Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದಾಂಪತ್ಯ ಜೀವನ ಬದುಕಿಗೆ ಅಗತ್ಯ: ಡಾ. ಎಫ್. ವಿ. ಮಾನ್ವಿ

ಬೆಳಗಾವಿ: ಜೀವನದಲ್ಲಿ ದಾಂಪತ್ಯ ಜೀವನ ಬಹುದೊಡ್ಡದು. ಧರ್ಮ, ಅರ್ಥ, ಕಾಮ, ಮೋಕ್ಷಗಳು ಚತುರ್ವಿಧ ಪುರುಷಾರ್ಥಗಳಲ್ಲಿ ಬಹು ಮುಖ್ಯವೆನಿಸಿದೆ. ಅವುಗಳನ್ನು ಈಡೇರಿಸಿಕೊಳ್ಳುವುದು ಜೀವನದ ಕರ್ತವ್ಯವೆನಿಸಿದೆ. ಹಾಗಾಗಿ ಸೂಕ್ತ ಸಂಗಾತಿ ಆಯ್ಕೆ ಬಹು ಮುಖ್ಯವಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಕೆಎಲ್ಇ ಸಂಸ್ಥೆ ಪ್ರತಿ ವರ್ಷ ಬೃಹತ್ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಇದರ ಲಾಭವನ್ನು ಸಮಾಜದ ಒಳಪಂಗಡಗಳನ್ನು ಮರೆತು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಧು-ವರ ಅನ್ವೇಷಣ ಕೇಂದ್ರದ ಅಧ್ಯಕ್ಷ ಡಾ. ಎಫ್. ವಿ .ಮಾನ್ವಿ ಹೇಳಿದರು.

ನಗರದ ಜೆ ಎನ್ ಎಂ ಸಿ ಜೀರಗೆ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವಧು-ವರ ಅನ್ವೇಷಣಾ ಕೇಂದ್ರ ಹಾಗೂ ಕೆ ಎಲ್ ಇ ಸಂಸ್ಥೆ ಸಹಯೋಗದಲ್ಲಿ ವಧು-ವರ ಪಾಲಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಬಹಳ ಸಂಗಾತಿ ಸೂಕ್ತ ಆಯ್ಕೆ ಬಹು ಮುಖ್ಯವಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಕೆಎಲ್ಇ ಸಂಸ್ಥೆ ಪ್ರತಿ ವರ್ಷ ಬೃಹತ್ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಇದರ ಲಾಭವನ್ನು ಸಮಾಜದ ಒಳಪಂಗಡಗಳನ್ನು ಮರೆತು ಸದ್ಬಳಕೆ ಮಾಡಿಕೊಳ್ಳಬೇಕು.
ಇಂದು ಉದ್ಯೋಗಕ್ಕಾಗಿ ಬೇರೆಬೇರೆ ದೂರದ ಊರುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಮಕ್ಕಳಿಗೆ ಕಂಕಣ ಭಾಗ್ಯ ದೊರೆಯುವುದು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಘಟಕ ಮಹಾಸಭೆಯು ಒಂದೇ ಸೂರಿ ನಡಿ ವಧು-ವರ ಪಾಲಕರ ಸಮಾವೇಶಗಳನ್ನು ಆಯೋಜಿಸಿ ಅನುಕೂಲ ಕಲ್ಪಿಸಿದೆ. ಇದರಿಂದ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತಷ್ಟು ಸುಲಭವಾಗಿದೆ. ಈ ನಿಟ್ಟಿನಲ್ಲಿ ಡಾ. ಪ್ರಭಾಕರ ಕೋರೆ ಅವರ ಕೊಡುಗೆ ಬಹುದೊಡ್ಡದು ಎಂದು ಸ್ಮರಿಸಿದರು.

ಹಿರಿಯ ನ್ಯಾಯವಾದಿ ಎಂ.ಬಿ. ಜಿರಲಿ ಮಾತನಾಡಿ, ಕುಟುಂಬ ವ್ಯವಸ್ಥೆ ಅತಂತ್ರವಾಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ಗಟ್ಟಿಗೊಳಿಸುವ ಕೆಲಸವನ್ನು ಮಹಾಸಭೆ ಹಾಗೂ ಕೆ ಎಲ್ ಎ ನಿರಂತರವಾಗಿ ಮಾಡುತ್ತಾ ಬಂದಿದೆ. ಡಾ. ಪ್ರಭಾಕರ ಕೋರೆ ಅವರು ಕಾರ್ಯಾಧ್ಯಕ್ಷರಾದಾಗಿನಿಂದಲೂ ವಧುವರ ಸಮ್ಮೇಳನಗಳನ್ನು ಪ್ರತಿ ವರ್ಷ ಹಮ್ಮಿಕೊಂಡು ಸಮಾಜಕ್ಕೆ ಮಹದೂಪಕಾರ ಮಾಡಿದ್ದಾರೆ. ವಧು ವರರನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಲು ಇದೊಂದು ಪ್ರಶಸ್ತವಾದ ವೇದಿಕೆ, ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ವಧು-ವರರ ಒಂದು ಭವ್ಯವೇದಿಕೆಯನ್ನು ಮಹಾಸಭೆ ಕಲ್ಪಿಸಿ ಕೊಡುವುದರ ಮೂಲಕ ಸಂಖ್ಯ ಕುಟುಂಬಗಳ ಬದುಕಿಗೆ ಆಶ್ರಯವಾಗಿದೆ. ಇದಕ್ಕೆ ಸಹಾಯ ಸಹಕಾರ ನೀಡಿದ ಕೆ ಎಲ್ ಇ ಕೊಡುಗೆ ಅನನ್ಯ ಎಂದು ಹೇಳಿದರು.
ಅಧ್ಯಕ್ಷೀಯ ನುಡಿಗಳನಾಡಿದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ರತ್ನಪ್ರಭಾ ಬೆಲ್ಲದ ಅವರು ವಧು ವರ ಅನ್ವೇಷಣ ಕೇಂದ್ರವು ಯಾವುದೇ ವಾಣಿಜ್ಯಕರವಾದ ಲಾಭವನ್ನು ಪಡೆದುಕೊಳ್ಳದೆ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದೆ. ಮನಸ್ಸಿನಲ್ಲಿ ಯಾವ ಗೊಂದಲಗಳನ್ನು ಇಟ್ಟುಕೊಳ್ಳದೆ ವಧು-ವರ ಪಾಲಕರು ಪರಿಹಾರವನ್ನು ಇಲ್ಲಿ ಕಂಡುಕೊಳ್ಳಬಹುದು. ಮಹಾಸಭೆ ಸದಾ ನಿಮ್ಮ ಜೊತೆಗೆ ಬೆಂಬಲವಾಗಿ ನಿಲ್ಲುತ್ತದೆ. ಸುಖಿ ಕುಟುಂಬಕ್ಕೆ ವೇದಿಕೆ ಕಲ್ಪಿಸುತ್ತದೆ ಎಂದು ಹೇಳಿದರು.
ವಧು-ವರ ಅನ್ವೇಷಣಾ ಕೇಂದ್ರದ ಸದಸ್ಯರಾದ ಪ್ರಕಾಶ್ ಬಾಳೆಕುಂದ್ರಿ, ಬಾಲಚಂದ್ರ ಭಾಗಿ, ಸೋಮಶೇಖರ ಚೊನ್ನದ ಉಪಸ್ಥಿತರಿದ್ದರು.
ಆಶಾ ಯಮಕನಮರಡಿ ಪ್ರಾರ್ಥಿಸಿದರು. ಮಹೇಶ ಗುರುನಗೌಡರ ವಂದಿಸಿದರು. ಆರ್. ಕೆ.ನೇರ್ಲಿ ನಿರೂಪಿಸಿದರು. ಸರೋಜಿನಿ ನಿಶಾನ್ದಾರ, ಜ್ಯೋತಿ ಬಾದಾಮಿ, ಆರ್.ಪಿ.ಪಾಟೀಲ, ಎಂ ವೈ ಮೆಣಸಿನಕಾಯಿ ಹಾಗೂ 200 ಕ್ಕೂ ಹೆಚ್ಚು ವಧು -ವರರು ಪಾಲ್ಗೊಂಡಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ