ಬೆಳಗಾವಿ: ಕೆಎಲ್ಇ ಜಿ.ಕೆ. ಕಾನೂನು ಕಾಲೇಜು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಾಲ್ಕನೇ ರಾಷ್ಟ್ರೀಯ ಮಟ್ಟದ ಸಂಧಾನ ಸ್ಪರ್ಧೆಯನ್ನು ಆಯೋಜಿಸಿತ್ತು, ದೇಶದ ವಿವಿಧ ಭಾಗಗಳಿಂದ 22 ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಬೆಳಗಾವಿಯ ಕೆಎಲ್ಎಸ್ ರಾಜ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ತನ್ವಿ ಕುಲಕರ್ಣಿ ಮತ್ತು ಆಕಾಶ್ ದೇಶಪಾಂಡೆ ರೂ. 15,000 ನಗದು ಮತ್ತು ಟ್ರೋಫಿಯೊಂದಿಗೆ ಸ್ಪರ್ಧೆಯನ್ನು ಗೆದ್ದಿದ್ದಾರೆ. ತನ್ವಿ ಕುಲಕರ್ಣಿ ಅವರನ್ನು ಅತ್ಯುತ್ತಮ ಸಂಧಾನಕಾರರಾಗಿ ಆಯ್ಕೆ ಮಾಡಲಾಯಿತು. ಅಂತಿಮ ಸುತ್ತು ಕೆಎಸ್ಎಲ್ ಯು ಕಾನೂನು ಶಾಲೆ ಮತ್ತು ಆರ್ ಎಲ್ ಕಾನೂನು ಕಾಲೇಜು ನಡುವೆ ನಡೆಯಿತು. ಡಾ. ಸಮೀನಾ ನಹಿದ್ ಬೇಗ್ ತಂಡಕ್ಕೆ ತರಬೇತಿ ನೀಡಿದ್ದರು
ಕರ್ನಾಟಕ ಕಾನೂನು ಸಂಸ್ಥೆ ಅಧ್ಯಕ್ಷ ಪಿ.ಎಸ್. ಸಾವಕರ್, ಆಡಳಿತ ಮಂಡಳಿಯ ಅಧ್ಯಕ್ಷ ಎ.ಕೆ. ಟಗಾರೆ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಎಸ್. ಮುತಾಲಿಕ್, ಪ್ರಾಂಶುಪಾಲ ಡಾ. ಎ. ಎಚ್. ಹವಾಲ್ದಾರ್, ಡಾ. ಸಮೀನಾ ನಹಿದ್ ಬೇಗ್, ಸಿಬ್ಬಂದಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಬಹುಮಾನ ವಿಜೇತರನ್ನು ಅಭಿನಂದಿಸಿದ್ದಾರೆ.