Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪಾಸ್‌ಪೋರ್ಟ್‌ ಪೌರತ್ವದ ದಾಖಲೆಯಲ್ಲ : ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಪಾಸ್‌ಪೋರ್ಟ್‌ ಪೌರತ್ವದ ದಾಖಲೆಯಲ್ಲ : ವಿದೇಶಾಂಗ ಸಚಿವಾಲಯ ಸ್ಪಷ್ಟನೆ

Advertisement

ನವದೆಹಲಿ: ಪಾಸ್‌ಪೋರ್ಟ್ ಅನ್ನು ಪೌರತ್ವದ ದೃಢವಾದ ಸಾಕ್ಷ್ಯವೆಂದು ಪರಿಗಣಿಸುವ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಗೊಂದಲದ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಹತ್ವದ ಸ್ಪಷ್ಟನೆ ನೀಡಿದೆ. ಭಾರತೀಯ ಪಾಸ್‌ಪೋರ್ಟ್ ಅನ್ನು ಕೇವಲ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಬಳಸುವ ದಾಖಲೆಯಾಗಿ ಪರಿಗಣಿಸಬೇಕು; ಅದನ್ನು ಭಾರತೀಯ ಪೌರತ್ವದ ಅಂತಿಮ ಮತ್ತು ನಿರ್ಣಾಯಕ ದಾಖಲಯೆಂದು ಪರಿಗಣಿಸಬಾರದು ಎಂದು ಸಚಿವಾಲಯ ತಿಳಿಸಿದೆ.
ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಪಾಸ್‌ಪೋರ್ಟ್ ಹಾಗೂ ಅಂತರರಾಷ್ಟ್ರೀಯ ಸಂಚಾರ ವ್ಯವಸ್ಥೆ( India’s rapidly expanding passport and mobility ecosystem)ಯ ಕುರಿತು ನಡೆದ ವಿಶೇಷ ಮಾಹಿತಿ ಸಭೆಯಲ್ಲಿ ಈ ಸ್ಪಷ್ಟನೆ ನೀಡಲಾಯಿತು. ಪಾಸ್‌ಪೋರ್ಟ್ ಸೇವೆಗಳನ್ನು ಹೆಚ್ಚು ಸುಲಭ, ಸುರಕ್ಷಿತ ಮತ್ತು ಜಾಗತಿಕವಾಗಿ ಮಾನ್ಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಸುಧಾರಣೆಗಳ ವಿವರಗಳನ್ನು ಅಧಿಕಾರಿಗಳು ಹಂಚಿಕೊಂಡರು.
ಅಧಿಕಾರಿಗಳ ಪ್ರಕಾರ, ಪಾಸ್‌ಪೋರ್ಟ್‌ಗಳನ್ನು ಭಾರತೀಯ ನಾಗರಿಕರಿಗೇ ನೀಡಲಾಗುತ್ತದೆ. ಆದಾಗ್ಯೂ, ಅದರ ಮುಖ್ಯ ಉದ್ದೇಶ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು ಹಾಗೂ ವಿದೇಶಗಳಲ್ಲಿ ವ್ಯಕ್ತಿಯ ಗುರುತನ್ನು ದೃಢೀಕರಿಸುವುದಾಗಿದೆ.
ಐದು ದಿನಗಳಲ್ಲಿ ಪಾಸ್‌ಪೋರ್ಟ್, 45 ನಿಮಿಷಗಳಲ್ಲಿ ಸೇವೆ
ತಂತ್ರಜ್ಞಾನ ಆಧಾರಿತ ಸುಧಾರಣೆಗಳು ಹಾಗೂ ಸರಳೀಕೃತ ಪ್ರಕ್ರಿಯೆಗಳ ಪರಿಣಾಮವಾಗಿ ಪಾಸ್‌ಪೋರ್ಟ್ ಸೇವೆಗಳಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಹಲವೆಡೆಗಳಲ್ಲಿ ಈಗ ಕೇವಲ ಐದು ದಿನಗಳಲ್ಲೇ ಪಾಸ್‌ಪೋರ್ಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ (PSK) ಅರ್ಜಿದಾರರಿಗೆ ಸರಾಸರಿ 45 ನಿಮಿಷಕ್ಕಿಂತ ಕಡಿಮೆ ಸಮಯ ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಾದ್ಯಂತ ಇ-ಪಾಸ್‌ಪೋರ್ಟ್ ಜಾರಿ
ಸಭೆಯಲ್ಲಿ ಮತ್ತೊಂದು ಪ್ರಮುಖ ಸಾಧನೆಯಾಗಿ ಚಿಪ್ ಅಳವಡಿತ ಇ-ಪಾಸ್‌ಪೋರ್ಟ್‌ಗಳ ದೇಶವ್ಯಾಪಿ ಜಾರಿಗೆ ಒತ್ತು ನೀಡಲಾಯಿತು. ಕಳೆದ ವರ್ಷದ ಮೇ ತಿಂಗಳಿನಿಂದ ಹೊಸದಾಗಿ ನೀಡಲಾಗುತ್ತಿರುವ ಎಲ್ಲಾ ಭಾರತೀಯ ಪಾಸ್‌ಪೋರ್ಟ್‌ಗಳಲ್ಲಿ ಸುರಕ್ಷಿತ ಎಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗುತ್ತಿದೆ. ಈ ಚಿಪ್‌ನಲ್ಲಿ ಬಯೋಮೆಟ್ರಿಕ್ ಮಾಹಿತಿ ಹಾಗೂ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಮಾನದಂಡಗಳಿಗೆ ಅನುಗುಣವಾದ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.
ಈ ವ್ಯವಸ್ಥೆಯಿಂದ ದಾಖಲೆಗಳ ಭದ್ರತೆ ಹೆಚ್ಚುವುದಲ್ಲದೆ, ನಕಲಿ ಪಾಸ್‌ಪೋರ್ಟ್ ಬಳಕೆ ತಡೆಯಲು ಮತ್ತು ವಿದೇಶಿ ವಿಮಾನ ನಿಲ್ದಾಣಗಳು ಹಾಗೂ ಗಡಿ ತಪಾಸಣಾ ಕೇಂದ್ರಗಳಲ್ಲಿ ಸುಲಭ ಸ್ವೀಕಾರಕ್ಕೆ ನೆರವಾಗಲಿದೆ.
545 ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಜಾಲ
ಕಳೆದ ಒಂದು ದಶಕದಲ್ಲಿ ಭಾರತದ ಪಾಸ್‌ಪೋರ್ಟ್ ಸೇವಾ ಜಾಲವು ಆರು ಪಟ್ಟು ವಿಸ್ತರಿಸಿದೆ. ಪ್ರಸ್ತುತ ದೇಶದಾದ್ಯಂತ 545 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ವರ್ಷ ಇನ್ನೂ 20 ಹೊಸ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯುವ ಗುರಿ ಸರ್ಕಾರ ಹೊಂದಿದೆ.
2027ರೊಳಗೆ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಕನಿಷ್ಠ ಒಂದು ಪಾಸ್‌ಪೋರ್ಟ್ ಸೇವಾ ಕೇಂದ್ರ ಲಭ್ಯವಾಗುವಂತೆ ಮಾಡುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಬಹುತೇಕ ಎಲ್ಲಾ ಸಂಸತ್ತೀಯ ಕ್ಷೇತ್ರಗಳು ಈ ಸೇವಾ ಜಾಲದ ವ್ಯಾಪ್ತಿಗೆ ಬಂದಿದ್ದು, ಕೇವಲ ಸುಮಾರು 30 ಜಿಲ್ಲೆಗಳು ಮಾತ್ರ ಇನ್ನೂ ಪಾಸ್‌ಪೋರ್ಟ್‌ ಕೇಂದ್ರಕ್ಕಾಗಿ ಕಾಯುತ್ತಿವೆ.
ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ವಿಶೇಷ ಮೊಬೈಲ್ ಪಾಸ್‌ಪೋರ್ಟ್ ತಂಡಗಳನ್ನು ನಿಯೋಜಿಸಲಾಗಿದ್ದು, ಕಳೆದ ವರ್ಷ ಹಮ್ಮಿಕೊಂಡ ವಿಶೇಷ ಶಿಬಿರಗಳ ಮೂಲಕ ಸುಮಾರು ಮೂರು ಲಕ್ಷ ಜನರಿಗೆ ಪಾಸ್‌ಪೋರ್ಟ್ ವಿತರಿಸಲಾಗಿದೆ.
ದೇಶದ ಕೇವಲ 10% ಜನರ ಬಳಿ ಮಾತ್ರ ಪಾಸ್‌ಪೋರ್ಟ್
ಸೇವೆಗಳು ವಿಸ್ತರಿಸಿದರೂ, ಭಾರತದ ಪಾಸ್‌ಪೋರ್ಟ್ ವ್ಯಾಪ್ತಿ ಇನ್ನೂ ಕಡಿಮೆಯೇ ಇದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.10ರಷ್ಟು ಜನರ ಬಳಿಯೇ ಪಾಸ್‌ಪೋರ್ಟ್ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಣ, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಅವಕಾಶಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರಿಗೆ ಪಾಸ್‌ಪೋರ್ಟ್ ಲಭ್ಯವಾಗುವಂತೆ ಮಾಡುವುದನ್ನು ಸರ್ಕಾರ ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ.
25 ರಾಷ್ಟ್ರಗಳೊಂದಿಗೆ 27 ಸಂಚಾರ ಒಪ್ಪಂದಗಳು
ಭಾರತವು ಜಾಗತಿಕ ಸಂಚಾರ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ 25 ರಾಷ್ಟ್ರಗಳೊಂದಿಗೆ ಒಟ್ಟು 27 ಸಂಚಾರ (Mobility) ಒಪ್ಪಂದಗಳಿಗೆ ಸಹಿ ಹಾಕಿದೆ. ಯುರೋಪಿಯನ್ ಒಕ್ಕೂಟ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಹಾಗೂ ಹಲವು ಗಲ್ಫ್ ರಾಷ್ಟ್ರಗಳು ಇದರಲ್ಲಿ ಸೇರಿವೆ.
ಈ ಒಪ್ಪಂದಗಳ ಮೂಲಕ ವಿದ್ಯಾರ್ಥಿಗಳು, ತರಬೇತುದಾರರು, ಸಂಶೋಧಕರು, ವೃತ್ತಿಪರರು ಹಾಗೂ ಉದ್ಯಮಿಗಳಿಗೆ ಸುಗಮ ಸಂಚಾರದ ಅವಕಾಶಗಳು ದೊರೆಯಲಿವೆ.
ಭಾರತೀಯರಿಗೆ ಹೆಚ್ಚಿದ ಜಾಗತಿಕ ಪ್ರವೇಶ
ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಜಾಗತಿಕ ಮಟ್ಟದಲ್ಲಿ ಪ್ರಯಾಣ ಸೌಲಭ್ಯಗಳು ಕ್ರಮೇಣ ಹೆಚ್ಚುತ್ತಿವೆ. ಪ್ರಸ್ತುತ 27 ರಾಷ್ಟ್ರಗಳು ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶ ನೀಡುತ್ತಿವೆ. ಇನ್ನೂ 47 ರಾಷ್ಟ್ರಗಳು ವೀಸಾ-ಆನ್-ಅರೈವಲ್ ಸೌಲಭ್ಯ ಒದಗಿಸುತ್ತಿದ್ದು, 66 ರಾಷ್ಟ್ರಗಳು ಇ-ವೀಸಾ ವ್ಯವಸ್ಥೆಯನ್ನು ಜಾರಿಗೊಳಿಸಿವೆ.
7 ಲಕ್ಷ ಕಾರ್ಮಿಕರಿಗೆ ವಲಸೆ ಅನುಮತಿ
ವಿದೇಶ ಉದ್ಯೋಗ ಕ್ಷೇತ್ರದಲ್ಲಿಯೂ ಸರ್ಕಾರ ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದೆ. 2022ರ ಅಕ್ಟೋಬರ್‌ನಲ್ಲಿ ಆರಂಭಗೊಂಡ ‘ಇ-ಮೈಗ್ರೇಟ್ 2.0’ (eMigrate 2.0) ವೇದಿಕೆಯ ಮೂಲಕ ಇದುವರೆಗೆ ಸುಮಾರು ಏಳು ಲಕ್ಷ ಭಾರತೀಯ ಕಾರ್ಮಿಕರು ವಲಸೆ ಅನುಮತಿ (Emigration Clearance) ಪಡೆದಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉದ್ಯಮಿ ರಾಜಾಭಾವು ಶಿರಗಾಂವಕರ ನಿಧನಪಾಸ್‌ಪೋರ್ಟ್‌ ಪೌರತ್ವದ ದಾಖಲೆಯಲ್ಲ : ವಿದೇಶಾಂಗ ಸಚಿವಾಲಯ ಸ್ಪಷ್ಟನೆಬೆಳಗಾವಿಯಲ್ಲಿ ‘ಖೇಲೋ ಇಂಡಿಯಾ’ ಯೋಜನೆಯಡಿ ಭವ್ಯ ಹಾಕಿ ಮೈದಾನ ನಿರ್ಮಾಣಕ್ಕೆ ವೇಗ: ಸಂಸದ ಜಗದೀಶ್ ಶೆಟ್ಟರ್ ಭರವಸೆ; ಕ್ಯಾಂಟೋನ್ಮೆಂಟ್ ಮಂಡಳಿಯಿಂದ ಸಕಾರಾತ್ಮಕ ಸ್ಪಂದನೆಎನ್‌ಸಿಇಆರ್‌ಟಿ ಮಹತ್ವದ ನಿರ್ಧಾರ; 9ನೇ ತರಗತಿ ಪಠ್ಯಪುಸ್ತಕದಲ್ಲಿ ‘ತುರ್ತು ಪರಿಸ್ಥಿತಿ’ ವಿಷಯ ಸೇರ್ಪಡೆಬೆಳಗಾವಿಯಲ್ಲಿ ‘ಜಿನ ದೀವಿಗೆ’ ಮತ್ತು ‘ಮರಾಠಿಯೊಳಗೊಂದು ಕನ್ನಡ ಗತವೈಭವ’ ಕೃತಿಗಳ ಲೋಕಾರ್ಪಣೆ ಸಮಾರಂಭವೆನೆಜುಲಾದಲ್ಲಿ ಭೀಕರ ಅವಳಿ ಭೂಕಂಪ : 32 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯಮೋದಿ ಪ್ರಧಾನಿಯಾಗಿ 12 ವರ್ಷದ ಸಾಧನೆ : ಬೆಳಗಾವಿಯ ಸಾಹಿತಿಗಳಿಗೆ ಪುಸ್ತಕ ವಿತರಿಸಿದ ಮಾಜಿ ಸಿಎಂ ಹಿಂಡಾಲ್ಕೋ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ..!ಸಚಿವ ಸತೀಶ ಜಾರಕಿಹೊಳಿ ಸಹೋದರಿಯ ಪತಿಗೆ ಬಿಗ್ ಶಾಕ್ ನೀಡಿದ EDಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ಮುನ್ಸೂಚನೆ ; ಆರೆಂಜ್ ಅಲರ್ಟ್ ಘೋಷಣೆ