Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಲಾಭದತ್ತ ಶ್ರೀ ಮಹಾಲಕ್ಷ್ಮಿ ಸೊಸೈಟಿ

 

ಮೂಡಲಗಿ :
ಮೂಡಲಗಿಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶೀ ಮಹಾಲಕ್ಷ್ಮೀ ಅರ್ಬನ ಕೋ-ಆಪ ಕ್ರೆಡಿಟ್ ಸೊಸಾಯಿಟಿಗೆ 31-೦3-2023ಕ್ಕೆ ರೂ 3.51ಕೋಟಿ ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ಮಲ್ಲಪ್ಪ. ಗು. ಗಾಣಿಗೇರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸುದ್ದಿಗೋಷ್ಠಿಯಲ್ಲಿ ಸಂಘವು ಮಾರ್ಚ ಅಂತ್ಯಕ್ಕೆ 2.69 ಕೋಟಿ ಶೇರು ಬಂಡವಾಳ, 92.96 ಕೋಟಿ ಠೇವುಗಳು, 14.೦8 ಕೋಟಿ ನಿಧಿಗಳನ್ನು, ಹೊಂದಿ ವಿವಿಧ ಬ್ಯಾಂಕುಗಳಲ್ಲಿ ಠೇವಣ ದಾರರ ಭದ್ರತೆಗಾಗಿ 3೦.62 ಕೋಟಿ ಗುಂತಾವಣ ಮಾಡಿ, 81.25 ಕೋಟಿ ರೂ ಸಾಲ ವಿತರಿಸಿದ್ದು ದುಡಿಯುವ ಬಂಡವಾಳ 116.35 ಕೋಟಿ ರೂ ಹೊಂದಿದೆ ಎಂದು ಹೇಳಿದರು.

ಸಂಘವು ಪ್ರಧಾನ ಕಛೇರಿ ಹಾಗೂ 10 ಶಾಖೆಗಳನ್ನು ಹೊಂದಿದ್ದು, ಪ್ರಧಾನಕಛೇರಿ, ಖಾನಟ್ಟಿ ಮತ್ತು ಸುಣಧೋಳಿ ಶಾಖೆಗಳು ಸಂಘದ ಸ್ವಂತ ಭ್ಯವವಾದ ಕಟ್ಟಡಗಳನ್ನು ಹೊಂದಿವೆ. ಕಟಕೋಳ ಶಾಖೆಗೆ ನಿವೇಶನ ಖರೀದಿಸಲಾಗಿದೆ.ಎಲ್ಲ ಶಾಖೆಗಳು ಗಣಕೀಕೃತವಾಗಿವೆ. ಪ್ರಾರಂಭದಿಂದಲೂ ಶೇ ೧೫ ಶೇರು ಲಾಭಾಂಶ ವಿತರಿಸುತ್ತಾ ಶೇರುದಾರರ ವಿಶ್ವಾಸವನ್ನು ಗಳಿಸಿರುತ್ತದೆ.
ಸಂಘವು 1992 ನೇ ಇಸ್ವಿಯಲ್ಲಿ ಪ್ರಾರಂಭವಾಗಿದ್ದು, 32 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಕಡಿಮೆ ಬಂಡವಾಳದಲ್ಲಿ ಅತೀ ಹೆಚ್ಚು ಲಾಭ ಗಳಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಾಲ ವಸೂಲಾತಿ ಆಗಿದೆ. ಇದಕ್ಕೆಲ್ಲ ಸಂಘದ ಪ್ರಧಾನ ಕಛೇರಿಯ ಆಡಳಿತ ಮಂಡಳಿ ಸದಸ್ಯರು, ಸರ್ವ ಸಿಬ್ಬಂದಿ ವರ್ಗ ಹಾಗೂ ಶಾಖೆಗಳ ಸಲಹಾ ಸಮಿತಿ ಸದಸ್ಯರ ನಿಸ್ವಾರ್ಥ ಸೇವೆಯೇ ಪ್ರಮುಖ ಕಾರಣವಾಗಿದೆ. ಸಮಯಕ್ಕೆ ಸರಿಯಾಗಿ ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡಿರುವ ಎಲ್ಲ ಸದಸ್ಯರಿಗೆ ಪ್ರಧಾನ ಕಛೇರಿಯ ಚೇರಮನ್ನರಾದ ಶ್ರೀ ಮಲ್ಲಪ್ಪ ಗಾಣಿಗೇರ ಇವರು ಅಭಿನಂದನೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಡಾ.ಪ್ರಕಾಶ ಶಿವಪ್ಪ ನಿಡಗುಂದಿ, ಸಂಘದ ಸದಸ್ಯರಾದ ಮುತ್ತಪ್ಪ ಈರಪ್ಪನವರ, ಶಿವಬಸು ಖಾನಟ್ಟಿ, ಸಂತೋಷ ತ ಪಾರ್ಶಿ, ಮಹಾದೇವ ಗೋಕಾಕ, ಸಚೀನ ಮುನ್ಯಾಳ, ಶ್ರೀಮತಿ ಸಾಂವಕ್ಕ ಮು ಶೆಕ್ಕಿ, ಶ್ರೀಮತಿ ಭಾರತಿ ಪಾಟೀಲ, ಶ್ರೀಮತಿ ವಿದ್ಯಾಶ್ರೀ ಸು ಮುರಗೋಡ, ಶ್ರೀಮತಿ ಗೌರವ್ವ ಪಾಟೀಲ, ಶ್ರೀಮತಿ ಶೋಭಾ ಕದಂ, ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ಬಗನಾಳ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ