Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಆರ್ ಸಿಬಿ ಗೆಲುವಿಗೆ ಕಲ್ಲೋಳಿ ಯುವಕರಿಂದ ದೀರ್ಘ ದಂಡ ನಮಸ್ಕಾರ

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಯುವಕರು ಆರ್ ಸಿ ಬಿ ಗೆಲುವು ಸಾಧಿಸಬೇಕೆಂದು ಹನುಮಂತ ದೇವರಿಗೆ ವಿಶೇಷ ಪೂಜೆ ಮಾಡಿಸಿ, ಹರಕೆ ಹೊತ್ತಿದ್ದರು. ನಂತರ ಗೆಲುವಿನ ಬಳಿಕ 1 ಕಿಮೀ ಅಂತರದಿಂದ ಬಸ್ತಿಗಲ್ಲಿ ಯುವಕರು ಯಲ್ಲಮ್ಮತಾಯಿ ಮಂದಿರದಿಂದ ಮಾರುತಿದೇವರ ಮಂದಿರವರೆಗೆ ರಾತ್ರಿ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕಿ ದೇವರಿಗೆ ಹರಕೆ ತೀರಿಸಿ, ವಿಜಯೋತ್ಸವ ಆಚರಿಸಿದರು.



ಸಮ್ರದ್ಧ ಗಿರೆಣ್ಣವರ ಮಾತನಾಡಿ, ಶಾಲಾ ದಿನಗಳಿಂದ ಕ್ರಿಕೆಟ್ ಆಡುತ್ತಿದ್ದೇವೆ. ಈಗ ಪರೀಕ್ಷೆ ಮುಗಿಸಿ ಬಂದ ನಂತರ ದಿನಂಪ್ರತಿ ನಾವು ಕ್ರಿಕೆಟ್ ಆಡುತ್ತೇವೆ. ಆರ್ ಸಿಬಿ ಈ ಬಾರಿ ಗೆಲುವು ಕಾಣಬೇಕು ಎಂಬುದು ನಮ್ಮ ಕನಸಾಗಿತ್ತು. ಅದಕ್ಕೆ ನಮ್ಮ ಪಟ್ಟಣದ ಯುವಕರು ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿ ಜಾಗೃತ ಹನುಮಂತ ದೇವರ ಮೊರೆ ಹೋದರು. ಅದರಂತೆ ದೇವರು ಗೆಲುವು ಕೊಟ್ಟಿದ್ದಾನೆ. ಅದಕ್ಕೆ ಹರಕೆ ತೀರಿಸಲಾಯಿತು ಎಂದು ಹೇಳಿದರು.

ಪ್ರತಿಯೊಬ್ಬರಲ್ಲಿ ನಾಡು ಮತ್ತು ನುಡಿಯ ಬಗ್ಗೆ ಅಭಿಮಾನ ಸದಾ ಜಾಗೃತವಾಗಿರಬೇಕು. ಜೊತೆಗೆ ಕ್ರೀಡಾಭಿಮಾನ ತುಂಬಿ ತುಳುಕುತ್ತಿರಬೇಕು ಎಂದು ಅವರು ಹೇಳಿದರು.

ಬೆಂಗಳೂರು ತಂಡ ಗೆಲುವು ಸಾಧಿಸಿರುವುದು ಸಣ್ಣ ಮಾತೇನಲ್ಲ. ಅತೀ ಹೆಚ್ಚು ಸಂಖ್ಯೆಯ ಅಭಿಮಾನಿಗಳು ಇರುವುದು ಬೆಂಗಳೂರು ತಂಡಕ್ಕೆ ಎನ್ನುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ. ಬೆಂಗಳೂರು ಆಟಗಾರರ ಸ್ಪೂರ್ತಿ ಇಂದಿನ ಯುವಕರಿಗೆ ಆದರ್ಶವಾಗಬೇಕು ಎಂದು ಹೇಳಿದರು.

ದೀರ್ಘ ದಂಡ ನಮಸ್ಕಾರವನ್ನು ಸಮ್ರದ್ಧ ಗಿರೆಣ್ಣವರ, ವಿಠ್ಠಲ ಕಂಕಣವಾಡಿ, ಮಲ್ಲಪ್ಪ ಕರಗಾಂವಿ ಹಾಕಿದರು. ಇವರಿಗೆ ಹತ್ತಾರು ಯುವಕರು ಸಾಥ್ ನೀಡಿದರು.

ಶಿವಾನಂದ ದಬಾಡಿ, ಪ್ರಕಾಶ ಪತ್ತಾರ, ಶಿವಾನಂದ ಪೂಜೇರಿ, ಮಂಜುನಾಥ ಕಂಕಣವಾಡಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ