Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅತ್ತಿಗೆ ಮೇಲೆ ಕಣ್ಣು ಹಾಕಿದ ಗೆಳೆಯನನ್ನೆ ಚುಚ್ಚಿ ಕೊಂದ ಕುಚುಕು..!

ಅತ್ತಿಗೆ ಮೇಲೆ ಕಣ್ಣು ಹಾಕಿದ ಗೆಳೆಯನನ್ನೆ ಚುಚ್ಚಿ ಕೊಂದ ಕುಚುಕು..!

ಮರ್ಯಾದೆಗಾಗಿ ಮಧ್ಯರಾತ್ರಿ ದೋಸ್ತನನ್ನೇ ಕೊಲೆ ಮಾಡಿದ ಹುಲ್ಯಾನೂರ ಹುಲೇಪ್ಪಾ..!

ಬೆಳಗಾವಿ : ಅತ್ತಿಗೆಯ ಜೊತೆ ಪೋನ್ ಮೂಲಕ ಸಂಪರ್ಕ ಬೆಳೆಸಿ ಅನೈತಿಕ ಸಂಬಂಧಕ್ಕೆ ತಯಾರಿ ನಡೆಸಿದ್ದ ಚಡ್ಡಿ ದೊಸ್ತನನ್ನೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಹುಲ್ಯಾನೂರ ಗ್ರಾಮದಲ್ಲಿ ನಡೆದಿದೆ.

ಹುಲ್ಯಾನೂರ ಗ್ರಾಮದ 19 ವರ್ಷದ ಅಭಿಷೇಕ ಅಪ್ಪಯ್ಯಾ ಬುಡ್ರಿ ಎಂಬಾತ ಕೊಲೆಯಾದ ಯುವಕ.

23 ಹುಲೇಪ್ಪಾ ಬಸ್ಸಪ್ಪಾ ಕರಿಕಟ್ಟಿ ಕೊಲೆ ಆರೋಪಿಯಾಗಿದ್ದು, ಕೊಲೆಗೆ ಅನೈತಿಕ ಸಂಬಂಧದ ಶಂಕೆಯೆ ಕಾರಣ ಎಂದು ತಿಳಿದು ಬದಿದೆ.

ಮೃತ ಅಭಿಷೇಕ ಹಾಗೂ ಕೊಲೆ ಆರೋಪಿ ಹುಲೆಪ್ಪಾ ಕರಿಕಟ್ಟಿ ಇಬ್ಬರು ಕುಚುಕು ಗೆಳೆಯರು. ಕೆಲ ದಿನಗಳ ಹಿಂದೆ ಅಭಿಷೇಕ ಹುಲೇಪ್ಪನ ಅತ್ತಿಗೆಯೊಂದಿಗೆ ಪೋನ್ ಮೂಲಕ ಸಂಪರ್ಕ ಬೆಳೆಸಿ ಮಾತನಾಡುತ್ತಿದ್ದ. ಈ ವಿಷಯ ಹುಲೆಪ್ಪನಿಗೆ ಗೊತ್ತಾಗುತ್ತಿದ್ದಂತೆ ಅಭಿಷೇಕಗೆ ಎಚ್ಚರಿಕೆ ನೀಡಿ ಬಿಟ್ಟಿದ್ದ. ಆದರೆ ಅಭಿಷೇಕ ಮತ್ತೆ ಬೇರೊಂದು ನಂಬರ್ ಮೂಲಕ ಮಾತುಕತೆ ಪ್ರಾರಂಭಿಸಿದ್ದ. ಇದರಿಂದ ಕೆಂಡಾಮಂಡಲವಾಗಿದ್ದ ಹುಲೇಪ್ಪ ಮತ್ತು ಅಭಿಷೇಕ ನಡುವೆ ದಿನಾಂಕ 9-8-2023 ರ ರಾತ್ರಿ ಸುಮಾರು 11:30 ಗಂಟೆಗೆ ಜಗಳ ನಡೆದಿದೆ. ಆಗ ಹುಲೇಪ್ಪ ಅಭಿಷೇಕನನ್ನು ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದನು. ಚಾಕುವಿನಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಅಭಿಷೇಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಬೆಳಗ್ಗೆ ಅಸುನೀಗಿದ್ದಾನೆ.

ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪರಾರಿಯಾಗಿದ್ದ ಕೊಲೆ ಆರೋಪಿ ಹುಲೆಪ್ಪನನ್ನು ಮಾರಿಹಾಳ ಪಿಎಸ್ಐ ಮಂಜುನಾಥ ನಾಯಿಕ ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಆಯುಕ್ತ ಸಿದ್ಧರಾಮಪ್ಪ, ಡಿಸಿಪಿ ಪಿ ವಿ ಸ್ನೇಹಾ ಹಾಗೂ ಶೇಖರ ಅವರ ಮಾರ್ಗದರ್ಶನದಲ್ಲಿ
ಪ್ರಕರಣವನ್ನು ಭೇದಿಸಿರುವ ಪಿಎಸ್ಐ ಮಂಜುನಾಥ ನಾಯಿಕ ಹಾಗೂ ಸಿಬ್ಬಂದಿಗಳನ್ನು ಕಾರ್ಯವನ್ನು ಹಿರಿಯ ಪೊಲೀಸ ಅಧಿಕಾರಿಗಳು ಪ್ರಶಂಸೆ ಮಾಡಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ