Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಂಪುಟಕ್ಕೆ ಮೇಜರ್ ಸರ್ಜರಿ : ಕಳಪೆ ಸಚಿವರಿಗೆ ಗುಡ್ ಬೈ ?

ಬೆಂಗಳೂರು ಸಚಿವ ಸಂಪುಟ ಪುನಾರಚನೆ ನಡೆಯುವ ವೇಳೆಯೇ ಸ್ಪೀಕ‌ರ್ ಸ್ಥಾನವೂ ಸಹ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಸಚಿವ ಸಂಪುಟ ಪುನಾರಚನೆ ಯಾವಾಗ ನಡೆದರೂ ಆಗ ಹೊಸ ಸ್ಪೀಕರ್ ಆಯ್ಕೆಯೂ ಆಗುವ ಸಾಧ್ಯತೆಯಿದೆ.

ಹಾಲಿ ಸ್ಪೀಕ‌ರ್ ಯು.ಟಿ. ಖಾದರ್ ಸಂಪುಟ ಪುನಾ ರಚನೆ ವೇಳೆ ಸಚಿವ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.
ಹೊಸ ಸ್ಪೀಕ‌ರ್ ಆಗಿ ಹಾಲಿ ಸಚಿವರಾಗಿರುವ ದಿನೇಶ ಗುಂಡೂರಾವ್ ಅವರು ಹುದ್ದೆ ಅಲಂಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಸಂಪುಟ ಪುನಾರಚನೆ ನಡೆದರೇ ಬ್ರಾಹ್ಮಣ ಸಮುದಾಯದ ಪ್ರಾತಿನಿಧ್ಯ ಅಡಿಯಲ್ಲಿ ಆರ್.ವಿ. ದೇಶಪಾಂಡೆ ಸಂಪುಟಕ್ಕೆ ಸೇರ್ಪಡೆಯಾಗಬಹುದು. ಖಾದರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ನಾಯಕತ್ವಕ್ಕೆ ಇದೆ. ಹೀಗಾಗಿ, ದೇಶಪಾಂಡೆ, ಖಾದ‌ರ್ ಸಂಪುಟಕ್ಕೆ ಬಂದರೆ ಆಗ ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಅವರನ್ನು ಸ್ಪೀಕ‌ರ್ ಹುದ್ದೆಗೆ ಪರಿಗಣಿಸಬಹುದು ಎನ್ನುತ್ತವೆ ಮೂಲಗಳು. ಹೀಗೆ ಆರ್.ವಿ. ದೇಶಪಾಂಡೆ ಸಂಪುಟಕ್ಕೆ ಬಂದರೆ ಆಗ ಉತ್ತರ ಕನ್ನಡ ಜಿಲ್ಲಾ ಪ್ರಾತಿನಿಧ್ಯವೂ ಈಡೇರಿಕೆಯಾಗುವುದರಿಂದ ಹಾಲಿ ಸಚಿವರಾಗಿರುವ ಅದೇ ಜಿಲ್ಲೆಯ ಮಂಕಾಳು ವೈದ್ಯರಿಗೆ ಕೊಕ್‌ ದೊರೆಯುವ ಸಂಭವ ಹೆಚ್ಚು ಎನ್ನುತ್ತವೆ ಮೂಲಗಳು. ಉಪಸಮರ ನಡೆದ ಮೂರೂ ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಜಯಭೇರಿ ಬಾರಿಸಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಬೇಕೆಂಬ ಕೂಗು ಗಟ್ಟಿಯಾಗುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಸೇರಿದಂತೆ ಪಕ್ಷದ ನಾಯಕರು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.
ಸಚಿವ ಸಂಪುಟ ವಿಸ್ತರಿಸುವ ಮನಸ್ಸಿದ್ದರೂ ಮುಡಾ ನಿವೇಶನ ಹಂಚಿಕೆ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ವಕ್ಫ್ ಆಸ್ತಿ ವಿವಾದದಂತಹ ಹಲವು ಕಾರಣಗಳಿಂದ ಆ ಸಾಹಸಕ್ಕೆ ಸದ್ಯ ಕೈಹಾಕುವುದೇ ಬೇಡ ಎಂಬ ನಿಲುವಿಗೆ ಸಿಎಂ-ಡಿಸಿಎಂ ಬಂದಿದ್ದರು. ಆದರೆ ಉಪಚುನಾವಣೆ ಫ‌ಲಿತಾಂಶವು ಸರಕಾರದ ಆತ್ಮವಿಶ್ವಾಸ ಹೆಚ್ಚಿಸಿದೆ. ಜತೆಗೆ ಸಚಿವ ಸಂಪುಟ ವಿಸ್ತರಣೆ ವಿಷಯಕ್ಕೆ ರೆಕ್ಕೆಪುಕ್ಕವೂ ಬಂದಿದೆ.ಡಿಸೆಂಬರ್‌ ಮಧ್ಯಭಾಗದಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ.
ಹೊಸ ವರ್ಷಕ್ಕೆ ಅಂದರೆ ಜನವರಿಯಲ್ಲಿ ಮತ್ತೆ ಜಂಟಿ ಅಧಿವೇಶನ ಆರಂಭವಾಗಲಿದೆ. ನಂತರ ಬಜೆಟ್‌ ಸಿದ್ಧತೆಗಳು ಆರಂಭವಾಗುತ್ತವೆ. ಅದು ಮುಗಿಯುತ್ತಿದ್ದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೈಹಾಕುವ ಆಲೋಚನೆ ಇದೆ. ಹಾಗಾಗಿ ಈಗ ತಪ್ಪಿದರೆ ಇನ್ನು 4 ತಿಂಗಳು ಇದು ಸಾಧ್ಯವಾಗುವುದಿಲ್ಲ. ಆದ್ದರಿಂದ ಚಳಿಗಾಲದ ಅಧಿವೇಶನಕ್ಕೆ ಮುನ್ನ ಅಥವಾ ಕೊನೆಯ ಪಕ್ಷ ಹೊಸ ವರ್ಷದ ಆರಂಭದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಕೈಹಾಕುವ ಚಿಂತನೆ ಇದ್ದು, ಈ ಸಂಬಂಧ ಹೈಕಮಾಂಡ್‌ಗೆ ಹಸಿರು ನಿಶಾನೆ ನೀಡುವಂತೆ ರಾಜ್ಯ ನಾಯಕರು ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟ ಸೇರಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಅದರಲ್ಲಿ ಮುಖ್ಯವಾಗಿ ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್‌, ಮಾಜಿ ಸಚಿವ ಬಿ. ನಾಗೇಂದ್ರ ಮುಂಚೂಣಿಯಲ್ಲಿದ್ದಾರೆ. ಹರಿಪ್ರಸಾದ್‌ಗೆ ಈ ಹಿಂದೆಯೇ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಅವಕಾಶ ವಂಚಿತರಾಗಿದ್ದು, ಈ ಬಗೆಗೆ ಅಸಮಾಧಾನವನ್ನು ಅವರು ಹಲವು ರೂಪದಲ್ಲಿ ಹೊರಹಾಕಿದ್ದಾರೆ. ಅನಂತರ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣ, ವಾಲ್ಮೀಕಿ ಹಗರಣದ ಆರೋಪಗಳು ಕೇಳಿಬಂದ ಅನಂತರ ನಡೆದ ಬೆಳವಣಿಗಳಿಂದ ಸಿಎಂ ಸಿದ್ದರಾಮಯ್ಯ ಹರಿಪ್ರಸಾದ್‌ ಮತ್ತೆ ಹತ್ತಿರವಾದರು. ಈಗ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಅವಕಾಶ ಇದೆ ಎನ್ನಲಾಗುತ್ತಿದೆ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ಸ್ವತಃ ಸಿಎಂ ಸಂಡೂರು ಉಪಚುನಾವಣೆ ಪ್ರಚಾರದ ವೇಳೆ ಹೇಳಿದ್ದರು.
ಬೆಳಗಾವಿಯ ಆಸಿಫ್ ಸೇಠ, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಲಕ್ಷ್ಮಣ ಸವದಿ, ಆನೇಕಲ್‌ ಶಿವಣ್ಣ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಜತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌, ಸಿಎಂ ಹಣಕಾಸು ಸಲಹೆಗಾರ ಬಸವರಾಜ ರಾಯರೆಡ್ಡಿ ಸಹಿತ ಹಲವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ವಿವಿಧ ಮಾನದಂಡಗಳ ಆಧಾರದಲ್ಲಿ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ.

ಹೊಸಬರ ಸೇರ್ಪಡೆಗಾಗಿ ಈಗಾಗಲೇ ಇರುವ ಕೆಲವರನ್ನು ಸಂಪುಟದಿಂದ ಕೈಬಿಡುವ ಆಲೋಚನೆಯೂ ಇದೆ. ಕೆಲವರು ಹೊಂದಿರುವ ಖಾತೆಗಳು ಪ್ರಮುಖವಾಗಿವೆ. ಆದರೆ ಅವುಗಳ ನಿರ್ವಹಣೆ ಅತ್ಯಂತ ಕಳಪೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಅವರ ಕಾರ್ಯವೈಖರಿ ತೃಪ್ತಿಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಂಥವರನ್ನು ಕೈಬಿಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಈಗಲೇ ಸಿದ್ಧತೆ ಆರಂಭಿಸಿದ್ದು ಕ್ರಿಯಾಶೀಲರಿಗೆ ಸಚಿವ ಸ್ಥಾನ ಸಿಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ಬಿ.ಕೆ. ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ
ಬಿ. ನಾಗೇಂದ್ರ, ಶಾಸಕ ಬಳ್ಳಾರಿ ಗ್ರಾಮೀಣ (ಮಾಜಿ ಸಚಿವ)
ನರೇಂದ್ರಸ್ವಾಮಿ, ಶಾಸಕ, ಮಳವಳ್ಳಿ
ಆಸಿಫ್ ಸೇಠ್ , ಶಾಸಕ ಬೆಳಗಾವಿ
ವಿನಯ ಕುಲಕರ್ಣಿ, ಶಾಸಕ, ಧಾರವಾಡ
ಲಕ್ಷ್ಮಣ ಸವದಿ, ಶಾಸಕ, ಅಥಣಿ
ಆನೇಕಲ್‌ ಶಿವಣ್ಣ, ಶಾಸಕ, ಆನೇಕಲ್‌
ರುದ್ರಪ್ಪ ಲಮಾಣಿ, ಶಾಸಕ, ಹಾವೇರಿ (ವಿಧಾನಸಭಾ ಉಪಾಧ್ಯಕ್ಷ )
ಬಿ.ಕೆ. ಸಂಗಮೇಶ್ವರ, ಶಾಸಕ, ಭದ್ರಾವತಿ
ಡಾ.ಅಜಯ್‌ ಸಿಂಗ್‌, ಜೇವರ್ಗಿ (ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ)
ಬಸವರಾಜ ರಾಯರೆಡ್ಡಿ, ಶಾಸಕ, ಯಲಬುರ್ಗಾ (ಸಿಎಂ ಹಣಕಾಸು ಸಲಹೆಗಾರ)
ಅಶೋಕ ರೈ, ಪುತ್ತೂರು
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ