Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೃಷ್ಣಮೂರ್ತಿ ಪುರಾಣಿಕರ ಜನ್ಮದಿನದ ಸಂಸ್ಮರಣೆ: ಕಾದಂಬರಿಗಳ ಮೂಲಕ ಪುರಾಣಿಕರು ಸಾಮಾಜಿಕ ಮೌಲ್ಯ ಪ್ರತಿಪಾದಿಸಿದರು- ಡಾ. ಯಾಕೊಳ್ಳಿ

ಬೆಳಗಾವಿ: ತಮ್ಮ ಕಾದಂಬರಿಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದವರು ಶ್ರೇಷ್ಠ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು. ಅವರೊಬ್ಬ ಆದರ್ಶ ಬರೆಹಗಾರರಾಗಿದ್ದಂತೆ ಆದರ್ಶ ಶಿಕ್ಷಕರೂ ಆಗಿದ್ದರು" ಎಂದು ಹಿರಿಯ ಸಾಹಿತಿ , ವಿಮರ್ಶಕ ಡಾ. ವೈ. ಎಂ. ಯಾಕೊಳ್ಳಿ ಹೇಳಿದರು.


ಮಹಾಂತೇಶನಗರದ ರಹವಾಸಿಗಳ ಸಂಘದ ಬಿ. ಎಡ್. ಕಾಲೇಜಿನಲ್ಲಿ ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ ಮತ್ತು ನಿವೇದಾರ್ಪಣ ಅಕಾಡೆಮಿಯವರ ಸಹಯೋಗದೊಂದಿಗೆ ಬುಧವಾರ ನಡೆದ ಪುರಾಣಿಕರ 114 ನೇ ಜನ್ಮ ದಿನದ ಸಂಸ್ಮರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು , ಪುರಾಣಿಕರು 80 ಕಾದಂಬರಿ ಸಹಿತ ಒಟ್ಟು 115 ಕೃತಿಗಳನ್ನು ರಚಿಸಿದರು. ಕನ್ನಡದಲ್ಲಿ ಕಾದಂಬರಿ ಆಧಾರಿತ ಮೊದಲ ಸಿನೆಮಾ ಆದದ್ದು ಪುರಾಣಿಕರ ರಚನೆಯೇ ಮತ್ತು ಸುಮಾರು ಹದಿಮೂರು ಕಾದಂಬರಿಗಳು ಚಲನಚಿತ್ರವಾದದ್ದೊಂದು ದಾಖಲೆ. ಮುಖ್ಯವಾಗಿ ಅವರ ಕಾದಂಬರಿಗಳು ಸಮಾಜ ಸುಧಾರಣೆಗೆ ಪ್ರೇರಣೆ ನೀಡುವಂತಿದ್ದವು. ಅವನ್ನು ಈಗಿನ ಪೀಳಿಗೆಯವರು ಓದುವಂತಾಗಬೇಕು" ಎಂದರು.

ಪುರಾಣಿಕ ಟ್ರಸ್ಟ್ ಕಾರ್ಯದರ್ಶಿ ಆನಂದ ಪುರಾಣಿಕ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಎಲ್. ಎಸ್. ಶಾಸ್ತ್ರಿ ಪ್ರಾಸ್ರಾವಿಕ ನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಎಡ್ ಕಾಲೇಜು ಪ್ರಾಚಾರ್ಯರೂ, ಬರೆಹಗಾರರೂ ಆದ ಡಾ. ನಿರ್ಮಲಾ ಬಟ್ಟಲ ಅವರು ಪುರಾಣಿಕರ ಕಾದಂಬರಿಗಳು ಸಮಾಜದೆದುರು ಉನ್ನತ ಆದರ್ಶವನ್ನು ಇಡುವುದರೊಂದಿಗೆ ಕನ್ನಡದಲ್ಲಿ ಅಪಾರ ಸಂಖ್ಯೆಯ ಓದುಗರನ್ನು ಸೃಷ್ಟಿಸಿದ ಶ್ರೇಯಸ್ಸೂ ಅವರಿಗೆ ಸಲ್ಲುತ್ತದೆಂದರು.

ಡಾ. ಯಾಕೊಳ್ಳಿ ಮತ್ತು ಡಾ.ನಿರ್ಮಲಾ ಬಟ್ಟಲ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಚಂದ್ರಶೇಖರ ನವಲಗುಂದ ವಂದಿಸಿದರು. ಪ್ರೊ. ಮಂಜುನಾಥ ಕಲಾಲ ನಿರೂಪಿಸಿದರು. ಗಾಯಕ ಡಾ. ಶ್ರೀರಂಗ ಜೋಶಿ ಅವರು ಪುರಾಣಿಕರ ಕವನವನ್ನು ಹಾಡಿದರು.

ವಿದ್ಯಾರ್ಥಿಗಳಲ್ಲದೆ ಸಾಹಿತಿಗಳಾದ ಡಾ. ರಾಮಕೃಷ್ಣ ಮರಾಠೆ, ಡಾ. ಹೇಮಾ ಸೊನೊಳ್ಳಿ, ಜ್ಯೋತಿ ಬದಾಮಿ, ಬಸವರಾಜ ಗಾರ್ಗಿ, ರಮೇಶ ಜಂಗಲ್, ರಾಮನಾಥ ಬನಶಂಕರಿ ಮೊದಲಾದವರು ಉಪಸ್ಥಿತರಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಕಲಗಿ ಪಟ್ಟಣದಲ್ಲಿ ವಿಜಯ ದಶಮಿ ನಿಮಿತ್ತ ಶ್ರೀ ಮಹಾಲಕ್ಷ್ಮೀ ದೇವಿ ಅಗ್ನಿ ಹಾಯುವ ಕಾರ್ಯಕ್ರಮ.ಮಾರ್ಕಂಡೇಯ ನದಿಯಲ್ಲಿ  ಮರ್ಡರ್..?ಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerನೀಲಿ ಡ್ರಮ್ ಕೊಲೆ ಪ್ರಕರಣ : ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ ಶಿಕ್ಷೆRCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರು