ಬೆಳಗಾವಿ: ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಆಯೋಜಿಸಿದ್ದ ರಾಷ್ಟ್ರಮಟ್ಟದ ಕಾನೂನು ಉತ್ಸವ ಲೆಕ್ಸ್ ಅಲ್ಟಿಮಾದಲ್ಲಿ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿನಿ ನಿಹಾರಿಕಾ ಮಿಶ್ರಾ ಅವರು ಅತ್ಯುತ್ತಮ ಮಹಿಳಾ ಮೂಟರ್ ಪ್ರಶಸ್ತಿಯನ್ನು ಗೆದ್ದರು. ಕಾರ್ಯಕ್ರಮದಲ್ಲಿ 28 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಸ್. ಮುತಾಲಿಕ್, ಪ್ರಾಚಾರ್ಯ ಡಾ. ಎ.ಎಚ್. ಹವಾಲ್ದಾರ್, ಮೂಟ್ ಕೋರ್ಟ್ ಸಂಯೋಜಕಿ ಪ್ರೊ. ಅಶ್ವಿನಿ ಪರಬ್, ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನಿಹಾರಿಕಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
