Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಳಕಟ್ಟಿ ಭವನದಲ್ಲಿ ಕಿನ್ನರಿ ಬೊಮ್ಮಯ್ಯ ಜಯಂತಿ ನಿಮಿತ್ತ ಉಪನ್ಯಾಸ

 

ಬೆಳಗಾವಿ : ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ರವಿವಾರದ ಬೆಳಗಿನ ಸತ್ಸಂಗ ಕಾರ್ಯಕ್ರಮದಲ್ಲಿ ಅನುಭಾವಿ ಶರಣ ಕಿನ್ನರಿ ಬೊಮ್ಮಯ್ಯನವರ ಜೀವನ ಮತ್ತು ವಚನ ಸಂದೇಶ ಕುರಿತಂತೆ ಉಪನ್ಯಾಸ ಏರ್ಪಡಿಸಲಾಗಿತ್ತು. ಪ್ರೌಢಶಾಲೆಯ ಶಿಕ್ಷಕಿಯರಾಗಿ ಸೇವೆಯಲ್ಲಿರುವ ಕಮಲಾ ಗಣಾಚಾರಿ ಕಿನ್ನರಿ ಬೊಮ್ಮಯ್ಯನವರ ಕುರಿತು ಸುದೀರ್ಘವಾಗಿ ಮಾತನಾಡಿದರು. ಬಸವಣ್ಣನವರಿಂದ ಪ್ರೇರಿತರಾಗಿ ಆಂಧ್ರದ ಪುದೂರಿನಿಂದ ಬಂದು ಕಲ್ಯಾಣದಲ್ಲಿ ನೆಲೆನಿಂತು , ಅಕ್ಕಸಾಲಿಗ ವೃತ್ತಿಯೊಂದಿಗೆ ಕಿನ್ನರಿ ನುಡಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರು, ತ್ರಿಪುರಾಂತಕ ದೇವ ಎನ್ನುವ ಅಂಕಿತದೊಂದಿಗೆ ಒಟ್ಟು ಹದಿನೆಂಟು ವಚನಗಳನ್ನು ರಚಿಸಿದವರು. ಕಲ್ಯಾಣ ಕ್ರಾಂತಿಯ ನಂತರ ಚನ್ನಬಸವಣ್ಣನವರೊಂದಿಗೆ ಉಳವಿಗೆ ಹೋಗಿ ಬಿಜ್ಜಳನ ಸೈನ್ಯವನ್ನು ಚದುರಿಸಲು ಉಪಾಯ ಮಾಡಿದ್ದು, ಅಕ್ಕಮಹಾದೇವಿಯು ಕಲ್ಯಾಣಕ್ಕೆ ಬಂದ ಪ್ರಸಂಗದಲ್ಲಿ ಅಕ್ಕನನ್ನು ಪರೀಕ್ಷಿಸಿದ್ದು, ಹೀಗೆ ಶೂನ್ಯ ಸಂಪಾದನೆಯಲ್ಲಿ ಉಲ್ಲೇಖಿತ ಹಲವಾರು ಸನ್ನಿವೇಶಗಳಲ್ಲಿ ಕಿನ್ನರಿ ಬೊಮ್ಮಯ್ಯಗಳ ಪಾತ್ರ ಕುರಿತಂತೆ ಉಪನ್ಯಾಸದಲ್ಲಿ ಸ್ಮರಿಸಿದರು. ಕಿನ್ನರಿ ಬೊಮ್ಮಯ್ಯನವರ ಬದುಕಿಗೆ ಸಂಬಂಧಿತ ಕತೆಗಳನ್ನು ಹೇಳುತ್ತ, ನಿಜಗುಣ ಶಿವಯೋಗಿಗಳು, ಪುರಂದರ ದಾಸರ ಪದಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿದ್ದು ಉಪನ್ಯಾಸದ ವಿಶೇಷತೆ.. ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ ಪ್ರಾಥ೯ನೆ ನಡೆಸಿಕೊಟ್ಟರು, ಬಿ.ಪಿ.ಜೇವಣಿ, ಜಯಶ್ರೀ ಚಾವಲಗಿ,ಅನಸೂಯಾ ಬಶೆಟ್ಟಿ,ಆನ೦ದ ಕಕಿ೯,ವಿ.ಕೆ.ಪಾಟೀಲ ವಚನಗಳನ್ನು ಪ್ರಸ್ತುತ ಪಡಿಸಿದರು ಸ೦ಗಮೇಶ ಅರಳಿ ನಿರೂಪಿಸಿದರು, ಹಿರಿಯ ಶರಣೆ ಚ೦ಪಾವತಿ ತ೦ಗಡೆ ದಾಸೋಹ ಸೇವೆ ಸಲ್ಲಿಸಿದರು, ಶಂಕರ ಗುಡಸ ಅವರು ಉಪನ್ಯಾಸ ಕುರಿತಂತೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದರು. ಸದಾಶಿವ ದೇವರಮನಿ ಈ ಸಂದರ್ಭದಲ್ಲಿ ಶರಣ ಯುಗದ ಕೆಲವು ಘಟನೆಗಳನ್ನು ನೆನಪಿಸಿಕೊಂಡರು. ಬಸವರಾಜ ಬಿಜ್ಜರಗಿ, ವಿದ್ಯಾ ಕಕಿ೯, ಮಹಾದೇವಿ ತಿಗಡಿ, ಮಂಗಳಾ ಕಾಕತಿಕರ್, ಅಡವೇಶ ಇಟಗಿ, ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ