Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

 

ಬೆಂಗಳೂರು :
ರಾಜ್ಯ ಸರಕಾರಿ ಶಾಲೆಗಳಿಗೆ ದಸರಾ ರಜೆಯನ್ನು ಬದಲಾವಣೆ ಮಾಡಲು ಈವರೆಗೂ ಅವಕಾಶ ಇರಲಿಲ್ಲ. ಇದೀಗ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಹೊರಡಿಸಿರುವ ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಮಾರ್ಗಸೂಚಿಯಲ್ಲಿ ಕ್ರಿಸ್ಮಸ್‌ ಅವಧಿಗೆ ಮಧ್ಯಾಂತರ ರಜೆ ನೀಡಲು ಮನವಿ ಸಲ್ಲಿಸುವ ಶಾಲೆಗಳಿಗೆ ರಜೆ ಮಂಜೂರಾತಿ ಸಿಗಲಿದೆ.

ಕ್ರೈಸ್ತ ಸಮುದಾಯದ ಆಡಳಿತ ಮಂಡಳಿಯ ಸಂಸ್ಥೆಗಳಿಗೆ ದಸರಾ ರಜೆಯ ಬದಲಿಗೆ ಕ್ರಿಸ್ಮಸ್‌ ಸಂದರ್ಭ ದಲ್ಲಿ ರಜೆ ನೀಡಲು ಅವಕಾಶ ಹಿಂದಿನಿಂದಲೂ ಇದೆ ಮತ್ತು ಈ ಸಂಬಂಧ ಸರಕಾರದ ಆದೇಶವೂ ಇದೆ. ಹೀಗಾಗಿಯೇ ಅನೇಕ ಕ್ರೈಸ್ತರ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ತರಗತಿಗಳಿಗೆ ಸಮಸ್ಯೆಯಾಗದಂತೆ ದಸರಾ ಮಧ್ಯಾಂತರ ರಜೆಯನ್ನು ಕ್ರಿಸ್ಮಸ್‌ ಸಂದರ್ಭದಲ್ಲಿ ನೀಡಿ, ದಸರಾ ಅವಧಿ ಯಲ್ಲಿ ತರಗತಿಗಳನ್ನು ನಡೆಸುತ್ತಾರೆ. ಇನ್ನು ಕೆಲವು ಕ್ರೈಸ್ತ ಸಂಸ್ಥೆಗಳು ಮಧ್ಯಾಂತರ ರಜೆಯಲ್ಲಿ ಎರಡು ಭಾಗ ಮಾಡಿ ಸ್ವಲ್ಪದಿನ ದಸರಾ ಅವಧಿಯಲ್ಲಿ ಇನ್ನುಳಿದ ದಿನವನ್ನು ಕ್ರಿಸ್ಮಸ್‌ ಅವಧಿಯಲ್ಲಿ ನೀಡುತ್ತವೆ.

2024-25ನೇ ಸಾಲಿನ ದಸರಾ ರಜೆ (ಮಧ್ಯಾಂತರ ರಜೆ) ಅಕ್ಟೋಬರ್‌ 3ರಿಂದ ಆರಂಭಗೊಂಡು ಅಕ್ಟೋಬರ್‌ 20ರ ವರೆಗೆ (18) ದಿನ ಇರಲಿದೆ. ಈ ಅವಧಿಯಲ್ಲಿ ಕ್ರಿಸ್ಮಸ್‌ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಿದಲ್ಲಿ, ಈ ಬಗ್ಗೆ ಆಯಾ ಉಪನಿರ್ದೇಶಕರು ಪರಿಶೀಲಿಸಿ ನಿರ್ಧರಿಸಲಿದ್ದಾರೆ. ಒಂದೊಮ್ಮೆ ಕ್ರಿಸ್ಮಸ್‌ ಅವಧಿಯಲ್ಲಿ ಮಧ್ಯಾಂತರ ರಜೆ ನೀಡಲು ಅವಕಾಶ ಕಲ್ಪಿಸಿದರೆ, ಅಕ್ಟೋಬರ್‌ನ ಮಧ್ಯಾಂತರ ರಜೆಯಲ್ಲಿ ಕಡಿತಗೊಳಿಸಿ ತರಗತಿಗಳನ್ನು ಸರಿದೂಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬ ನಿರ್ದೇಶನವನ್ನು ಇಲಾಖೆಯಿಂದ ಉಪನಿರ್ದೇಶಕರಿಗೆ ನೀಡಲಾಗಿದೆ.
ಈವರೆಗೂ ರಾಜ್ಯ ಪಠ್ಯಕ್ರಮದ ಸರಕಾರಿ ಶಾಲೆಗಳಿಗೆ ದಸರಾ ಅವಧಿಯಲ್ಲಿಯೇ ಮಧ್ಯಾಂತರ ರಜೆ ನೀಡಲಾಗುತ್ತಿತ್ತು. ಆದರೆ ಕೆಲವು ಖಾಸಗಿ/ಅನುದಾನಿತ ಶಾಲಾಡಳಿತ ಮಂಡಳಿಗಳು ಅಗತ್ಯ ಬೇಡಿಕೆ ಸಲ್ಲಿಸಿ, ಮಧ್ಯಾಂತರ ರಜೆಯನ್ನು ಕ್ರಿಸ್ಮಸ್‌ ಅವಧಿಯಲ್ಲಿ ಪಡೆಯುತ್ತಿವೆ. ಸರಕಾರಿ ಶಾಲೆಯ ಮಕ್ಕಳಿಗೆ ಕ್ರಿಸ್ಮಸ್‌ ದಿನದಂದು ಮಾತ್ರ ರಜೆ ನೀಡಲಾಗುತ್ತದೆ. ಉಳಿದಂತೆ ಮಧ್ಯಾಂತರ ರಜೆ ದಸರಾ ಅವಧಿಯಲ್ಲಿ ಇರುತ್ತದೆ. ಈ ಬಾರಿ ಏನಾಗಲಿದೆ ಎಂಬ ಮಾಹಿತಿ ಇಲ್ಲ. ಸರಕಾರಿ ಶಾಲೆಗಳಿಗೆ ಕ್ರಿಸ್ಮಸ್‌ ಅವಧಿಯಲ್ಲಿ ಮಧ್ಯಾಂತರ ರಜೆಗೆ ಮನವಿ ಸಲ್ಲಿಸುವ ಸಾಧ್ಯತೆ ತೀರ ಕಡಿಮೆಯಿರುತ್ತದೆ. ಕಾರಣ ಎಸ್‌ಡಿಎಂಸಿಯಿಂದ ನಿರ್ಧರಿಸಿ, ಪಾಲಕ, ಪೋಷಕರ ಅನುಮತಿ ಪಡೆದು ಮನವಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಬಹುತೇಕ ಶಾಲೆಗೆಳು ಈ ಹಿಂದಿನ ಪದ್ಧತಿಯನ್ನು ಬದಲಿಸುವುದು ಕಷ್ಟಸಾಧ್ಯ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ