ಬೆಳಗಾವಿ : ಬೆಳಗಾವಿ (ಶೆಗಣಮಟ್ಟಿ) - ಹುನಗುಂದ - ರಾಯಚೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುತ್ತಿರುವ ಚತುಷ್ಪಥ ರಸ್ತೆಯ ಕಾಮಗಾರಿಯ ಪ್ರಗತಿಯ ಕುರಿತು ತಿಳಿಯಲು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಿಸಿದರು.
ಬೆಳಗಾವಿಯ ಶೇಗಣಮಟ್ಟಿ ಗ್ರಾಮದ ಹತ್ತಿರದಿಂದ ಪ್ಯಾಕೇಜ್ -1 ರಡಿ 42 ಕಿ.ಮಿ ರಸ್ತೆ ಬ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿ ಸ್ಥಳ ವೀಕ್ಷಣೆಯನ್ನು ಸಂಸದ ಜಗದೀಶ ಶೆಟ್ಟರ ಕೈಕೊಂಡರು.
ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪಕ್ಷದ ಮುಖಂಡರಾದ ಮಾರುತಿ ಜಿರಲಿ, ಆರ್.ಎಸ್. ಮುತಾಲಿಕ, ರಮೇಶ ದೇಶಪಾಂಡೆ, ಮುರಗೇಂದ್ರಗೌಡ ಪಾಟೀಲ ಹಾಗೂ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿಯಂತರ ಕಿಶೋರ ಮತ್ತು ಕಿರಿಯ ಅಧಿಕಾರಿಗಳು ಪ್ರಸ್ತಾಪಿತ ಯೋಜನೆಯ ವಿವರಗಳನ್ನು ಸಂಸದ ಜಗದೀಶ ಶೆಟ್ಟರ ಅವರೊಂದಿಗೆ ಹಂಚಿಕೊಂಡರು.
