಿ ಬೆಳೆಸುವುದೂ ಮುಖ್ಯ: ಚೈತನ್ಯ ಕುಲಕರ್ಣಿ ಚನ್ನಮ್ಮ ನಗರ ಸರಕಾರಿ ಶಾಲೆ ಆವರಣದಲ್ಲಿ ವನಮಹೋತ್ಸವ

ಬೆಳಗಾವಿ: ವನಮಹೋತ್ಸವ ಮಾಡಿ ಗಿಡ ನೆಟ್ಟರೆ ಸಾಲದು, ಅವುಗಳನ್ನು ರಕ್ಷಿಸಿ ಬೆಳೆಸುವುದು ಸಹ ಅಷ್ಟೇ ಮುಖ್ಯ ಎಂದು ಸಿಜಿಕೆ ಕನಸ್ಟ್ರಕ್ಷನ್ಸ್ ಮತ್ತು ರಿಯಲ್ ಎಸ್ಟೇಟ್ ಕಂಪನಿಯ ಚೇರಮನ್, ಕ್ರೆಡೈ ಮಾಜಿ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಹೇಳಿದ್ದಾರೆ.

ಮಂಗಳವಾರ ಬೆಳಗಾವಿಯ ರಾಣಿ ಚನ್ನಮ್ಮ ನಗರದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರಯತ್ನ ಸಂಘಟನೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಎಲ್ಲೆಡೆ ಹವಾಮಾನ ವೈಪರೀತ್ಯ ನೋಡುತ್ತಿದ್ದೇವೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಅಗತ್ಯವಿದೆ. ಹಾಗೆ ನೆಟ್ಟ ಗಿಡಗಳ ರಕ್ಷಣೆ ಸಹ ಅಷ್ಟೇ ಮುಖ್ಯ. ಶಾಲೆಗಳ ಆವರಣದಲ್ಲಿ ಗಿಡಗಳನ್ನು ನೆಟ್ಟಾಗ ಒಬ್ಬೊಬ್ಬ ವಿದ್ಯಾರ್ಥಿಗೆ ಒಂದೊಂದು ಗಿಡದ ಜವಾಬ್ದಾರಿ ವಹಿಸುವುದರಿಂದ ಗಿಡಗಳ ರಕ್ಷಣೆ ಜೊತೆಗೆ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಗಿಡಗಳ ರಕ್ಷಣೆಗೆ ತಮ್ಮದೇ ಫ್ಯಾಕ್ಟರಿಯಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ಟ್ರೀ ಗಾರ್ಡ್ ಗಳನ್ನು ಚೈತನ್ಯ ಕುಲಕರ್ಣಿ ದೇಣಿಗೆಯಾಗಿ ನೀಡಿದರು.
ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ, ಸಮಾಜ ಸೇವಕರಾದ ಶೀಲಾ ದೇಶಪಾಂಡೆ, ರಾಧಿಕಾ ಮಿರ್ಜಿ, ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ, ಶಾಲಾಭಿವೃದ್ದಿ ಸಮಿತಿ ಸದಸ್ಯ ಜಗದೀಶ ಬಡಿಗೇರ, ಪ್ರಯತ್ನ ಸಂಘಟನೆಯ ಕಾರ್ಯದರ್ಶಿ ಗೌರಿ ಸರ್ನೋಬತ್, ಸದಸ್ಯರಾದ ವೆಂಕಟೇಶ ಸರ್ನೋಬತ್, ಶ್ವೇತಾ ಬಿಜಾಪುರೆ, ಸುನೀತಾ ಭಟ್, ವರದಾ ಭಟ್, ಪದ್ಮಾ ವೇರ್ಣೇಕರ್, ಬೀನಾ ರಾವ್, ಶುಭಾ ಹೆಗಡೆ, ರೇವತಿ ಶರ್ಮಾ, ಹೇಮಾ ಮುತಾಲಿಕ, ಲತಾ ಕಟ್ಟಿ, ವೀಣಾ ಕುಲಕರ್ಣಿ, ಅಪರ್ಣಾ ಪವಾರ್, ಶುಭಾ ಕಡಗದಕೈ, ಎಂ.ಜಿ.ಭಟ್, ಶಿಕ್ಷಕರಾದ ಎ.ಕೆ. ಜೋಶಿ, ಎಲ್.ಬಿ.ಹೊಸಮನಿ, ಸೌಮ್ಯ ಮಾನೆ, ಶಿಲ್ಪಾ ಡಿ, ಯಶ್ ಬಡಾಲೆ ಮೊದಲಾದವರು ಇದ್ದರು.
ಮುಖ್ಯಾಧ್ಯಾಪಕ ಎಸ್.ಬಿ. ಹುಬ್ಬಳ್ಳಿ ಸ್ವಾಗತಿಸಿದರು. ಶಿಕ್ಷಕಿ ಶುಭಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಹಾದೇವ ಮಾನೆ ವಂದಿಸಿದರು.
ಇದೇ ವೇಳೆ ಉದ್ಯಮಿ ಭರತ್ ದೇಶಪಾಂಡೆ ಮಕ್ಕಳಿಗಾಗಿ ನೀಡಿದ ರೇನ್ ಕೋಟ್ ಗಳನ್ನು ವಿತರಿಸಲಾಯಿತು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ