Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ತನ್ನ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದ್ದನ್ನು ಕೊನೆಗೂ ಬಹಿರಂಗವಾಗಿ ಒಪ್ಪಿಕೊಂಡ ಪಾಕಿಸ್ತಾನ…!

Advertisement
ನವದೆಹಲಿ: ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತವು ತನ್ನ ಪ್ರಮುಖ ವಾಯುನೆಲೆಗಳ ಮೇಲಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನವು ಮತ್ತೊಮ್ಮೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಅಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ದೇಶದ ಗಮನಾರ್ಹ ವಾಯು ನೆಲೆಗಳು ಹಾನಿಗೊಳಗಾಗಿವೆ ಎಂದು ಪಾಕಿಸ್ತಾನ ದೃಢಪಡಿಸಿದೆ.
ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್, ಸ್ಥಳೀಯ ಚಾನೆಲ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಭಾರತದ ದಾಳಿಯಿಂದ ಪಾಕಿಸ್ತಾನದ ವಾಯುನೆಲೆಗಳು ಹಾನಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಪ್ರತೀಕಾರದ ದಾಳಿಯ ಸಮಯದಲ್ಲಿ ಭಾರತವು ನೂರ್ ಖಾನ್ ಮತ್ತು ಶೋರ್ಕೋಟ್ ವಾಯುನೆಲೆಗಳ ಮೇಲೆ ದಾಳಿ ಮಾಡಿದ್ದರಿಂದ ಅದು ಹಾನಿಗೊಳಗಾಗಿದೆ ಎಂದು ಅವರು ದೃಢಪಡಿಸಿದ್ದಾರೆ.

ಇದಲ್ಲದೆ, ಸೌದಿ ರಾಜಕುಮಾರ ಫೈಸಲ್ ಬಿನ್ ಸಲ್ಮಾನ್ ಅವರು ಪಾಕಿಸ್ತಾನ “ಸಂಘರ್ಷ ನಿಲ್ಲಿಸುವುದಕ್ಕೆ ಸಿದ್ಧ” ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್‌ಗೆ ತಿಳಿಸುವುದಾಗಿ ಆಫರ ನೀಡಿದರು ಎಂದು ದಾರ್ ಹೇಳುವುದನ್ನು ಕೇಳಬಹುದು, ಇದು ಪಾಕಿಸ್ತಾನವು ಯುದ್ಧ ನಿಲ್ಲಿಸುವಂತೆ ಸೌದಿ ಅರೇಬಿಯಾ ಮತ್ತು ಅಮೆರಿಕದಿಂದ ಬೆಂಬಲಕ್ಕಾಗಿ ಮನವಿ ಮಾಡಿತ್ತು ಎಂದು ಸೂಚಿಸುತ್ತದೆ.
ಭಾರತದ ವಾಯುದಾಳಿಯಲ್ಲಿ ಪಾಕಿಸ್ತಾನದ ಕನಿಷ್ಠ ಎಂಟು ಸ್ಥಳಗಳು ದಾಳಿಗೊಳಗಾಗಿ ಹಾನಿಗೊಳಗಾಗಿವೆ ಎಂದು ಅದರ ಆಂತರಿಕ ಮಿಲಿಟರಿ ಕಾರ್ಯಾಚರಣೆ ‘ಬನ್ಯನ್ ಉನ್ ಮರ್ಸೂಸ್’ ಕುರಿತ ಗೌಪ್ಯ ಪಾಕಿಸ್ತಾನಿ ದಾಖಲೆಯು ಬಹಿರಂಗಪಡಿಸಿದೆ.

ಏತನ್ಮಧ್ಯೆ, ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಎಕ್ಸ್‌ನಲ್ಲಿ “ಈಗ ಅದು ಅಧಿಕೃತವಾಗಿದೆ: ಪಾಕಿಸ್ತಾನವು ಹಾನಿಯಾಗಿದ್ದನ್ನು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.
“ಪಾಕಿಸ್ತಾನವು ಅಮೆರಿಕ ಮತ್ತು ಸೌದಿ ಅರೇಬಿಯಾ ಎರಡಕ್ಕೂ ಓಡಿ ಭಾರತವನ್ನು ತಡೆಯುವಂತೆ ಬೇಡಿಕೊಂಡಿದೆ ಎಂಬುದನ್ನು ಒಪ್ಪಿಕೊಂಡಿದೆ. ಭಾರತಕ್ಕೆ ದಾಳಿ ನಿಲ್ಲಿಸುವಂತೆ ಲಾಬಿ ಮಾಡುತ್ತಿರುವುದು ಟ್ರಂಪ್ ಒಬ್ಬರೇ ಅಲ್ಲ – ಸೌದಿ ಅರೇಬಿಯಾ ಕೂಡ ಇದರಲ್ಲಿ ಭಾಗಿಯಾಗಿದ್ದತ್ತು ಎಂದು ಪಾಕಿಸ್ತಾನ ಅಜಾಗರೂಕತೆಯಿಂದ ಒಪ್ಪಿಕೊಂಡಿದೆ” ಎಂದು ಮಾಳವಿಯಾ ಬರೆದಿದ್ದಾರೆ. “ಬಾಲಾಕೋಟ್‌ನಿಂದ ಆಪರೇಶನ್‌ ಸಿಂಧೂರವರೆಗೆ, ಪಾಕಿಸ್ತಾನದ ನಿರಾಕರಣೆಗಳು ಸತ್ಯದ ಬಾಂಬ್‌ಗಳ ಅಡಿಯಲ್ಲಿ ಕುಸಿಯುತ್ತಲೇ ಇವೆ. ಅವರಿಗೆ ರಾಷ್ಟ್ರೀಯ ಭದ್ರತೆಯ ಮುಜುಗರ, ಭಾರತಕ್ಕೆ ಕಾರ್ಯತಂತ್ರದ ದೃಢೀಕರಣ” ಎಂದು ಅವರು ಹೇಳಿದ್ದಾರೆ.
ಬುಧವಾರ, ಭಾರತವು ‘ಆಪರೇಷನ್ ಸಿಂಧೂರ’ ಅನ್ನು “ತಪ್ಪಾಗಿ ನಿರೂಪಿಸುವ” ಪಾಕಿಸ್ತಾನದ ಪ್ರಯತ್ನವನ್ನು ಟೀಕಿಸಿತು ಮತ್ತು ಒಂದು ದೇಶವು ಅಮಾಯಕರನ್ನು ಹತ್ಯೆ ಮಾಡುವ ಭಯೋತ್ಪಾದಕರಿಗೆ ಆಶ್ರಯ ನೀಡಿದಾಗ, ರಕ್ಷಣಾತ್ಮಕ ಕ್ರಮವು ಕೇವಲ ಹಕ್ಕಲ್ಲ, ಬದಲಾಗಿ ಗಂಭೀರ ಕರ್ತವ್ಯವಾಗಿದೆ ಎಂದು ಹೇಳಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ