Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಡವರ ಅನ್ನಭಾಗ್ಯ ಅಕ್ಕಿ ಗುಳುಂ ಮಾಡಿದ್ನಾ ಅಗಸಗಿ PKPS ಲೂಟಿಕೋರ..?

ಬಡವರ ಅನ್ನಭಾಗ್ಯ ಅಕ್ಕಿ ಗುಳುಂ ಮಾಡಿದ್ರಾ ಅಗಸಗಿ PKPS ಲೂಟಿಕೋರ..?

ಐದೇ ತಿಂಗಳಲ್ಲಿ ಮೂರಾಬಟ್ಟಿಯಾದ ಅಗಸಗಿ PKPS ವ್ಯವಸ್ಥೆ..?

ಊರಬಿಟ್ಟು ಅಧ್ಯಕ್ಷನ ವಾಸ ; ರೇಶನ್ ಸಿಗದೆ ಪಡಿತರಿಗೆ ವನವಾಸ..?

ಹೆಬ್ಬೆರಳು ಹಚ್ಚಿ ತಿಂಗಳಾದರೂ ಕೆಲವರಿಗೆ ಸಿಗದ ಅನ್ನಭಾಗ್ಯ ಅಕ್ಕಿ..?

ಲೂಟಿಕೋರ ಸದಸ್ಯನ ಕೈಯಲ್ಲಿ ಅಂಗಡಿ ಕೀಲಿಕೈ.. ಸಾವಿರಾರು ಕೆಜಿ ಅಕ್ಕಿಗೆ ಬೈ ಬೈ..?

PKPS ಲೂಟಿ ಭಾಗ-1..!

ಬೆಳಗಾವಿ : ಅಗಸಗಿ PKPSಗೆ ನವೆಂಬರನಲ್ಲಿ ನಡೆದ ಚುನಾವಣೆಯಲ್ಲಿ ರೈತರಿಗೆ ಹಗಲು ಕನಸು ತೋರಿಸಿ, ರೈತರಿಗೆ ರಾಯಲ್ ಸೌಲಭ್ಯ ನೀಡುತ್ತೆವೆ ಎಂದು ಅಧಿಕಾರಕ್ಕೇರಿದ ಹೊಸ ಆಡಳಿತ ಮಂಡಳಿ ಐದೇ ತಿಂಗಳಲ್ಲಿ ಸೊಸೈಟಿಯನ್ನು ಮೂರಾಬಟ್ಟಿ ಮಾಡಿಬಿಟ್ಟಿದೆ.

ಹಾಲಿ ಅಧ್ಯಕ್ಷ ಸದ್ಯ ಸಾಚಾ ಇದ್ದರು ಊರಬಿಟ್ಟು ವಾಸವಾಗಿದ್ದರಿಂದ ಅಧ್ಯಕ್ಷನ ಅನುಪಸ್ಥಿತಿಯಲ್ಲಿ ಲೂಟಿಕೋರ ಖ್ಯಾತಿಯ ಸದಸ್ಯನೊಬ್ಬ ಸೊಸೈಟಿಯನ್ನು ನುಂಗಿ ನೀರು ಕುಡಿಯಲು ಮಂದಾಗಿದ್ದಾನೆ. ಯಾಕೆಂದರೆ ಈ ಹಿಂದೆ ಈತ ಮಾಡಿದ್ದು ಅದೆ. ಇದರಿಂದಾಗಿ ಊರಬಿಟ್ಟ ಹಾಲಿ ಅಧ್ಯಕ್ಷನ ಬೇರೆಡೆಯ ವಾಸ ಪಡಿತರಿಗೆ, ರೈತರಿಗೆ ವನವಾಸವಾಗಿ ಪರಿಣಮಿಸಿದೆ.

ಖಾಲಿಯಾದ ರೇಶನ್; ಹೆಬ್ಬೆರಳು ಕೊಟ್ಟು ತಿಂಗಳಾದರೂ ಅಕ್ಕಿ ಸಿಗದೆ ಕೈಕಟ್ಟಿ ಕುಳಿತ ಜನ.

ನಿಯಮದ ಪ್ರಕಾರ ಹೆಬ್ಬೆರಳು ಹಚ್ಚಿದ ತಕ್ಷಣ ಪಡಿತರ ನೀಡಬೇಕು. ಆದರೆ ಅಗಸಗಿ ಪಿಕೆಪಿಎಸ್ ನಲ್ಲಿ ಮಾತ್ರ ವಿಚಿತ್ರತೆ ನಡೆಯುತ್ತಿದೆ. ಪ್ರತಿ ಗಲ್ಲಿಯ ಪಡಿತರಿಗೆ ಒಂದೊಂದು ದಿನ ನಿಗದಿಪಡಿಸಿ ಹೆಬ್ಬೆರಳು ಹಚ್ಚಿಕೊಂಡು ರೇಶನ್ ಕೊಡುವುದಾಗಿ ಹೇಳಿ ಈಗ ರೇಶನ್ ಖಾಲಿ ಆಗಿದೆ. ಬೇರೆ ಊರಿನಲ್ಲಿದೆ ಅಲ್ಲಿಂದ ತಂದು ಕೊಡುತ್ತೇವೆ ಎಂದು ಮೂಗಿಗೆ ತುಪ್ಪ ಹಚ್ಚುವ ಕೆಲಸ ಕಳೆದೊಂದು ತಿಂಗಳಿನಿಂದ ಮಾಡಲಾಗುತ್ತಿದೆ.

ಎಲ್ಲಿಗೆ ಹೊಯ್ತು ರೇಶನ್ ಅಕ್ಕಿ..?

ಆಹಾರ ಇಲಾಖೆಯವರ ಪ್ರಕಾರ ಅಗಸಗಿಗೆ ಕೊಡಬೇಕಾದ ಸಂಪೂರ್ಣ ಪಡಿತರವನ್ನು ಕೊಡಲಾಗಿದೆ. ಆದರೆ ಆ ರೇಶನ್ ಎಲ್ಲಿಗೆ ಹೊಯ್ತು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಬಲ್ಲ ಮೂಲಗಳ ಪ್ರಕಾರ ರೇಶನ್ ಸಾವಿರಾರು ಕೆಜಿ ಅನ್ನಭಾಗ್ಯ ಅಕ್ಕಿ ಲೂಟಿ ಮಾಡುವ ಕೆಲಸ ಅಧಿಕಾರಿಗಳ ಜತೆ ಸೇರಿ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಇದರ ಹಿಂದೆ ಲೂಟಿಕೋರ ಸದಸ್ಯನ ಪಾತ್ರವಿರುವುದು ಸ್ಪಷ್ಟವಾಗಿದೆ.

ಮುಂಗಾರು ಬಂದರು ರೈತರಗೆ ಸಿಗದ ಸಾಲ, ಹಳ್ಳ ಹಿಡಿದ ಸೊಸೈಟಿ ಸಿಸ್ಟಮ್ ..!

ಪಿಕೆಪಿಎಸ್ ಸೊಸೈಟಿಯಿಂದ ಪಡೆದ ಸಾಲಕ್ಕೆ ವರ್ಷದ ಹಿಂದೆ ರೈತರು ಸಕಾಲದಲ್ಲಿ ಹೊರಗಡೆಯಿಂದ ಬಡ್ಡಿ ಮೇಲೆ ಸಾಲ ತೆಗೆದು ತುಂಬಿದ್ದರೂ, ಇದೂವರೆಗೆ ಸಾಲ ನೀಡುವುದಕ್ಕೆ ಹೊಸ ಮಂಡಳಿ ಮುಂದಾಗಿಲ್ಲ. ಇದಕ್ಕೆ ಆ ಲೂಟಿಕೋರ ಸದಸ್ಯ ಹಾಗೂ ಕಂದಮ್ಮಗಳ ಅನ್ನ ಕಸಿದು ತಿನಿದು ಸದಸ್ಯನೇ ಕಾರಣ ಎಂದು ತಿಳಿದಿದೆ.

ಹೊಸ ಅಧ್ಯಕ್ಷನಿಂದ ರೈತ ಹಾಗೂ ಜನತೆಗೆ ಭಾರಿ ನಿರೀಕ್ಷೆ ಇತ್ತು. ಇತ ಬಂದಮೇಲೆ ನಮಗೆ ಫಲ ನೀಡುವ ಸೊಸೈಟಿಯನ್ನಾಗಿ ಮಾಡುತ್ತಾರೆ ಎಂದು ನಂಬಿದ್ದರು. ಆದರೆ ಆ ಲೂಟಿಕೋರ ಸದಸ್ಯ ತನ್ನ ವಯಕ್ತಿಕ ಲಾಭ ಹಾಗೂ ದ್ವೇಷಕ್ಕಾಗಿ ಸೊಸೈಟಿಯನ್ನು ಬಲಿ ಪಡೆಯುತ್ತಿದ್ದಾನೆ. ಇದನ್ನು ಕಂಡು ಕಾಣದಂತೆ ಇರುವ ಉಳಿದ ಸದಸ್ಯರು ರಬ್ಬರ ಸ್ಟ್ಯಾಂಪಗಳಾಗಿದ್ದಾರೆ.

ಇದು ಅಗಸಗಿ PKPS ಲೂಟಿ ಭಾಗ-1 ಆಗಿದ್ದು, ಮುಂದಿನ ಭಾಗದಲ್ಲಿ ಆ ಲೂಟಿಕೋರ, ಲಪಂಗ ಸದಸ್ಯ ಹಿಂದೆ ಮಾಡಿರುವ ಹಾಗೂ ಮಾಡುತ್ತಿರುವ ಲೂಟಿಗಳ ಬಗ್ಗೆ ಜನಜೀವಾಳದಲ್ಲಿ ವಿಸ್ತೃತ ವರದಿಗಳು ಮೂಡಿಬರಲಿವೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ