Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ


ಬೆಳಗಾವಿ:



ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಸಭಾಗೃಹದಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಪಿಯು ದ್ವಿತೀಯ ವರ್ಷದಲ್ಲಿ ಕೆಎಲ್‌ಇ ವಿದ್ಯಾರ್ಥಿಗಳ ಸಾಧನೆಯನ್ನು ಕುರಿತು ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ ಕೋರೆ ಹೆಮ್ಮೆ ವ್ಯಕ್ತಪಡಿಸಿ, ಈ ವರ್ಷದ ಸಾಧನೆಯ ಗರಿ ಬಿಚ್ಚಿಟ್ಟರು.


ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ, ಮಾಜಿ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೆಎಲ್‌ಇ ಆಜೀವ ಸದಸ್ಯ ಡಾ.ಸತೀಶ ಎಂ.ಪಿ., ಎಸ್.ಜಿ.ನಂಜಪ್ಪನವರ ಅವರು ಸಹ ಉಪಸ್ಥಿತರಿದ್ದರು.


ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಅಮಿತ ಕೋರೆ ಅವರು ಮಾತನಾಡುತ್ತ, ಶತಮಾನದ ಚರಿತ್ರೆಯನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯು ಇಂದು ಶಿಕ್ಷಣ-ಆರೋಗ್ಯ-ಸಂಶೋಧನಾ ಕ್ಷೇತ್ರದಲ್ಲಿ ಅಗಾಧವಾದ ಕೊಡುಗೆಯನ್ನು ಸಲ್ಲಿಸಿದೆ. ಶಿಕ್ಷಣದ ಮೂಲಕ ಸಮಾಜವನ್ನು ಪರಿವರ್ತಿಸುವ ಸಂಕಲ್ಪದೊಂದಿಗೆ ಏಳು ಜನ ಸಪ್ತರ್ಷಿಗಳ ನಿಸ್ವಾರ್ಥತ್ಯಾಗದಿಂದ ಸ್ಥಾಪನೆಗೊಂಡಂತಹದು.
ಕೆಎಲ್‌ಇ ಸಂಸ್ಥೆ. ಇಂದು 318 ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಸಂಸ್ಥೆಯಲ್ಲಿ 1.48 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ.


ಶಿಕ್ಷಣದ ಎಲ್ಲ ಅಗತ್ಯತೆಗಳನ್ನು ಪೂರೈಸಿರುವ ಸಂಸ್ಥೆಯು ಗುಣಾತ್ಮಕವಾದ ಶಿಕ್ಷಣವನ್ನು ನೀಡುವುದರೊಂದಿಗೆ ಗ್ರಾಮೀಣ ಭಾಗದ ರೈತರ, ಕೂಲಿ ಕಾರ್ಮಿಕರ, ಮಧ್ಯವರ್ಗದವರ ಹಾಗೂ ಗಡಿಭಾಗದ ಅಸಂಖ್ಯ ವಿದ್ಯಾರ್ಥಿಗಳಿಗೆ ಸರ್ವೋನ್ನತವಾದ ಶಿಕ್ಷಣವನ್ನು ನೀಡುವ ಮೂಲಕ ಅವರ ಬದುಕಿಗೆಗೆ ಬೆಳಕಾಗಿದೆ. ಶಿಶು ವಿಹಾರದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದ ವರೆಗೆ ಹಾಗೂ ಸಮುದಾಯ ಆರೋಗ್ಯ ಸೇವೆಯ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಎಲ್‌ಇ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ʼಕೆಎಲ್‌ಇ ಬ್ರ್ಯಾಂಡ್‌ನೇಮ್‌ʼ ಜಾಗತಿಕ ನೆಲೆಯಲ್ಲಿ ದಾಖಲಿಸಿದೆ.
ಇವುಗಳಲ್ಲಿ ಕೆಎಲ್‌ಇ ಪಿಯುಸಿ ಕಾಲೇಜುಗಳ ಕೊಡುಗೆ ಸಿಂಹಪಾಲು.



ಕಲಾ-ವಾಣಿಜ್ಯ-ವಿಜ್ಞಾನ ಈ ಮೂರು ವಿಭಾಗಗಳಲ್ಲಿ 37 ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಚಿಕ್ಕೋಡಿ, ಗೋಕಾಕ, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಯಬಾಗ, ಶಿರಗುಪ್ಪಿ, ಧಾರವಾಡ-ಹುಬ್ಬಳ್ಳಿ, ನಾಗರಭಾವಿ, ಬೆಂಗಳೂರು, ಗದಗ, ಹಾವೇರಿ, ರಾಣೇಬೆನ್ನೂರ, ಸಂಶಿ, ಗಂಗಾವತಿ, ಕುಕನೂರ, ಹಾನಗಲ್‌, ಅಂಕೋಲಾ, ಮಹಾಲಿಂಗಪುರ ಹೀಗೆ ರಾಜ್ಯದ ಬಹುತೇಕ ನೆಲೆಗಳಲ್ಲಿ ವ್ಯಾಪಿಸಿಕೊಂಡಿರುವ ಕೆಎಲ್‌ಇ ಪಿಯು ಕಾಲೇಜುಗಳು ಗ್ರಾಮೀಣ ಹಾಗೂ ಗಡಿಭಾಗದಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.


ಮುಂಬರುವ ದಿನಗಳಲ್ಲಿ ಕೆಎಲ್‌ಇ ಸಂಸ್ಥೆಯು ಇನ್ನೂ ಹೆಚ್ಚಿನ ವಸತಿಸಹಿತ ಕಾಲೇಜುಗಳನ್ನು ಪ್ರಾರಂಭಿಸಲಿದೆ ಎಂದು ಹೇಳಿದರು.

ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಎಲ್ಲ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳ ಪಿಯುಸಿ ಕಾಲೇಜುಗಳಲ್ಲಿ ಅತ್ಯುತ್ತಮವಾದ ತರಬೇತಿಯನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ದೂರದ ಮಹಾನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಹೋಗಿ ಓದುವುದು ಕಷ್ಟವಾದ ಕಾರಣ ಕಳೆದ ಒಂದು ದಶಕಕ್ಕೂ ಹೆಚ್ಚು ವರ್ಷಗಳಿಂದ NEET, JEE, CET, CA, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನುರಿತ ಶಿಕ್ಷಕರಿಂದ ನೀಡಲಾಗುತ್ತಿದೆ. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್‌ನ ಸೂರಿನಡಿಯಲ್ಲಿ ವಿಶೇಷವಾದ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಕೆಎಲ್‌ಇ ಸಂಸ್ಥೆಯು ಕ್ರೀಡಾಪಟುಗಳಿಗೆ ಉತ್ತಮವಾದ ತರಬೇತಿಯನ್ನು ನೀಡುತ್ತಿದ್ದು, ಖೇಲೋ ಇಂಡಿಯಾದಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ಸಾಧನೆ ಗೈದಿದ್ದು, ಮುಂಬರುವ ದಿನಗಳಲ್ಲಿ ಓಲಂಪಿಕನಲ್ಲಿ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಕ್ರೀಡಾ ಸಲಕರಣೆಗಳ ಜೊತೆಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯಮಟ್ಟದಲ್ಲಿ ಪಿಯು ರ‍್ಯಾಂಕ್‌ ಪಡೆದ ಕೆಎಲ್‌ಇ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

2025-26ನೇ ಸಾಲಿನಲ್ಲಿ ದಾಖಲೆಯ ರ‍್ಯಾಂಕ್‌ಗಳು:
ದಾಖಲಾರ್ಹ ಫಲಿತಾಂಶ: ಪ್ರತಿವರ್ಷ ಕೆಎಲ್‌ಇ ಪಿಯು ಕಾಲೇಜುಗಳ ಫಲಿತಾಂಶದಲ್ಲಿ ದಾಖಲಾರ್ಹ ಬದಲಾವಣೆಯಾಗಿರುವುದು ಅವಲೋಕಿಸಬಹುದು. ರಾಜ್ಯಮಟ್ಟದಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆಯುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪ್ರಸಕ್ತ 2025-26ನೇ ಸಾಲಿನಲ್ಲಿ 11,516 ವಿದ್ಯಾರ್ಥಿಗಳಲ್ಲಿ 11,047 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ 95.93% ಫಲಿತಾಂಶವನ್ನು ಸಂಸ್ಥೆಗೆ ತಂದುಕೊಟ್ಟಿದ್ದಾರೆ. ಕಲಾ ವಿಭಾಗದಲ್ಲಿ 91.29%, ವಾಣಿಜ್ಯ ವಿಭಾಗದಲ್ಲಿ 96.62% ಹಾಗೂ ವಿಜ್ಞಾನ ವಿಭಾಗದಲ್ಲಿ 96.83% ಫಲಿತಾಂಶ ಬಂದಿದೆ.
ಪ್ರಸಕ್ತ ಸಾಲಿನಲ್ಲಿಯೇ ರಾಜ್ಯಮಟ್ಟದಲ್ಲಿ 27 ರ‍್ಯಾಂಕ್‌ಗಳು ಕೆಎಲ್‌ಇ ಸಂಸ್ಥೆಯ ಪಾಲಾಗಿವೆ. ಕಲಾ ವಿಭಾಗದಲ್ಲಿ 3ನೇ, 7ನೇ, 10ನೇ ರ‍್ಯಾಂಕ್‌ಗಳನ್ನು ಒಟ್ಟು 5 ವಿದ್ಯಾರ್ಥಿಗಳು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 4ನೇ, 5ನೇ, 6ನೇ, 7ನೇ, 8ನೇ, 9ನೇ ಹಾಗೂ 10ನೇ ರ‍್ಯಾಂಕ್‌ಗಳನ್ನು ಒಟ್ಟು 13 ವಿದ್ಯಾರ್ಥಿಗಳು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 4ನೇ, 7ನೇ, 8ನೇ, 9ನೇ ಹಾಗೂ 10ನೇ ರ‍್ಯಾಂಕ್‌ಗಳನ್ನು ಒಟ್ಟು 9 ವಿದ್ಯಾರ್ಥಿಗಳು ಪಡೆದಿದ್ದಾರೆ.
ವ್ಯವಹಾರ ಅಧ್ಯಯನದಲ್ಲಿ 172, ಗಣಿತದಲ್ಲಿ 138, ಅರ್ಥಶಾಸ್ತ್ರದಲ್ಲಿ 119, ಕಂಪ್ಯೂಟರ್‌ ಸೈನ್ಸನಲ್ಲಿ 102 ಹೀಗೆ ಒಟ್ಟಾರೆಯಾಗಿ ಕೆಎಲ್‌ಇ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 1007 ಸೆಂಟಮ್ಸ (100ಕ್ಕೆ100) ಅಂಕಗಳನ್ನು ಪಡೆದು ಮೈಲುಗಲ್ಲು ನಿರ್ಮಿಸಿದ್ದಾರೆ.
ಕಲಾ ವಿಭಾಗದಲ್ಲಿ 410, ವಾಣಿಜ್ಯದಲ್ಲಿ 1,251 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 2,270 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ (85% ಹೆಚ್ಚು) ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. 6,163 ವಿದ್ಯಾರ್ಥಿಗಳು ಪ್ರಥಮಸ್ಥಾನದಲ್ಲಿ ಪಾಸಾಗಿರುವುದು ಹೆಮ್ಮೆಯ ಸಂಗತಿ.

ಕೇವಲ ನಗರ ಪ್ರದೇಶಗಳಿಗೆ ಸಿಮೀತವಾಗಿದ್ದ ಐಐಟಿ ಪ್ರವೇಶ ಪರೀಕ್ಷೆ JEE ರ‍್ಯಾಂಕ್‌ಗಳು ಇಂದು ಕೆಎಲ್‌ಇ ಸಂಸ್ಥೆಯು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಪ್ರಾರಂಭಿಸಿದ ಇಂಟಿಗ್ರೇಟೆಡ್‌ ಪದವಿಪೂರ್ವ ಕಾಲೇಜುಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಲಭಿಸುವಂತಾಗಿದೆ.

ಪ್ರಸಕ್ತ ವರ್ಷದ JEE ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಅಗ್ರ 500 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದರೆ, ಮೂವರು ವಿದ್ಯಾರ್ಥಿಗಳು 1,000 ಒಳಗೆ, 5 ವಿದ್ಯಾರ್ಥಿಗಳು 2,000 ಒಳಗೆ, 9 ವಿದ್ಯಾರ್ಥಿಗಳು 5,000 ಒಳಗೆ ಹಾಗೂ 14 ವಿದ್ಯಾರ್ಥಿಗಳು 10,000 ಒಳಗಿನ ರ‍್ಯಾಂಕ್‌ ಪಡೆದಿರುತ್ತಾರೆ. ಒಟ್ಟಾರೆ 100 ಕ್ಕಿಂತಲೂ ಅಧಿಕ ಕೆಎಲ್‌ಇ ವಿದ್ಯಾರ್ಥಿಗಳು JEE Advance ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಕೆಎಲ್‌ಇ ಸಂಸ್ಥೆಯ ಪದವಿಪೂರ್ವ ಕಾಲೇಜುಗಳು ರಾಜ್ಯದಲ್ಲಿಯೇ ಸರ್ವೋನ್ನತವಾದ ಸಾಧನೆಯನ್ನು ಮಾಡಿವೆ. ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣವನ್ನು ಉಂಟುಮಾಡುವ ಮೂಲಕ ಅವರನ್ನು ಮುಂದಿನ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಇದರ ಫಲವಾಗಿಯೇ ರಾಷ್ಟ್ರಮಟ್ಟದ NEET, JEE, CA ಮೊದಲ್ಗೊಂಡು ಪರೀಕ್ಷೆಗಳಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ದಾಖಲಾರ್ಹವಾದ ಸಾಧನೆಯನ್ನು ಮಾಡುತ್ತಿರುವುದೂ ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿ ನಿಂತಿದೆ.

ಫೋಟೋ: ರಾಜ್ಯಮಟ್ಟದಲ್ಲಿ ಪಿಯು ರ‍್ಯಾಂಕ್‌ ಪಡೆದ ಕೆಎಲ್‌ಇ ವಿದ್ಯಾರ್ಥಿಗಳಿಗೆ ಅಭಿನಂದಿಸಿದ ಕೆಎಲ್‌ಇ ಕಾರ್ಯಾಧ್ಯಕ್ಷರಾದ ಅಮಿತ ಕೋರೆ, ನಿರ್ದೇಶಕರುಗಳಾದ ಮಹಾಂತೇಶ ಕವಟಗಿಮಠ, ಜಯಾನಂದ ಮುನವಳ್ಳಿ, ಆಜೀವ ಸದಸ್ಯರಾದ ಡಾ.ಸತೀಶ ಎಂ.ಪಿ. ಮತ್ತು ಎಸ್.ಜಿ.ನಂಜಪ್ಪನವರ ಅವರು ಉಪಸ್ಥಿತರಿದ್ದರು.

Photo: Felicitation of KLE students who secured ranks at the state level in the PU examinations by KLE Society Chairman, Shri Amit Kore. Members of the Board of Management Shri Mahantesh Kavatagimath, Shri Jayanand Munavalli, Life Members Dr. Satisha M.P., Shri S.G.Nanjappnavar were present on the occasion.

KLE Society, which boasts a history spanning over a century, has made immense contributions to the fields of Education, Healthcare, and Research. Founded through the selfless sacrifice of seven visionaries (the Saptarshis) with a resolve to transform society through education, the institution now oversees 318 constituent units with over 1.48 lakh students.
By fulfilling all educational requirements and providing quality instruction, the society has become a beacon of light for countless students from rural areas, including children of farmers, laborers, the middle class, and those from border regions. From kindergarten to post-graduation and through community health services, KLE has left an indelible mark at both national and international levels, establishing the 'KLE Brand Name' on a global scale.
The contribution of KLE PUC Colleges is significant. There are 37 PU Colleges operating across the Arts, Commerce, and Science streams. These colleges are spread across various locations in the state, including Belagavi, Chikkodi, Nippani, Athani, Gokak, Khanapur, Bailhongal, Saundatti, Raibag, Shiraguppi, Dharwad-Hubballi, Nagarabhavi (Bengaluru), Gadag, Haveri, Ranebennur, Samsi, Gangavathi, Kuknoor, Hangal, Ankola, and Mahalingpur, with a strong presence in rural and border areas.
Excellent Coaching
The Science, Arts & Commerce PU Colleges provide top-tier coaching for examinations like NEET, JEET, CET, CA and other competitive exams. This is delivered by subject experts for both the First and Second Year students on the college campus. This is especially beneficial for rural students who otherwise face great difficulties in traveling to distance cities for the said coaching.
KLE Pre-University colleges feature well-equipped buildings with modern facilities, including smart classrooms, laboratories, digital libraries, gardens, indoor and outdoor sports facilities, canteen and bus services.
Record Ranks in 2025-26
A remarkable accomplishment by the students of KLE PU Colleges can be observed every year. They bring glory to the institution by securing prestigious state-level ranks.
• Overall Performance (2025-26): Out of 11,516 students, 11,047 passed, yielding an overall result of 95.93%.
• Overall percentage in Arts-91.29%, Commerce-96.62%, Science-96.83%
• State Ranks: This year, the students secured 27 state-level ranks.
o Arts: 5 students secured 3rd, 7th, and 10th ranks.
o Commerce: 13 students secured 4th, 5th, 6th, 7th, 8th, 9th, and 10th ranks.
o Science: 9 students secured 4th, 7th, 8th, 9th, and 10th ranks.
• Perfect Scores (Centums): KLE students achieved a milestone by scoring 100/100 in various subjects. The total of 1,007 centum scores includes 172 in Business Studies, 138 in Mathematics, 119 in Economics, and 102 in Computer Science.
• Distinctions: 410 students in Arts, 1,251 in Commerce, and 2,270 in Science passed with Distinction (above 85%). Additionally, 6,163 students passed in the First Class.
JEE Achievements
In this year's JEE exam:
• 2 students ranked in the Top 500.
• 3 students within the Top 1,000.
• 5 students within the Top 2,000.
• 9 students within the Top 5,000.
• 14 students within the Top 10,000.
• Overall, more than 100 KLE students qualified to appear for the JEE Advanced exam.

JEE (IIT entrance) ranks, which were once achieved mostly by students from urban areas, are now being secured by rural students, thanks to the Integrated PU Colleges started by KLE.
In summary, the students of Pre-University colleges of KLE Society have achieved noteworthy success in the state. By creating a conducive learning environment, our institutions prepare students for higher education. The success of KLE students in national exams like NEET, JEE, and CA, and their entry into high-ranking institutions of higher education, stands as a testament to our commitment.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ