Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ನಾಳೆ ನನ್ನ ಹೆಂಡತಿ ಮದುವೆ ಇದೆ, ನಿಲ್ಲಿಸಿ..!

 ಬೆಳಗಾವಿ: ನಾಳೆ ನನ್ನ ಹೆಂಡತಿ ಮದುವೆ ಇದೆ, ದಯವಿಟ್ಟು ಆ ಮದುವೆ ನಿಲ್ಲಿಸಿ ಎಂದು ಪತಿ ಮಾಧ್ಯಮಗಳ ಮುಂದೆ ತನ್ನ ಅಳಲು ತೊಡಿಕೊಂಡಿರುವ ಘಟನೆ ನಡೆದಿದೆ. 

ಕಳೆದ 2016 ರಿಂದ ಪರಿಚಯವಾಗಿದ್ದ ಮಹಿಳೆಯನ್ನು 2022 ರಲ್ಲಿ ಮದುವೆಯಾಗಿದ್ದೇನೆ. ಆದರೆ ಇದೀಗ ಆಕೆಯ ಮನೆಯವರು ಕಿರುಕುಳ ನೀಡಿ, ಮತ್ತೊಬ್ಬರೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವೆಂಕಟೇಶ್ವರ ರಾಠೋಡ್ ಎನ್ನುವವರು ಆರೋಪಿಸಿದ್ದಾರೆ.

ಹಿರೇ ಬಾಗೇವಾಡಿಯ ರುದ್ರಪ್ಪ ಹಂಚಿನಮನಿ ಹಾಗೂ ಅವರ ಪುತ್ರ ಪ್ರದೀಪ್ ಹಂಚಿನಮನಿ ತಮ್ಮ ಪತ್ನಿ ಮಂಜುಳಾ ಹಂಚಿನಮನಿಯನ್ನು ಮನೆಯಲ್ಲೇ ಕೂಡಿಹಾಕಿ ಇಟ್ಟಿದ್ದಾರೆ. 

ಜೊತೆಗೆ ನನ್ನ ವಿರುದ್ಧ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿ ಷಡ್ಯಂತ್ರ ರೂಪಿಸಿ ಜೈಲಿಗೂ ಕಳುಹಿಸಿದ್ದರು. “ನಾನು ಹಾಗೂ ನನ್ನ ಹೆಂಡತಿ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ. ಆದರೆ ಈಗ ಆಕೆಯನ್ನು ಮತ್ತೊಬ್ಬರಿಗೆ ಮದುವೆ ಮಾಡಲು ಯತ್ನಿಸಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು.

ಇತ್ತೀಚೆಗೆ ಹಿರೇ ಬಾಗೇವಾಡಿಯಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ, ಬಂಗಾರ ಹಾಗೂ ಹಣ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿದ ವೆಂಕಟೇಶ್ವರ ರಾಠೋಡ್, ಈ ಕುರಿತು ಹಿರೇ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೇಳಿದರು.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST