ಸಿಂಧನೂರು:
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ಯುವಕನೊಬ್ಬ ತನ್ನ ಮದುವೆಗೆ ಆಗಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ಪತ್ರಿಕೆ ಕಳುಹಿಸಿದ್ದ. ಆಹ್ವಾನ ಸ್ವೀಕರಿಸಿದ ಮೋದಿಯವರು, ಯುವ ದಂಪತಿಗೆ ಶುಭ ಹಾರೈಸಿ ಪತ್ರ ಬರೆದಿದ್ದಾರೆ. ಕಾನಿಹಾಳ ಗ್ರಾಮದ ರಾಜೇಶ್ ನಾಯಕ ಎಂಬುವರ ಮದುವೆ ಸವಿತಾ ಅವರೊಂದಿಗೆ ಏ.13ರಂದು ನಿಗದಿ ಯಾಗಿತ್ತು. ರಾಜೇಶ್ ತಮ್ಮ ಮದುವೆಗೆ ಮೋದಿಯನ್ನು ಆಹ್ವಾನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಮೋದಿ ಅವರು 'ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿ ದ್ದಕ್ಕಾಗಿ ಹೃತ್ತೂರ್ವಕ ಧನ್ಯವಾದಗಳು. ಗಳು. ಜೀವ ನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರ ಸುಂದರ ಭವಿಷ್ಯ ಕ್ಕಾಗಿ ಶುಭಾಶೀರ್ವಾದಗಳು' ಎಂದಿದ್ದಾರೆ.