Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಾಹಿತಿ ಬಿ.ಎಸ್.ಗವಿಮಠರಿಗೆ ತುಲಾಭಾರ

 

ಬೆಳಗಾವಿ :
75 ವಸಂತಗಳನ್ನು ಪೂರ್ಣಗೊಳಿಸಿ 76 ಕ್ಕೆ ಪಾದಾರ್ಪಣೆ ಮಾಡಿದ ಬೆಳಗಾವಿಯ ಹಿರಿಯ ಸಾಹಿತಿ ಪ್ರಾ.ಬಿ.ಎಸ್.ಗವಿಮಠರಿಗೆ ಅವರ ಸ್ವಗೃಹದಲ್ಲಿ ದವಸಧಾನ್ಯಗಳ ತುಲಾಭಾರವನ್ನು ನೆರವೇರಿಸಲಾಯಿತು.
ಕನ್ನಡ ಸಾರಸ್ವತ ಲೋಕಕ್ಕೆ 40 ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ನೀಡಿರುವ ಬಿ.ಎಸ್.ಗವಿಮಠರು ಬೆಳಗಾವಿಯ ಸಾಂಸ್ಕೃತಿಕ ವಲಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಮಾತ್ರವಲ್ಲದೇ ಕೆಎಲ್‌ಇ ಸಂಸ್ಥೆಯ ಇತಿಹಾಸಕಾರರಾಗಿ, ಕೆಎಲ್‌ಇ ಪ್ರಸಾರಾಂಗದ ರೂವಾರಿಗಳಾಗಿ ಅಹರ್ನಿಶಿಯಾಗಿ ಶ್ರಮಿಸಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಮಾಜಿ ಕಾರ್ಯದರ್ಶಿ ಡಾ.ಎಫ್.ವ್ಹಿ.ಮಾನ್ವಿ
ಹೇಳಿದರು.
ಹಿರಿಯ ಸಾಹಿತಿ ಶಾಂತಾದೇವಿ ಹುಲೆಪ್ಪನವರಮಠ ಮಾತನಾಡಿ, ಗವಿಮಠರು ಒಬ್ಬ ಆದರ್ಶ ಶಿಕ್ಷಕರಾಗಿ ಅಪಾರ ಶಿಷ್ಯರಿಗೆ ಬೆಳಕಾದವರು. ಮಾತ್ರವಲ್ಲದೆ ತಮ್ಮ ಹರಿತವಾದ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯವನ್ನು ಪೋಷಿಸಿ ಬೆಳೆಸಿದವರು. ಬೆಳಗಾವಿ ಕನ್ನಡ-ಕನ್ನಡಿಗ, ಕೆಎಲ್‌ಇ ನೂರರ ಸಿರಿಬೆಳಕು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿವೆ. ಜೀವನ ಚರಿತ್ರೆ, ಕವನ, ವ್ಯಕ್ತಿ ಚಿತ್ರಣಗಳನ್ನು ಅತ್ಯಂತ ಅದ್ಭುತವಾಗಿ ಕಟ್ಟಿಕೊಟ್ಟ ವ್ಯಕ್ತಿ ಮತ್ತೊಬ್ಬರಿಲ್ಲ. ಡಾ.ಪ್ರಭಾಕರ ಕೋರೆಯವರ ಕುರಿತು ಬಿ.ಎಸ್.ಗವಿಮಠರಿಗೆ ವಿಶೇಷ ಒಲವು. ಅವರ ಕುರಿತು ಐದು ಮಹತ್ವದ ಕೃತಿಗಳನ್ನು ರಚಿಸಿದವರು ಎಂದು ಹೇಳಿದರು.

ಡಾ.ಬಸವರಾಜ ಜಗಜಂಪಿ, ಡಾ.ಗುರುದೇವಿ ಹುಲೆಪ್ಪನವರಮಠ, ಏಣಗಿ ಸುಭಾಷ, ಬಸವರಾಜ ಗಾರ್ಗಿ, ಸುಗಂಧಾ ಗವಿಮಠ, ಈಶ್ವರ ಸ್ವಾಮಿ, ರಾಜೇಶ್ವರ ಸ್ವಾಮಿ, ರಾಮಯ್ಯ ಹಿರೇಮಠ, ಗೀತಾ ಹಿರೇಮಠ, ವಿಜಯಶಂಕರ ಅರಳಿಮಟ್ಟಿ, ನೀತಾ ಅರಳಿಮಟ್ಟಿ, ಡಾ.ಮಹೇಶ ಗುರನಗೌಡರ ಮೊದಲಾದವರು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ