Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮನಸ್ಸನ್ನು ಸದಾ ಖುಷಿಯಾಗಿಸಿಟ್ಟುಕೊಳ್ಳುವುದರ ಮೂಲಕ ಒತ್ತಡ ಮುಕ್ತರಾಗಿ ಜೀವಿಸಬಹುದು : ನಿರ್ಮಲಾ ಬಟ್ಟಲ

ಬೆಳಗಾವಿ : ಬುಧವಾರದಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಆಚರಿಸಲಾಯಿತು.



ಮಹಾವಿದ್ಯಾಲಯದ ಪ್ರಾಚಾರ್ಯೆ , ಆಪ್ತ ಸಮಾಲೋಚಕಿ ಡಾ.ನಿರ್ಮಲಾ ಜಿ. ಬಟ್ಟಲ ಮಾತನಾಡಿ,
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಘೋಷ ವ್ಯಾಖ್ಯೆಯಾದ "ನೀನು ಆತ್ಮಹತ್ಯೆಯನ್ನು ತಡೆಗಟ್ಟಬಹುದು" ಎಂಬುದನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿಸುತ್ತಾ ವ್ಯಕ್ತಿಯ ಮೇಲೆ ಉಂಟಾಗುವ ಅತಿಯಾದ ಒತ್ತಡಗಳು, ನಿರೀಕ್ಷೆಗಳು , ಸಾಮಾನ್ಯ ಮನಸ್ಥಿತಿಯಿಂದ ವ್ಯತಿರಿಕ್ತವಾಗಿ ವರ್ತಿಸುವುದು (ಬೈ ಪೋಲಾರ್ ಡಿಸಾರ್ಡರ್ ), ಹಾಗೂ ಅನಾವಶ್ಯಕವಾಗಿ ಸೃಷ್ಟಿಸುಕೊಳ್ಳುವ ಧಾವಂತಗಳು, ಖಿನ್ನತೆ, ಋಣಾತ್ಮಕ ಚಿಂತನೆ, ಅನಾರೋಗ್ಯಕರವಾದ ಜೀವನ ಶೈಲಿಯೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೃತ್ಯು ಸಹಜ ಲಾಲಸಿ ಪ್ರವೃತ್ತಿ ದ್ವಿಗುಣಗೊಳ್ಳುತ್ತಿದೆ. ಈ ದುಃಸ್ಥಿತಿಯನ್ನು ನಿಯಂತ್ರಿಸುವ ಕ್ರಮಗಳೆಂದರೆ ಮನಸ್ಸನ್ನು ಖುಶಿಯಾಗಿಸಿಟ್ಟುಕೊಳ್ಳುವುದು, ಜನರ ಜೊತೆ ಬೆರೆಯುವುದು, ಪುಸ್ತಕಗಳನ್ನು ಓದುವುದು, ಮನಸ್ಸಿನ ವಿಶ್ವಾಸವನ್ನು ಬಲಪಡಿಸಿಕೊಳ್ಳುವುದರ ಮೂಲಕ ಆತ್ಮಹತ್ಯೆಯನ್ನು ಯೋಚನೆಯಿಂದ ಹೊರಬರಬಹುದೆಂದು ಹೇಳುವುದರ ಜೊತೆಗೆ ಮನೋವಿಜ್ಞಾನಿ ಸಿಗ್ಮಂಡ ಫ್ರಾಯ್ಡ್ ರವರ ಮನೋವಿಶ್ಲೇಷಣಾತ್ಮಕ ಸಿದ್ಧಾಂತವನ್ನು ವಿವರಿಸಿ ಮನೋರಂಗದಲ್ಲಿ ನಡೆಯುವ ಧನಾತ್ಮಕ,ಋಣಾತ್ಮಕ ಪ್ರಕ್ರಿಯೆಯನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡುತ್ತಾ ಖಿನ್ನತೆಯ ಕಾರಣ ಹಾಗೂ ಪರಿಣಾಮಗಳನ್ನು ಚರ್ಚಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಶಾಲಾ ಮಕ್ಕಳಲ್ಲಿ ಸಹ ಆತ್ಮಹತ್ಯೆ ಮನಸ್ಥಿತಿ ಪ್ರಬಲಗೊಳ್ಳುತ್ತಿರುವುದು ಕಳವಳಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

"ಹಲವರು ಹಾಗೇ..... ಕೆಲವರು ಹೀಗೆ" ಎಂಬ ಸ್ಟರಚಿತ ಕವನ ವಾಚಿಸಿದರು. ಭಾವೀ ಶಿಕ್ಷಕರ ಮೇಲೆ ಇರುವ ಹೊಣೆಗಾರಿಕೆಗಳನ್ನು ವಿವರಿಸಿದರು. ಉಚಿತ ಆಪ್ತ ಸಮಾಲೋಚನೆ ಮಾಡುವ ಟೆಲಿ ಮನಸ್ಸು 0800585858 ಬಗ್ಗೆ ತಿಳಿಸಿದರು. ಶಿಕ್ಷಕರಿಗೆ ಈ ಕುರಿತು ಜ್ಞಾನ ಅತ್ಯವಶ್ಯವೆಂದು ಹೇಳಿದರು.

ಡಾ.ಎಸ್.ವಿ.ವಾಲಿಶೆಟ್ಟಿ ಮಾತನಾಡಿ, ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಹಿನ್ನೆಲೆ, ಆತ್ಮಹತ್ಯೆಗೆ ಪ್ರೇರೆಪಿಸುವ ಅಂಶಗಳಾದ ಜಿಗುಪ್ಸೆ, ಸೋಲು , ಸಾಲ, ಅಪಾಯಕಾರಿ ಪೈಪೋಟಿ ಹಾಗೂ ಇನ್ನಿತರ ಕ್ಷುಲ್ಲಕ ಕಾರಣಗಳಿಂದ ಜನರು ಭಗವಂತ ನೀಡಿದ ಶರೀರವನ್ನು ನಾಶಪಡಿಸಿಕೊಳ್ಳುತ್ತಿದ್ದಾರೆ. ದೇವರ ಕೊಟ್ಟ ಅಮೂಲ್ಯವಾದ ಜೀವನವನ್ನು ಈ ರೀತಿ ಇಲ್ಲವಾಗಿಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಬುದ್ಧಿಜೀವಿಯಾದ ಮಾನವ ಭಾವನಾತ್ಮಕವಾಗಿಯೂ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಆತ್ಮಸ್ಥೈರ್ಯದಿಂದ ಪರಿಹರಿಸಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳಬೇಕು. ಶಿಕ್ಷಕರ ಮೇಲೆ ಈ ಜವಾಬ್ದಾರಿ ಗುರುತರವಾಗಿದೆ. ಭಾವೀ ಶಿಕ್ಷಕರು ಆತ್ಮಹತ್ಯೆ ತಡೆಗಟ್ಟುವ ಕುರಿತು ಮನೋವೈಜ್ಞಾನಿಕವಾಗಿ ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕೆಂದರು.

ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿ ಪ್ರೊ. ಸುನಿಲ ಪಾಣಿ , ಡಾ. ಗೀತಾ ದಯಣ್ಣವರ, ಪ್ರೊ.ಮಲ್ಲಿಕಾರ್ಜುನ ಜಮಖಂಡಿ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಮುಸ್ಕಾನ ಲಾಡನ್ನ ವರ ತಂಡ ಪ್ರಾರ್ಥಿಸಿದರು. ಪ್ರೊ.ಮಂಜುನಾಥ ಕಲಾಲ ಸ್ವಾಗತಿಸಿದರು, ಪ್ರೊ.ಸೋನಲ ಚಿನಿವಾಲ ನಿರೂಪಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ