Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮೈಸೂರು ಕಾಗದ ಕಾರ್ಖಾನೆ ಆರಂಭಕ್ಕೆ ಸಕಾರಾತ್ಮಕ ಚಿಂತನೆ : ಸಚಿವ ಎಂ.ಬಿ.ಪಾಟೀಲ್

 

 

ಬೆಳಗಾವಿ ಸುವರ್ಣಸೌಧ : ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆಯ ಪುನರಾರಂಭಕ್ಕೆ ಸರ್ಕಾರವು ಸಕಾರಾತ್ಮಕವಾಗಿ ಚಿಂತನೆ ನಡೆಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃಧ್ದಿ ಸಚಿವ ಎಂ.ಬಿ.ಪಾಟೀಲ್ ಇಂದು ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಸದಸ್ಯ ಎಸ್.ರುದ್ರೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು , ಮೈಸೂರು ಕಾಗದ ಕಾರ್ಖಾನೆಯು ತೀವ್ರ ತರಹದ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಕಾರಣ ಎಲ್ಲಾ ಉತ್ಪಾದನಾ ಘಟಕಗಳನ್ನು 21-11-2015 ರಿಂದ ಸ್ಥಗಿತಗೊಳಿಸಿದ್ದು, ಜೂನ್ 2023 ಅಂತ್ಯಕ್ಕೆ ಒಟ್ಟು ಸಂಚಿತ ನಷ್ಠ 1482 ಕೋಟಿ ರೂ ಆಗಿದೆ ಎಂದು ತಿಳಿಸಿದರು.
ಸರ್ಕಾರವು ಕಾರ್ಖಾನೆಯ ಪುನರುಜ್ಜಿವನ ಸಾಧ್ಯವಿಲ್ಲವೆಂದು ತೀರ್ಮಾನಿಸಿ ಕಾರ್ಖಾನೆಯ ಕಾರ್ಯಚಟುವಟಿಕೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕೆಂದು ತೀರ್ಮಾನ ಕೈಗೊಂಡು, ಈ ಪ್ರಕ್ರಿಯೆಗಳಿಗೆ ಮೆ॥ ಐಡೆಕ್‌ನ ಸೇವೆಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಆರ್‌ಎಫ್ ಕ್ಯೂ ಅನ್ನು ಏಪ್ರಿಲ್ 2017,ಆಗಸ್ಟ್ 2018 ಹಾಗೂ ಮಾರ್ಚ್ 2019 ರಲ್ಲಿ ಪ್ರಕಟಿಸಲಾಗಿತ್ತು. ಆರ್‌ಎಫ್ ಕ್ಯೂಗೆ ಯಾವುದೇ ಅರ್ಜಿ ಸ್ವೀಕೃತವಾಗಿರುವುದಿಲ್ಲ. ಆರ್‌ಎಫ್‌ಕ್ಯೂ ಅನ್ನು ಕಂಪನಿಯು ಮೊದಲೇ ಅಪ್‌ಲೋಡ್ ಮಾಡಲಾಗಿದ್ದು ಆರ್‌ಎಫ್‌ಕ್ಯೂಗಾಗಿ ಪ್ರಚಾರವನ್ನು ಮತ್ತು ಈಗಾಗಲೇ ವ್ಯಾಪಕ ನೀಡಲಾಗಿರುವುದರಿಂದ ಪ್ರಸ್ತಾವನೆೆಗಾಗಿ ವಿನಂತಿಯನ್ನು (ಆರ್‌ಎಫ್‌ಪಿ) ನೇರವಾಗಿ ದಿನಾಂಕ: 25.11.2020 ರಂದು ಅಪ್‌ಲೋಡ್ ಮಾಡಲಾಗಿದ್ದು, ಇ-ಟೆಂಡರ್ ತೆರೆದಾಗ ಯಾವುದೇ ಸ್ವೀಕೃತವಾಗಿರುವುದಿಲ್ಲ.
ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಂಪೆನಿಯ ಕಾರ್ಯಾಚರಣೆಗಳನ್ನು ನಡೆಸಲು ಬಯಸಿರುತ್ತಾರೆ. ಅದರಂತೆ, ನೀಲಗಿರಿ ಬೆಳೆಯಲು ಎಂಪಿಎAಗೆ ವಿನಾಯಿತಿ ಮತ್ತು ಬಾಕಿ ಉಳಿದಿರುವ 1102 ಕೋಟಿಗಳ ಹೊಣೆಗಾರಿಕೆಗಳ ಕುರಿತು ಸರ್ಕಾರವು ತೀರ್ಮಾನ ತೆಗೆದು ಕೊಳ್ಳಬೇಕಾಗಿರುತ್ತದೆ.
ದಿನಾಂಕ: 07.09.2023ರಂದು ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯದಂತೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 17-11-2023ರಂದು ಸಭೆ ನಡೆಸಲಾಗಿದ್ದು, ಅದರಂತೆ ಅರಣ್ಯ ಇಲಾಖೆಯ ತಜ್ಞರ ಸಮಿತಿಯು ನೀಲಗಿರಿ ಬೆಳೆಯಲು ವಿನಾಯಿತಿ ನೀಡುವ ಸಂಬಂಧ ಪರಿಶೀಲಿಸಿ ವರದಿ ನೀಡಬೇಕಾಗಿದೆ. ಕಂಪನಿಯ ಸಾಲಗಳು/ಬಾಕಿಗಳ ಕುರಿತು ಆರ್ಥಿಕ ಇಲಾಖೆಯೊಡನೆ ಸಮಾಲೋಚಿಸಲಾಗುತ್ತಿದೆ.
ಈ ಕಾರ್ಖಾನೆಯ ಭೂಪ್ರದೇಶವನ್ನು ಮೈಸೂರು ಕಾಗದ ಕಾರ್ಖಾನೆಯು ಸಂರಕ್ಷಿಸಿದ್ದು, ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂಪಿಎAಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಂಪನಿಯ ಕಾರ್ಯಾಚರಣೆಗಳನ್ನು ನಡೆಸಲು ಬಯಸುವುದರಿಂದ, ಅದರಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದ್ದು, ತದನಂತರ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ