Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮೋದಿ ಕಾರ್ಯಕ್ರಮ : ಸಾರ್ವಜನಿಕರಿಗೆ ಮಹತ್ವದ ಸೂಚನೆ

 

ಬೆಳಗಾವಿ :
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಬದಲಾವಣೆ ಮಾಡಿ ಜಿಲ್ಲಾ ಆಡಳಿತ ಆದೇಶ ಹೊರಡಿಸಿದೆ
ದಿನಾಂಕ . 27/02/2023 ರಂದು ಪ್ರಧಾನ ಮಂತ್ರಿಗಳ ಕಾರ್ಯಕ್ರಮ ನಿಟ್ಟಿನಲ್ಲಿ ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ನರೇಂದ್ರ ಮೋದಿಯವರು 27/02/2023 ರಂದು ಬೆಳಗಾವಿ ನಗರಕ್ಕೆ ಆಗಮಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ . ಅವರ ಪ್ರವಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿನಾಂಕ : 27/02/2023 ರಂದು ಬೆಳಗ್ಗೆ 11.00 ಗಂಟೆಯಿಂದ ಮುಕಾಯದವರೆಗೆ ಈ ಕೆಳಗಿನಂತೆ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಕಾರ್ಯಕ್ರಮ ಬಳಸಿಕೊಳ್ಳುವುದು . 1 ) ನಿಪ್ಪಾಣಿ , ಕೊಲ್ಲಾಪೂರ , ಅಥಣಿ , ಚಿಕ್ಕೋಡಿ , ಸಂಕೇಶ್ವರ , ಯಮಕನಮರ್ಡಿ , ಕಾಕತಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸಿ ಖಾನಾಪೂರ / ಗೋವಾ ಕಡೆಗೆ ಸಂಚರಿಸುವ ವಾಹನಗಳು ಹಿಂಡಾಲ್ಲೊ ಅಂಡರ ಬ್ರಿಜ್ , ಬಾಕೈಟ್ ರಸ್ತೆ , ಫಾರೆಸ್ಟ ನಾಕಾ , ಹಿಂಡಲಗಾ ಗಣೇಶ ಮಂದಿರ , ಗಾಂಧಿ ಸರ್ಕಲ್‌ , ಶೌರ್ಯ ಸರ್ಕಲ್ ( ಮಿಸ್ಟ್ರಿ ಆಸ್ಪತ್ರೆ ) , ತಿಮ್ಮಯ್ಯ ರಸ್ತೆ , ಕೇಂದ್ರಿಯ ವಿದ್ಯಾಲಯ ನಂ -2 , ಶರ್ಕತ್ ಪಾರ್ಕ , ಇಂಡಿಪೆಂಡೆನ್ಸ್ ರಸ್ತೆ , ಗೌ ೪ ಗಲ್ಲ , ಫರ್ನಾಂಡಿಸ್ ರಸ್ತೆ , ನೆಲ್ಸನ್ ರಸ್ತೆ , ಮಿ ಮಹಾದೇವ ಮಂದಿರ , ಕಾಂಗ್ರೇಸ್ ರಸ್ತೆ ಸೇರಿ ಮುಂದೆ ಸಂಚರಿಸುವುದು .

2 ) ಶಹಾಪೂರ , ಅನಗೋಳ , ವಡಗಾಂವ , ಯಳ್ಳೂರ ಬಾಚಿ ಕಡೆಗಳಿಂದ , ಕಾಕತಿ ನಿಪ್ಪಾಣಿ ಕಡೆಗೆ ಸಂಚರಿಸುವ ವಾಹನಗಳು ಅನಗೋಳ 4 ನೇ ರೈಲ್ವೆ ಗೇಟ , ಬೆಮ್ಕೋ ಸರ್ಕಲ್ , 3 ನೇ ರೈಲ್ವೆ ಗೇಟ ಕಾಂಗ್ರೇಸ್ ರಸ್ತೆ , ಮಿಲ್ಟ್ರಿ ಮಹಾದೇವ ಮಂದಿರ ಹತ್ತಿರ ಎಡ ತಿರುವ ಪಡೆದುಕೊಂಡು , ತಿಮ್ಮಯ್ಯ ರಸ್ತೆ , ಶೌರ್ಯ ಚೌಕ , ಗಾಂಧಿ ಸರ್ಕಲ್ , ಬಾಕ್ಸೈಟ್ ರಸ್ತೆ ಮೂಲಕ ಸಂಚರಿಸುವುದು .

3 ) ಬೆಳಗಾವಿ ನಗರದಿಂದ ಕಾಕತಿ , ನಿಪ್ಪಾಣಿ , ಕೊಲ್ಲಾಪೂರ , ಅಥಣಿ ಕಡೆಗೆ ಸಂಚರಿಸುವ ವಾಹನಗಳು ಕೃಷ್ಣದೇವರಾಯ ವೃತ್ತ , ಹೊಟೇಲ್‌ ರಾಮದೇವ , ಕೆಎಲ್‌ಇ ಆಸ್ಪತ್ರೆ ರಸ್ತೆ , ಕೆಎಲ್‌ಇ ಛತ್ರಿ ಮುಖಾಂತರ
ಹೆದ್ದಾರಿ -4 ಕೆ ಸೇರಿ ಸಂಚರಿಸುವುದು .

4 ) ಹುಬ್ಬಳ್ಳಿ , ಧಾರವಾಡ , ಬೈಲಹೊಂಗಲ , ಸವದತ್ತಿ , ಹಿರೇಬಾಗೇವಾಡಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸುವ ವಾಹನಗಳು ಅಲಾರವಾಡ ಬ್ರಿಜ್ , ಮುಚ್ಚಂಡಿ ಗ್ಯಾರೇಜ್ ಹಾಗೂ ಕ್ಯಾನ್ಸರ್ ಆಸ್ಪತ್ರೆ ಎದುರಿನ ರಸ್ತೆ ಮುಖಾಂತರ ಸಂಚರಿಸುವುದನ್ನು ನಿರ್ಬಂಧಿಸಿದ್ದು , ಇವು ರಾಷ್ಟ್ರೀಯ ಹೆದ್ದಾರಿ 4 ರ ಮುಖಾಂತರ ನಿಸರ್ಗ ಧಾಬಾ ಹತ್ತಿರ ಎಡತಿರುವು ಪಡೆದುಕೊಂಡು ಕೆಪಿಐಎಲ್ ರಸ್ತೆ ಮೂಲಕ ನಗರ ಪ್ರವೇಶಿಸುವುದು . ಗೋವಾ ಹಾಗೂ ಖಾನಾಪೂರ ಕಡೆಗೆ ಸಂಚರಿಸುವವರು ರಾಷ್ಟ್ರೀಯ ಹೆದ್ದಾರಿ -4 ರ ಮೂಲಕ ಮುಂದೆ ಸಾಗಿ ಕೆಎಲ್‌ಇ ಛತ್ರಿ ಹತ್ತಿರ ಸರ್ವಿಸ್ ರಸ್ತೆ ಸೇರಿ , ಶಿವಾಲಯ ಕ್ರಾಸ್ , ಬಾಕೈಟ್ ರಸ್ತೆ ಸೇರಿ ಮುಂದೆ ಸಂಚರಿಸುವುದು .

5 ) ಬೆಳಗಾವಿ ನಗರದಿಂದ ಗೋಕಾಕ , ಹುಬ್ಬಳ್ಳಿ , ಧಾರವಾಡ , ಬೈಲಹೊಂಗಲ , ಸವದತ್ತಿ , ಹಿರೇಬಾಗೇವಾಡಿ ಕಡೆಗೆ ಸಂಚರಿಸುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತ , ಕೃಷ್ಣದೇವರಾಯ ವೃತ್ತ , ಹೊಟೇಲ್ ರಾಮದೇವ , ಕೆಎಲ್‌ಇ ಆಸ್ಪತ್ರೆ ರಸ್ತೆ , ಕೆಎಲ್‌ಇ ಛತ್ರಿ , ಹಿಂಡಾಲ್ಲೊ ಅಂದರ ಬ್ರಿಜ್ ಮುಖಾಂತರ ರಾಷ್ಟ್ರೀಯ ಹೆದ್ದಾರಿ -4 ಕ್ಕೆ ಸೇರಿ ಮುಂದೆ ಸಂಚರಿಸುವುದು .

6 ) ವೆಂಗುರ್ಲಾ , ಸಾವಂತವಾಡಿ , ಹಿಂಡಲಗಾ , ಸುಳಗಾ ಕಡೆಗಳಿಂದ ರಾಷ್ಟ್ರೀಯ ಹೆದ್ದಾರಿ 4 ರ ಕಡೆಗೆ ಸಂಚರಿಸುವ ವಾಹನಗಳು ಫಾರೆಸ್ಟ್ ನಾಕಾ ಹತ್ತಿರ ನಗರ ಕಡೆಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದು , ಬಾಕ್ಸೈಟ್ ರಸ್ತೆ , ಹಿಂಡಾಲ್ಕೋ ಅಂಡರ್ ಬ್ರಿಚ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಸೇರಿ ಮುಂದೆ ಸಂಚರಿಸುವುದು .

7 ) ವಿಜಯಪುರ , ಬಾಗಲಕೋಟ , ಯರಗಟ್ಟಿ , ನೇಸರಗಿ ಕಡೆಗಳಿಂದ ಬೆಳಗಾವಿ ನಗರ ಕಡೆಗೆ ಬರುವ ವಾಹನಗಳನ್ನು ಮಾರಿಹಾಳ ಪೊಲೀಸ್ ಠಾಣೆಯ ಹತ್ತಿರ ತಡೆದು ಬಲತಿರುವು ಪಡೆದುಕೊಂಡು ಸುಳೇಭಾವಿ ಗ್ರಾಮದ ಮುಖಾಂತರ ಖನಗಾಂವ ಕ್ರಾಸ್ ಮೂಲಕ ಕಣಬರಗಿ ರಸ್ತೆ , ಕನಕದಾಸ ಸರ್ಕಲ್ , ರಾಷ್ಟ್ರೀಯ ಹೆದ್ದಾರಿ 4 ರ ಮುಖಾಂತರ ನಿಸರ್ಗ ಧಾಬಾ ಹತ್ತಿರ ಎಡತಿರುವು ಪಡೆದುಕೊಂಡು ಕೆಪಿಟಿಎಲ್ ರಸ್ತೆ ಮೂಲಕ ನಗರ ಪ್ರವೇಶಿಸುವುದು .

8 ) ಬೆಳಗಾವಿ ನಗರದಿಂದ ಸಾಂಬ್ರಾ , ನೇಸರಗಿ , ಯರಗಟ್ಟಿ , ಬಾಗಲಕೋಟ , ವಿಜಯಪುರ ಕಡೆಗೆ ಸಂಚರಿಸುವ ವಾಹನಗಳು ಬೆಳಗಾವಿ - ಗೋಕಾಕ ರಾಜ್ಯ ಹೆದ್ದಾರಿ ಮುಖಾಂತರ ಸಂಚರಿಸಿ ಖನಗಾಂವ ಕ್ರಾಸ್ , ಸುಳೇಭಾವಿ ಗ್ರಾಮ ಮೂಲಕ ಬಾಗಲಕೋಟ ರಸ್ತೆಗೆ ಸೇರಿ ಸಂಚರಿಸುವುದು .

9 ) Y - Junction , ಕಾಲೇಜು ರಸ್ತೆ , ಧರ್ಮವೀರ ಸಂಭಾಜಿ ವೃತ್ತ , ರಾಮಲಿಂಗಖಿಂಡ ಗಲ್ಲಿ , ಹೇಮು ಕಲಾನಿ ಚೌಕ, ಶನಿ ಮಂದಿರ, ಕಪಿಲೇಶ್ವರ ಓವರ್ ಬ್ರಿಜ್ , ಬ್ಯಾಂಕ್ ಆಫ್ ಇಂಡಿಯಾ ವೃತ್ತ , ಹೊಸ ಡಬಲ್ ರಸ್ತೆ , ಹಳೆ ಪಿಬಿ ರಸ್ತೆ , ಪ್ಯಾಟ್ಸನ್ ಶೋ ರೂಂ, ಧಾರವಾಡ ನಾಕಾ ಕಡೆಗೆ ಹೆಚ್ಚು ಜನ ದಟ್ಟಣೆಯಾಗುವುದರಿಂದ ಮೇಲೆ ತಿಳಿಸಿದ ಪರ್ಯಾಯ ಮಾರ್ಗವನ್ನು ಬಳಸುವುದು .

10 ) ದಿನಾಂಕ : 27/02/2023 ರಂದು ಮುಂಜಾನೆ 08.00 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ ಎಲ್ಲ ಭಾರಿ ವಾಹನಗಳು ಎಲ್ಲ ದಿಕ್ಕುಗಳಿಂದ ಬೆಳಗಾವಿ ನಗರ ಪ್ರವೇಶಿಸುವುದನ್ನು ಹಾಗೂ ನಗರದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ .

ಪಾರ್ಕಿಂಗ್ ವ್ಯವಸ್ಥೆ : ಧಾರವಾಡ , ಕಿತ್ತೂರ , ಬೈಲಹೊಂಗಲ , ಸವದತ್ತಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ವಾಹನಗಳು ಅಲಾರವಾಡ ಅಂಡರ್ ಬ್ರಿಜ್ ಪಕ್ಕದಲ್ಲಿರುವ ವೋಕ್ಸ್‌ವ್ಯಾಗನ್‌ ಶೋ ರೂಂ ಹತ್ತಿರ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು . ಧಾರವಾಡ , ಕಿತ್ತೂರ , ಬೈಲಹೊಂಗಲ , ಸವದತ್ತಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಸುವರ್ಣ ವಿಧಾನ ಸೌಧ ಓ.ಪಿ ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು . ಬಾಗಲಕೋಟ , ಗೋಕಾಕ , ನಿಪ್ಪಾಣಿ , ಕಾಕತಿ ಕಡೆಯಿಂದ ಬರುವ ವಾಹನಗಳು ಯುವರಾಜ ದಾಬಾ ಮತ್ತು ವಿಆರ್‌ಎಲ್ ವರ್ಕ್ ಶಾಪ್ ಹತ್ತಿರ ಪಾಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು. ಬಾಗಲಕೋಟ , ಗೋಕಾಕ , ನಿಪ್ಪಾಣಿ , ಕಾಕತಿ ಕಡೆಯಿಂದ ಬರುವ ಬಸ್‌ಗಳು ತಾರಿಹಾಳ ಕ್ರಾಸ್ ಮುಖಾಂತರ ಹೋಗಿ ಪೊಲೀಸ್‌ ಟೌನ್‌ಶಿಪ್‌ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು . ಖಾನಾಪೂರ , ಅನಗೋಳ, ಪೀರನವಾಡಿ ಕಡೆಯಿಂದ ಬರುವ ವಾಹನಗಳು ಶಹಾಪುರ ಕಲಮೇಶ್ವರ ಮಂದಿರದ ಮಾರ್ಗವಾಗಿ ಕೆರೆಯ ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು .
ಈ ಮೇಲ್ಕಂಡ ಸಂಚಾರ ಬದಲಾವಣೆಗೆ ಸಾರ್ವಜನಿಕರು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ .
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ